Birth Of New Sun: ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಮಾನವನ ಕಣ್ಣುಗಳಿಗೆ ಬ್ರಹ್ಮಾಂಡದಲ್ಲಿ ದೂರದವರೆಗೆ ನೋಡುವ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇದುವರೆಗೆ ಮಾನವ ಕಂಡುಹಿಡಿದ ಅತ್ಯಂತ ಶಕ್ತಿಶಾಲಿ ದೂರದರ್ಶಕವಾಗಿದೆ. ಈಗ ಈ ಸೂಪರ್ ಟೆಲಿಸ್ಕೋಪ್ ನಕ್ಷತ್ರ ಅಥವಾ ಸೂರ್ಯನಂತಹ ಆಕಾಶಕಾಯದ ಜನ್ಮ ಪ್ರಕ್ರಿಯೆಯನ್ನು ಫೋಟೋದಲ್ಲಿ ಸೆರೆಹಿಡಿದಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಸೂರ್ಯನು ಹುಟ್ಟಿದ ಸಮಯದಲ್ಲಿ ಹೇಗಿದ್ದಿರಬಹುದು ಎಂಬುದನ್ನು ಬಹಿರಂಗಪಡಿಸುವ ಅದ್ಭುತ ವಿದ್ಯಮಾನ ಇದಾಗಿದೆ. ದೂರದರ್ಶಕದಿಂದ ಚಿತ್ರವನ್ನು ಸೆರೆಹಿಡಿಯಲಾದ ನಕ್ಷತ್ರವು ಇನ್ನೂ ಅದರ ಆರಂಭಿಕ ಹಂತದಲ್ಲಿದೆ ಮತ್ತು ಬೆಳಕು ಅದರ ಎರಡೂ ತುದಿಗಳಿಂದ ಅಂದರೆ ಧ್ರುವಗಳಿಂದ ಶಬ್ದಾತೀತ ವೇಗದಲ್ಲಿ ಸಿಡಿಯುವುದನ್ನು ಗಮನಿಸಬಹುದು.
ನಾಸಾ ಈ ನಕ್ಷತ್ರದ ಫೋಟೋವನ್ನು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಹೊಸದಾಗಿ ರೂಪುಗೊಂಡ ನಕ್ಷತ್ರದ ಸುತ್ತಲೂ ಕಂಡುಬರುವ ಬೆಳಕನ್ನು ಹರ್ಬಿಗ್-ಹರೋ ವಸ್ತುಗಳು ಎಂದು ಕರೆಯಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಈ ನಕ್ಷತ್ರವು ಭೂಮಿಯಿಂದ 1000 ಪ್ದ್ರಕಾಶವರ್ಷಗಳ ದೂರದಲ್ಲಿದೆ. ಪ್ರಸ್ತುತ ಜನಿಸುತ್ತಿರುವ ಈ ನಕ್ಷತ್ರಪುಂಜವನ್ನು ಪರ್ಸಿಯಸ್ ನಕ್ಷತ್ರಪುಂಜ ಎಂದು ಕರೆಯಲಾಗುತ್ತಿದೆ. ನಾಸಾ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ಅದ್ಭುತ ಫೋಟೋವನ್ನು ಒಮ್ಮೆ ನೀವೂ ನೋಡಿ-
ಚಿತ್ರವನ್ನು ಹಂಚಿಕೊಂಡ ನಾಸಾ, "ನಾವು ಸೂರ್ಯನ ಜನನದ ಸಮಯದ ಫೋಟೋವನ್ನು ತೆಗೆದಿದ್ದರೆ, ಅದು ಈ ರೀತಿ ಕಾಣುತ್ತಿತ್ತು. @NASAWebb' ಎಂದು ಬರೆದುಕೊಂಡಿದೆ. ಚಿತ್ರದಲ್ಲಿ ಗೋಚರಿಸುತ್ತಿರುವುದು ಹೊಸದಾಗಿ ಹುಟ್ಟಿದ ನಕ್ಷತ್ರವಾಗಿದ್ದು, ಅದರ ಧ್ರುವವಾಗಿದೆ. ಇದು ಸೂಪರ್ ಸಾನಿಕ್ ವೇಗದಲ್ಲಿ ಅಂದರೆ ಶಬ್ದಾತೀತ ವೇಗದಲ್ಲಿ ಅನಿಲವನ್ನು ಭಾಹ್ಯಾಕಾಶಕ್ಕೆ ಚಿಮ್ಮಿಸುತ್ತಿದೆ. ಅದು ಪ್ರಸ್ತುತ ಕೆಲವೇ ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ಅದು ಬೆಳೆದಾಗ ಅದು ನಮ್ಮ ಸೂರ್ಯನಂತೆಯೇ ಇರಲಿದೆ ಎಂದು ನಾಸಾ ಹೇಳಿಕೊಂಡಿದೆ.
ಇದನ್ನೂ ಓದಿ-ಕರೆಂಟ್ ಬಿಲ್ ಮರೆತ್ಹೋಗಿ, ಇನ್ಮುಂದೆ ಮನೆಗೆ ಉಚಿತವಾಗಿ ವಿದ್ಯುತ್ ಸಿಗಲಿದೆ, ಇಲ್ಲಿದೆ ಟ್ರಿಕ್!
ಈ ಪ್ರಕ್ರಿಯೆಯ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ NASA, ಹೊಸದಾಗಿ ಹುಟ್ಟಿದ ನಕ್ಷತ್ರದ ಎರಡೂ ತುದಿಗಳಿಂದ ಅನಿಲದ ಜೆಟ್‌ಗನ್ನು ಚಿಮ್ಮಿಸುತ್ತಿದ್ದು ಮತ್ತು ಬಾಹ್ಯಾಕಾಶದಲ್ಲಿರುವ ಸುತ್ತಮುತ್ತಲಿನ ಅನಿಲ ಮತ್ತು ಧೂಳಿನೊಂದಿಗೆ ಘರ್ಷಿಸಿದಾಗ ಹರ್ಬಿಗ್-ಹಾರೊ ರಚನೆಯಾಗುತ್ತದೆ ಎಂದು ಹೇಳಿದೆ. ಈ ಹೊಸ ನಕ್ಷತ್ರವು ಕೆಲವು ಸಾವಿರ ವರ್ಷಗಳಷ್ಟು ಹಳೆಯದಾದ ಕ್ಲಾಸ್-0 ಪ್ರೋಸ್ಟಾರ್ ಎಂದು ನಾಸಾ ಹೇಳಿದೆ. ಇದರ ತೂಕ ನಮ್ಮ ಸೂರ್ಯನ ತೂಕದ ಶೇ.8 ರಷ್ಟು ಮಾತ್ರ ಇದೆ. ಆದರೆ ಅದು ಕ್ರಮೇಣ ನಮ್ಮ ಸೂರ್ಯನ ಗಾತ್ರವನ್ನು ಪಡೆದುಕೊಳ್ಳಲಿದೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ- ಮನೆಯಲ್ಲಿಯೇ 3D ಚಿತ್ರಗಳನ್ನು ವೀಕ್ಷಿಸಲು ಮಾರುಕಟ್ಟೆಯಲ್ಲಿ ಇದಕ್ಕಿಂತ ಅಗ್ಗದ ಉಪಾಯ ಮತ್ತೊಂದಿಲ್ಲ, ಟ್ರೈ ಮಾಡಿ ನೋಡಿ!
ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು 2021 ರಲ್ಲಿ ಪ್ರಾರಂಭಿಸಲಾಯಿತು. ಇದು 2022 ರಿಂದ ತನ್ನ ಕೆಲಸವನ್ನು ಆರಂಭಿಸಿದ್ದು, ಅದು ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಕಾರ್ಯಾಚರಣೆಗೆ ಬಂದ ನಂತರ, ಜೇಮ್ಸ್ ವೆಬ್ ಟೆಲಿಸ್ಕೋಪ್ ಅನೇಕ ಪೂರ್ವ ಅಸ್ತಿತ್ವದಲ್ಲಿರುವ ಗೆಲಕ್ಸಿಗಳನ್ನು ಪತ್ತೆಹಚ್ಚಿದೆ ಮತ್ತು ಹಲವಾರು ಕಪ್ಪು ಕುಳಿಗಳನ್ನು ಕಂಡುಹಿಡಿದಿದೆ. ಇದು ಹಬಲ್ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ಹೇಳಲಾಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ