Laptop Hacks: ವರ್ಕ್ ಫ್ರಮ್ ಹೋಮ್ ನ ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್ ಇಲ್ಲದೆ ಇರುವವರು ಬಹುತೇಕ ವಿರಳ. ನೀವು ಕೂಡ ಲ್ಯಾಪ್‌ಟಾಪ್ ಬಳಕೆದಾರರಾಗಿದ್ದರೆ, ಇದ್ದಕ್ಕಿದ್ದಂತೆ ನಿಮ್ಮ ಲ್ಯಾಪ್‌ಟಾಪ್ ಕೂಡ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಹ್ಯಾಂಗ್ ಆಗುವುದನ್ನು ನೀವು ಅನುಭವಿಸಿರಬಹುದು.
Laptop Hacks: ವರ್ಕ್ ಫ್ರಮ್ ಹೋಮ್ ನ ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್ ಇಲ್ಲದೆ ಇರುವವರು ಬಹುತೇಕ ವಿರಳ. ನೀವು ಕೂಡ ಲ್ಯಾಪ್‌ಟಾಪ್ ಬಳಕೆದಾರರಾಗಿದ್ದರೆ, ಇದ್ದಕ್ಕಿದ್ದಂತೆ ನಿಮ್ಮ ಲ್ಯಾಪ್‌ಟಾಪ್ ಕೂಡ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಹ್ಯಾಂಗ್ ಆಗುವುದನ್ನು ನೀವು ಅನುಭವಿಸಿರಬಹುದು. ಈ ಸಮಸ್ಯೆಯಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ, ನಾವು ನೀಡುವ ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಲ್ಯಾಪ್‌ಟಾಪ್ ಹ್ಯಾಂಗ್ ಆಗುವ ಸಮಸ್ಯೆ ದೂರವಾಗುವುದಲ್ಲದೆ, ನೀವು ಇತರ ಹಲವು ಲ್ಯಾಪ್ ಟಾಪ್ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ-RBI Alert: ಆಯ್ದ ಬ್ಯಾಂಕುಗಳಲ್ಲಿನ ಅಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಆರ್ಬಿಐ ಗವರ್ನರ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಲ್ಯಾಪ್‌ಟಾಪ್ ಅಪ್ಡೇಟ್ ನತ್ತ ಗಮನ ಹರಿಸಿ: ನಿಮ್ಮ ಲ್ಯಾಪ್‌ಟಾಪ್ ಆಪರೇಟಿಂಗ್ ಸಿಸ್ಟಮ್ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮೊದಲು ನಿಮ್ಮ ಲ್ಯಾಪ್‌ಟಾಪ್ ಅನ್ನು ನವೀಕರಿಸಿ. ಇದಕ್ಕಾಗಿ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಮತ್ತು ನವೀಕರಣಗಳಿಗಾಗಿ ಪರಿಶೀಲಿಸಿ ಮತ್ತು ಇತ್ತೀಚಿನ ನವೀಕರಣಗಳನ್ನು ಪಡೆಯಿರಿ. ಇದು ಲ್ಯಾಪ್‌ಟಾಪ್ ಅನ್ನು ಹ್ಯಾಂಗ್ ಮಾಡುವುದಿಲ್ಲ ಮತ್ತು ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು.
ರೀಸ್ಟಾರ್ಟ್ ಆಯ್ಕೆಯನ್ನು ಬಳಸಿ: ಅನೇಕ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ ಅನ್ನು ಹಲವಾರು ದಿನಗಳವರೆಗೆ ರೀಸ್ಟಾರ್ಟ್ ಮಾಡುವುದೇ ಇಲ್ಲ. ಅನೇಕ ಬಾರಿ ಲ್ಯಾಪ್‌ಟಾಪ್ ಸ್ವಯಂಚಾಲಿತವಾಗಿ ಸ್ಲೀಪ್ ಮೋಡ್‌ಗೆ ಜಾರುತ್ತದೆ, ಆದರೆ ನೀವು ಕ್ಲೋಸ್ ಮಾಡದೆ ಕಾರ್ಯಗಳು . ದೀರ್ಘಕಾಲದವರೆಗೆ ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ. ಈ ಕಾರಣದಿಂದಾಗಿ, ಲ್ಯಾಪ್ಟಾಪ್ ಸ್ಲೋ ಆಗುತ್ತದೆ ಹಾಗೂ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ.
ಆಂಟಿ-ವೈರಸ್ ಅನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ: ನಿಮ್ಮ ಲ್ಯಾಪ್‌ಟಾಪ್ ಅನ್ನು ಅಪ್ಡೇಟ್ ಮಾಡಿದ ನಂತರವೂ ಕೂಡ ಅದು ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಮತ್ತು ಹ್ಯಾಂಗ್ ಆಗುತ್ತಿದ್ದರೆ, ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವೈರಸ್ ಇರುವುದರಿಂದ ಈ ರೀತಿ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಆಂಟಿ-ವೈರಸ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ನಿಮ್ಮ ಲ್ಯಾಪ್‌ಟಾಪ್ ಅನ್ನು ವೈರಸ್‌ಗಳಿಗಾಗಿ ಸ್ಕ್ಯಾನ್ ಮಾಡುವುದು ತುಂಬಾ ಮುಖ್ಯ. ಈ ಮೂಲಕ ನಿಮ್ಮ ಲ್ಯಾಪ್ ಟಾಪ್ ಹ್ಯಾಂಗ್ ಆಗುವ ಸಮಸ್ಯೆಯೂ ನಿವಾರಣೆಯಾಗಲಿದ್ದು, ನೀವು ಡೇಟಾ ಕಳ್ಳತನದಿಂದಲೂ ಕೂಡ ಪಾರಾಗಬಹುದು.
ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ: ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಬಳಸದಂತಹ ಅನೇಕ ಅಪ್ಲಿಕೇಶನ್‌ಗಳು ಇರಬಹುದು. ಲ್ಯಾಪ್‌ಟಾಪ್‌ನ 'ಕಂಟ್ರೋಲ್ ಪ್ಯಾನಲ್'ಗೆ ಹೋಗುವ ಮೂಲಕ, ನಿಮಗೆ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ನೀವು ಆಯ್ಕೆ ಮಾಡಬಹುದು ಮತ್ತು ನಂತರ ನೀವು ಅವುಗಳನ್ನು ಅನ್ಇನ್ಸ್ಟಾಲ್ ಮಾಡಬಹುದು.
RAM ಅನ್ನು ಅಪ್‌ಗ್ರೇಡ್ ಮಾಡಿ: RAM ಅನ್ನು ಹೆಚ್ಚಿಸುವ ಮೂಲಕ, ಲ್ಯಾಪ್‌ಟಾಪ್‌ನ ವೇಗವು ಗಮನಾರ್ಹವಾಗಿ ಹೆಚ್ಚಾಗುತ್ತದೆ. 50 ಸಾವಿರಕ್ಕಿಂತ ಕಡಿಮೆ ಬಜೆಟ್‌ನ ಹೆಚ್ಚಿನ ಲ್ಯಾಪ್‌ಟಾಪ್‌ಗಳು 4GB RAM ನೊಂದಿಗೆ ಮಾತ್ರ ಬರುತ್ತವೆ. ನೀವು ಮಲ್ಟಿ ಟಾಸ್ಕಿಂಗ್ ಮಾಡಲು ಬಯಸಿದರೆ, 4GB RAM ಸಾಕಾಗುವುದಿಲ್ಲ. ಆದ್ದರಿಂದ ನೀವು RAM ಅನ್ನು ಅಪ್‌ಗ್ರೇಡ್ ಮಾಡುವುದು ತುಂಬಾ ಮುಖ್ಯ.