ನವದೆಹಲಿ : ತಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಯಾರು ನೋಡುವುದು ಇಷ್ಟವಿಲ್ಲವೋ ಅವರಿಂದ ನಮ್ಮ ಸ್ಟೇಟಸ್ ನೋಡದಂತೆ  ಮಾಡಲು ವಾಟ್ಸಾಪ್ (Whatsapp) ಬಳಕೆದಾರರಿಗೆ ಅವಕಾಶ ನೀಡುತ್ತದೆ. ವರದಿಯ ಪ್ರಕಾರ, ಬಳಕೆದಾರರ ಪ್ರೊಫೈಲ್ ಅನ್ನು ಯಾರು ನೋಡಬಹುದು, ಯಾರು ನೋಡಬಾರದು ಎನ್ನುವುದನ್ನು ನಿಯಂತ್ರಿಸಲು ಹೊಸ ಗೌಪ್ಯತೆ ಪರಿಕರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುವುದನ್ನು ಡಬ್ಲ್ಯೂಬೀಟಾ ಇನ್ಫೋನಲ್ಲಿ ಹೇಳಲಾಗಿದೆ. ಇದೀಗ ನಿಮ್ಮ 'ಲಾಸ್ಟ್ ಸೀನ್', 'ಪ್ರೊಫೈಲ್ ಪಿಕ್ಚರ್' ಮತ್ತು 'ಅಬೌಟ್' ಅನ್ನು ಎಲ್ಲರೂ ನೋಡಬಹುದು, ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರು ನೋಡಬಹುದು ಅಥವಾ ಯಾರೂ ನೋಡಬಾರದು ಎನ್ನುವುದಕ್ಕೆ ಯಾವುದೇ ಸೂಕ್ತ ಆಯ್ಕೆಗಳಿಲ್ಲ. 


COMMERCIAL BREAK
SCROLL TO CONTINUE READING

ಸದ್ಯಕ್ಕೆ  ಟೆಸ್ಟಿಂಗ್ ನಡೆಸುತ್ತಿರುವ  Whatsapp :
ವಾಟ್ಸಾಪ್ ಈಗ ನಿರ್ದಿಷ್ಟ ಸಂಪರ್ಕಗಳು ನಿಮ್ಮ ಅಕೌಂಟ್ ಅನ್ನು ನೋಡದಿರುವಂತೆ ಮಾಡುವ ಸಾಮರ್ಥ್ಯದ ಟೆಸ್ಟಿಂಗ್ ನಡೆಯುತ್ತಿದೆ. ಈ ಆಯ್ಕೆಯೊಂದಿಗೆ, ಬಳಕೆದಾರರು ತಮ್ಮ 'ಲಾಸ್ಟ್ ಸೀನ್' (Last seen) ಸಮಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸದೆ ಕೆಲವೇ ಜನರಿಂದ ಅದನ್ನು ಮರೆಮಾಚಬಹುದಾಗಿದೆ. 


ಇದನ್ನೂ ಓದಿ : Hero Splendor ಪ್ರಿಯರಿಗೆ ಸಂತಸದ ಸುದ್ದಿ, ಇನ್ಮುಂದೆ ಪೆಟ್ರೋಲ್ ಇಲ್ಲದೆಯೇ Splendor ದೌಡಾಯಿಸಿ


ಲಾಸ್ಟ ಸೀನ್ ಬಿಟ್ಟರೆ ಪ್ರೊಫೈಲ್ ಫೋಟೋ ನೋಡಲು ಸಾಧ್ಯವಾಗುವುದಿಲ್ಲ : 
ಈ ಆಯ್ಕೆಯು, ಗೌಪ್ಯತೆಯ ಮೇಲೆ ಈ ಹಿಂದೆ ನೀಡಿದ್ದಕ್ಕಿಂತ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ. ಪ್ರೊಫೈಲ್ ಫೋಟೋಗಳು (Profile photo) ಮತ್ತು ಬಯೋಸ್ ಅನ್ನು ಕೂಡಾ ಇದು ಸಪೋರ್ಟ್ ಮಾಡುತ್ತದೆ. 'ಲಾಸ್ಟ್ ಸೀನ್' ಅನ್ನು ನಿಷ್ಕ್ರಿಯಗೊಳಿಸುವುದು ದ್ವಿಮುಖ ಆಯ್ಕೆಯಾಗಿ ಮುಂದುವರಿಯುತ್ತದೆ. ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಜನರ ಗುಂಪಿನಿಂದ ಅದನ್ನು ಮರೆಮಾಡಿದರೆ, WhatsApp ಪ್ರತಿಯಾಗಿ ಅವರ ಮಾಹಿತಿಯನ್ನು ಮರೆಮಾಡುತ್ತದೆ.


ಈ ವೈಶಿಷ್ಟ್ಯವನ್ನು ಐಒಎಸ್‌ನಲ್ಲಿ ನೋಡಲಾಗಿದ್ದರೂ, ಇದು ಪ್ರೈಮ್‌ಟೈಮ್‌ಗೆ ಸಿದ್ಧವಾದಾಗಲೆಲ್ಲಾ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ (Smartphone) ವಿಸ್ತರಿಸಲ್ಪಡುತ್ತದೆ. ಮುಂಚೆ, ಜನಪ್ರಿಯ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ವ್ಯೂ ವನ್ಸ್ ಮತ್ತು ಶಾಶ್ವತವಾಗಿ ಕಣ್ಮರೆಯಾಗುವ ಸಂದೇಶಗಳನ್ನು ನೋಡುವ ಕೆಲಸ ಮಾಡುತ್ತಿದೆ. 


ಇದನ್ನೂ ಓದಿ :  ಸೆಪ್ಟಂಬರ್ 9 ಕ್ಕೆ ಬಿಡುಗಡೆಯಾಗಲಿದೆ Realme Pad tablet


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.