WhatsApp ಮೂಲಕ ಮೆಟ್ರೊ ಟಿಕೆಟ್ ಬುಕಿಂಗ್, ಕೌಂಟರ್ ಬಳಿ ಸರದಿಯಲ್ಲಿ ನಿಲ್ಲಬೇಕಾಗಿಲ್ಲ!
Metro Ticket Booking: ನೀವೂ ಕೂಡ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ನೀವು ಟಿಕೆಟ್ ಕೌಂಟರ್ನಲ್ಲಿ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಬೇಸತ್ತು ಹೋಗಿದ್ದರೆ, ಇದೀಗ ಕೆಲವೇ ನಿಮಿಷಗಳಲ್ಲಿ ನಿಮ್ಮ ಜೇಬಿಗೆ ನೀವು ಬೇಕೆಂದಾಗ ಮೆಟ್ರೋ ಟಿಕೆಟ್ ಬರಲಿದೆ. ಹೇಗೆ ಅಂತೀರಾ? ಈ ವರದಿ ಓದಿ
Metro Ticket Booking: ಚೆನ್ನೈನಲ್ಲಿ ವಾಸಿಸುವ ಮತ್ತು ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಯವನ್ನು ಉಳಿಸಲು ಮತ್ತು ಟಿಕೆಟ್ ಕೌಂಟರ್‌ಗಳಲ್ಲಿ ನೂಕು ನುಗ್ಗಲು ತಪ್ಪಿಸಲು ಚೆನ್ನೈ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (CMRL) ಹೊಸ ಸೇವೆಯನ್ನು ಪ್ರಾರಂಭಿಸಿದೆ, ಇದಕ್ಕಾಗಿ ಬಳಕೆದಾರರು WhatsApp ಮೂಲಕ ಸಂದೇಶಗಳನ್ನು ಕಳುಹಿಸಬಹುದು ಮತ್ತು ನೀವು ನಿಮ್ಮ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಇದಕ್ಕೆ ತುಂಬಾ ಕಡಿಮೆ ಸಮಯ ಬೇಕಾಗಲಿದೆ. ಅಷ್ಟೇ ಅಲ್ಲ ಇದರಿಂದ ನಿಮಗೆ ಸಮಯಕ್ಕೆ ಸರಿಯಾಗಿ ನಿಮಗೆ ಮೆಟ್ರೊ ಸಿಗಲಿದೆ.
ಇದನ್ನೂ ಓದಿ-Tech Tips: ಲ್ಯಾಪ್ ಟಾಪ್ ಪದೇ ಪದೇ ಹ್ಯಾಂಗ್ ಆಗುತ್ತದೆಯೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ
ಈ ಸೇವೆ ಹೇಗೆ ಪ್ರಾರಂಭವಾಯಿತು
Tanla Solution ನ ಅಂಗಸಂಸ್ಥೆಯಾದ Carrix ಸಹಯೋಗದಲ್ಲಿ WhatsApp ಚಾಟ್‌ಬಾಟ್ ಆಧಾರಿತ QR ಟಿಕೆಟಿಂಗ್ ಸೇವೆಯನ್ನು ಆರಂಭಿಸಿದೆ. ಈ ಸೇವೆ ಆರಂಭವಾದ ನಂತರ ಇದೀಗ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸರದಿಯಲ್ಲಿ ನಿಲ್ಲಬೇಕಾಗಿಲ್ಲ, ಅಷ್ಟೇ ಅಲ್ಲ ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ನೀವು ಮೆಟ್ರೋ ನಿಲ್ದಾಣದ ಹೊರಗಿನಿಂದಲೇ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ-RBI Alert: ಆಯ್ದ ಬ್ಯಾಂಕುಗಳಲ್ಲಿನ ಅಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಬಿಐ ಗವರ್ನರ್
ಟಿಕೆಟ್ ಬುಕಿಂಗ್ ಪ್ರಕ್ರಿಯೆ ಹೇಗೆ?
1. WhatsApp ಮೂಲಕ ಟಿಕೆಟ್ ಕಾಯ್ದಿರಿಸಲು, ಪ್ರಯಾಣಿಕರು ಮೊದಲು CMRL WhatsApp ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು (+91 8300086000), ಇದು ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರದರ್ಶಿಸಲ್ಪಡುತ್ತದೆ.
2. ಈಗ ನೀವು ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಪಡೆಯುತ್ತೀರಿ. ಅದರಲ್ಲಿ ನೀವು ಇಂಗ್ಲೀಷ್ ಅಥವಾ ತಮಿಳು ಆಯ್ಕೆಯಿಂದ ಆಯ್ಕೆ ಮಾಡಬಹುದು.
3. ಈಗ ನೀವು ಇಲ್ಲಿ ಎರಡು ಆಯ್ಕೆಗಳನ್ನು ನೋಡಬಹುದು, ಒಂದು ಆಯ್ಕೆಯು ಟಿಕೆಟ್ ಅನ್ನು ಬುಕ್ ಮಾಡುವುದು ಮತ್ತು ಮತ್ತೊಂದು ಆಯ್ಕೆಯು ಹತ್ತಿರದ ಮೆಟ್ರೋ ನಿಲ್ದಾಣವನ್ನು ಕಂಡುಹಿಡಿಯುವುದು.
4. ಈಗ ಬುಕ್ ಯುವರ್ ಟಿಕೆಟ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ, ನಿಮ್ಮ ಮೂಲ ಮತ್ತು ಗಮ್ಯಸ್ಥಾನ ನಿಲ್ದಾಣವನ್ನು ಆಯ್ಕೆ ಮಾಡಲು ನಿಮ್ಮನ್ನು ಕೋರಲಾಗುತ್ತದೆ.
5. ವಿಶೇಷವೆಂದರೆ ನೀವು ನಿಮ್ಮ ಟಿಕೆಟ್ ಜೊತೆಗೆ 5 ಇತರ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದು, ಅಂದರೆ ಒಟ್ಟು 6 ಟಿಕೆಟ್‌ಗಳನ್ನು ಏಕಕಾಲದಲ್ಲಿ ಬುಕ್ ಮಾಡಬಹುದು. UPI, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
6. ಪಾವತಿಯನ್ನು ಮಾಡಿದ ನಂತರ, ನೀವು QR ಟಿಕೆಟ್ ಅನ್ನು ಪಡೆಯುತ್ತೀರಿ, ಈ ಟಿಕೆಟ್‌ನೊಂದಿಗೆ ನೀವು ಸ್ವಯಂಚಾಲಿತ ಗೇಟ್‌ನಲ್ಲಿ ಪ್ರವೇಶವನ್ನು ಪಡೆಯುವಿರಿ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.