ಬೆಂಗಳೂರು: ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಚಂದ್ರನ ದಕ್ಷಿಣ ಧ್ರುವಕ್ಕೆ ಮಿಷನ್ ಕಳುಹಿಸಲು ಸಿದ್ಧತೆ ನಡೆಸಿದೆ. ನಾಸಾದ ಈ ಮಿಷನ್‌ನ ಉದ್ದೇಶವು ವೈಜ್ಞಾನಿಕ ಆವಿಷ್ಕಾರವಾಗಿದೆ. ಆದರೆ ಎಲ್ಲ ದೇಶಗಳೂ ಒಂದರ ಹಿಂದೆ ಒಂದರಂತೆ ಚಂದ್ರನತ್ತ ಮಿಷನ್ ಕಳುಹಿಸುತ್ತಿರುವುದೇಕೆ? ಅಷ್ಟಕ್ಕೂ ಅವರಿಗೆ ಏನು ಬೇಕು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ಹೀಲಿಯಂ -3 ಭೂಮಿಯ ಮೇಲಿನ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದಾಗಿದೆ. ಒಂದು ಕೆಜಿ ಹೀಲಿಯಂ-3 ಬೆಲೆ ಸುಮಾರು 12.5 ಕೋಟಿ ರೂ. ಆದರೆ ಸುಮಾರು 1.1 ಮಿಲಿಯನ್ ಟನ್ ಹೀಲಿಯಂ -3 ಚಂದ್ರನ ಮೇಲೆ ಇದೆ ಎಂಬುದು ವಿಜ್ಞಾನಿಗಳ ಅಂದಾಜು ಮತ್ತು ಅದರ ಹೆಚ್ಚಿನ ಭಾಗವು ದಕ್ಷಿಣ ಧ್ರುವದಲ್ಲಿದೆ.


ಹೀಲಿಯಂ-3 ಎಂದರೇನು?
ಹೀಲಿಯಂ ಅನಿಲದ ಒಂದು ಸ್ಥಿರ ಐಸೊಟೋಪ್ ಹೀಲಿಯಂ-3 ಆಗಿದೆ. ಇದರಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿವೆ. ವಿಜ್ಞಾನಿಗಳ ಪ್ರಕಾರ, ಇದು ಶಕ್ತಿಯ ಪ್ರಮುಖ ಮೂಲ ಸಾಬೀತಾಗಬಹುದು. ವಿಶೇಷವೆಂದರೆ ಹೀಲಿಯಂ-3 ನಿಂದ ಯಾವುದೇ ತ್ಯಾಜ್ಯವಾಗಲೀ ವಿಕಿರಣವಾಗಲೀ ಹೊರಬರುವುದಿಲ್ಲ. ಅಂದರೆ ಇದರಿಂದ ಉತ್ಪತ್ತಿಯಾಗುವ ಶಕ್ತಿಯು ಸಂಪೂರ್ಣ ಶುದ್ಧವಾಗಿರುತ್ತದೆ.


ಕೇವಲ 1 ಗ್ರಾಂ ಹೀಲಿಯಂ-3 ನಿಂದ 165 ಮೆಗಾವ್ಯಾಟ್ ಗಂಟೆಗಳ ವಿದ್ಯುತ್ ಉತ್ಪಾದಿಸಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದಂತಹ ರಾಜ್ಯಕ್ಕೆ ಸುಮಾರು 16 ಗಂಟೆಗಳ ಕಾಲ ವಿದ್ಯುತ್ ಪೂರೈಸಬಹುದಾಗಿದೆ.


ಇದನ್ನೂ ಓದಿ-1000 ಪ್ರಕಾಶವರ್ಷ ದೂರದಲ್ಲಿ ಹುಟ್ಟುತ್ತಿದ್ದಾನೆ ಹೊಸ ಸೂರ್ಯ, ಫೋಟೋ ಕ್ಲಿಕ್ಕಿಸಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್


ಭೂಮಿಯ ಮೇಲೆ ಹೀಲಿಯಂ-3 ಎಲ್ಲಿ ಲಭ್ಯವಿದೆ?
ಭೂಮಿಯ ಮೇಲೆ ಹೀಲಿಯಂ-3 ಎಲ್ಲಿದೆ ಎಂಬುದು ಈಗ ಉದ್ಭವಿಸುವ ಮಹತ್ವದ ಪ್ರಶ್ನೆ, ಇದಕ್ಕಾಗಿಯೇ ಒಂದರ ಮೇಲೊಂದರಂತೆ ಯಾನಗಳನ್ನು ಕಳುಹಿಸಲಾಗುತ್ತಿದೆಯೇ? ಎಂಬುದು ಮತ್ತೊಂದು ಪ್ರಶ್ನೆ.  ಹೀಲಿಯಂ-3 ಭೂಮಿಯ ಮಧ್ಯಭಾಗದಲ್ಲಿ ಅಂದರೆ ಒಳಭಾಗದಲ್ಲಿ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಲ್ಲಿಗೆ ತಲುಪುವುದು ಚಂದ್ರನಿಗೆ ಹೋಗುವುದಕ್ಕಿಂತ ಹೆಚ್ಚು ಕಷ್ಟ ಎಂಬುದು ಅವರ ಅಭಿಮತ. ಭೂಮಿಯ ಮೇಲಿನ ಅದರ ಪ್ರಮಾಣ ಸೀಮಿತವಾಗಿದೆ. ಕೆಲವು ಸಮಯದ ಹಿಂದೆ, ಯುಎಸ್ ಜಿಯಾಗ್ರಫಿಕಲ್ ಯೂನಿಯನ್ ಜರ್ನಲ್ನಲ್ಲಿ ಒಂದು ವರದಿಯನ್ನು ಪ್ರಕಟಿಸಲಾಗಿಟ್ಟು, ಅದರ ಪ್ರಕಾರ ಹೀಲಿಯಂ -3 ನಿರಂತರವಾಗಿ ಭೂಮಿಯ ಮಧ್ಯಭಾಗದಿಂದ ಸೋರಿಕೆಯಾಗುತ್ತಿದೆ ಎನ್ನಲಾಗುತ್ತಿದೆ. 


ಇದನ್ನೂ ಓದಿ-ಕರೆಂಟ್ ಬಿಲ್ ಮರೆತ್ಹೋಗಿ, ಇನ್ಮುಂದೆ ಮನೆಗೆ ಉಚಿತವಾಗಿ ವಿದ್ಯುತ್ ಸಿಗಲಿದೆ, ಇಲ್ಲಿದೆ ಟ್ರಿಕ್!


ಆದರೆ ಆ ಸ್ಥಳ ಎಲ್ಲಿದೆ ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ಪ್ರತಿ ವರ್ಷ ಸುಮಾರು 2 ಕೆಜಿ ಹೀಲಿಯಂ-3 ಭೂಮಿಯಿಂದ ಸೋರಿಕೆಯಾಗುತ್ತಿದೆ. ಆದಾಗ್ಯೂ, ಬಿಗ್ ಬ್ಯಾಂಗ್ ನಂತರ ಹೆಚ್ಚಿನ ಹೀಲಿಯಂ-3 ನಷ್ಟವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ 4.56 ಶತಕೋಟಿ ವರ್ಷಗಳ ನಂತರ ಭೂಮಿಯ ಮಧ್ಯಭಾಗದಿಂದ ಹೀಲಿಯಂ-3 ಏಕೆ ಸೋರಿಕೆಯಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ