ಇನ್ಮುಂದೆ ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಉಚಿತ ಬಳಸುವ ಹಾಗಿಲ್ಲ,2024ರಲ್ಲಿ ಅದಕ್ಕೆ ಹಣ ಪಾವತಿಸಬೇಕು!
WhatsApp Paid Feature: ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಪ್ರತಿದಿನ ವಾಟ್ಸ್ ಆಪ್ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದಲ್ಲದೆ, ವಾಟ್ಸ್ ಆಪ್ ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು ಇತರ ಪ್ರಮುಖ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಆದರೆ ಇದುವರೆಗೆ, ಬಳಕೆದಾರರು ವಾಟ್ಸಾಪ್ನ ಒಂದು ವೈಶಿಷ್ಟ್ಯವನ್ನು ಉಚಿತವಾಗಿ ಪಡೆಯುತ್ತಿದ್ದರು, ಆದರೆ ಇನ್ಮುಂದೆ ಅದರಲ್ಲಿ ಬದಲಾವಣೆಗಳಿವೆ. ಆ ಬದಲಾವಣೆಯ ಕುರಿತು ತಿಳುಡಿಕೊಳ್ಳೋಣ ಬನ್ನಿ, (Technology News In Kannada)
ಬೆಂಗಳೂರು: ವಾಟ್ಸ್ ಆಪ್ ಅನ್ನು ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ಬಳಸುತ್ತಾರೆ. ವಿಶ್ವಾದ್ಯಂತ ಕೋಟ್ಯಂತರ ಜನರು ಪ್ರತಿದಿನ ವಾಟ್ಸ್ ಆಪ್ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದಲ್ಲದೆ, ಇದು ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು ಇತರ ಪ್ರಮುಖ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ವರ್ಷಗಳವರೆಗೆ, ಯಾವುದೇ ಹಣವನ್ನು ಚಾರ್ಜ್ ಮಾಡದೆಯೇ ಗೂಗಲ್ ಡ್ರೈವ್‌ನಲ್ಲಿ ತಮ್ಮ ವಾಟ್ಸ್ ಆಪ್ ಚಾಟ್‌ಗಳನ್ನು ಬ್ಯಾಕಪ್ ಮಾಡಲು ಗೂಗಲ್ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ವರ್ಷ ಎಲ್ಲವೂ ಬದಲಾಗಲಿದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ, (Technology News In Kannada)
ಈ ಬದಲಾವಣೆಯು 2024 ರಲ್ಲಿ ಇರಲಿದೆ
2024 ರ ಮೊದಲ ಆರು ತಿಂಗಳಲ್ಲಿ, ವಾಟ್ಸ್ ಆಪ್ ಚಾಟ್ ಬ್ಯಾಕ್‌ಅಪ್‌ಗಳನ್ನು ಬಳಕೆದಾರರ ಗೂಗಲ್ ಡ್ರೈವ್ ಸಂಗ್ರಹಣೆ ಮಿತಿಯಲ್ಲಿ ಸೇರಿಸಲು ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದು 15 ಜಿಬಿಯನ್ನು ಅವಲಂಬಿಸಿರುವವರ ಮೇಲೆ ಪರಿಣಾಮ ಬೀರುತ್ತದೆ. ಇದರರ್ಥ ತಮ್ಮ ವಿಶೇಷ ಫೋಟೋಗಳು, ವೀಡಿಯೊಗಳು ಮತ್ತು ಚಾಟ್‌ಗಳನ್ನು ಸುರಕ್ಷಿತವಾಗಿಡಲು ಗೂಗಲ್ ಡ್ರೈವ್ ಅನ್ನು ಅವಲಂಬಿಸಿರುವ ಜನರು ಈಗ ವಾಟ್ಸ್ ಆಪ್ ಜೊತೆಗೆ ಗೂಗಲ್ ಒನ್ ಮೂಲಕ ಹೆಚ್ಚುವರಿ ಸಂಗ್ರಹಣೆಯನ್ನು ಖರೀದಿಸಲು ಪರಿಗಣಿಸಬೇಕಾಗುತ್ತದೆ.
ಇದನ್ನೂ ಓದಿ-ಗೂಗಲ್ ಮ್ಯಾಪ್ಸ್ ನಲ್ಲೂ ಬಂತು ವಾಟ್ಸ್ ಆಪ್ ನಂತಹ ಲೋಕೇಶನ್ ಶೇರಿಂಗ್ ವೈಶಿಷ್ಯ!
ಚಂದಾದಾರಿಕೆ ಯೋಜನೆಗಳು
ಗೂಗಲ್ ಒನ್ ಮತ್ತು ಗೂಗಲ್ ಡ್ರೈವ್ ಸಂಬಂಧಿತ ಚಂದಾದಾರಿಕೆ ಯೋಜನೆಗಳು ಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಮೂರು ಮುಖ್ಯ ಯೋಜನೆಗಳನ್ನು ನೀಡುತ್ತದೆ. ಮಾಸಿಕ ವೆಚ್ಚಗಳಲ್ಲಿ ಬೇಸಿಕ್ (100GB) £1.59 / $1.99, ಸ್ಟ್ಯಾಂಡರ್ಡ್ (200GB) £2.49 / $2.99 ಮತ್ತು ಪ್ರೀಮಿಯಂ (2TB) £7.99 / $9.99 ಶಾಮೀಲಾಗಿವೆ. ಈ ಯೋಜನೆಗಳು ಮಾಸಿಕ ಆಧಾರದ ಮೇಲೆ ಇದ್ದವು. ವಾರ್ಷಿಕ ಆಧಾರದ ಕುರಿತು ಹೇಳುವುದಾದರೆ, ಬಳಕೆದಾರರು ಬೇಸಿಕ್ (100GB) ಯೋಜನೆಗೆ £15.99 / $19.99, ಸ್ಟ್ಯಾಂಡರ್ಡ್ (200GB) ಯೋಜನೆಗಾಗಿ £24.99 / $29.99 ಮತ್ತು ಪ್ರೀಮಿಯಂ (2TB) ಯೋಜನೆಗಾಗಿ £79.99 / $99.99 ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಇನ್ನೂ ಬೆಲೆಗಳನ್ನು ಘೋಷಿಸಲಾಗಿಲ್ಲ.
ಇದನ್ನೂ ಓದಿ-Alert! ಈ ಆಪ್ ಗಳು ನಿಮ್ಮ ಫೋನ್ ಅನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಬಹುದು, ಪಾರಾಗಲು ತಕ್ಷಣ ಈ ಕೆಲಸ ಮಾಡಿ!
ಈ ವೈಶಿಷ್ಟ್ಯವು ಶೀಘ್ರದಲ್ಲೇ ಬರಲಿವೆ
ವಾಟ್ಸಾಪ್ ಕೂಡ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳಿವೆ, ಇದು ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೆ ಪರಸ್ಪರ ಸಂಪರ್ಕಿಸಲು ಅನುವು ಮಾಡಿಕೊಡಲಿದೆ. ಆದಾಗ್ಯೂ, ಈ ವೈಶಿಷ್ಟ್ಯವು ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬುದರ ಕುರಿತು ಖಚಿತವಾದ ಮಾಹಿತಿ ಇಲ್ಲ, ಆದರೆ ಈ ವೈಶಿಷ್ಟ್ಯವು ಈ ವರ್ಷವೂ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ