ವಾಯನಾಡ್:  Biodiesel From Poultry Waste - ಕೇರಳದಲ್ಲಿ ಪಶುವೈದ್ಯರಾಗಿ (Veterinary Doctor) ಸೇವೆ ಸಲ್ಲಿಸುತ್ತಿರುವ ವೈದ್ಯ ಜಾನ್ ಅಬ್ರಹಾಂ ಅಂತಿಮವಾಗಿ ಕೋಳಿ ತ್ಯಾಜ್ಯದಿಂದ (Poultry Waste) ಜೈವಿಕ ಡೀಸೆಲ್ ತಯಾರಿಸಲು ಪೇಟೆಂಟ್ ಪಡೆದುಕೊಂಡಿದ್ದಾರೆ. ಈ ಇಂಧನವು ಲೀಟರ್‌ನಲ್ಲಿ ಸರಾಸರಿ 38 ಕಿ.ಮೀ ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ ಮತ್ತು ಅದರ ವೆಚ್ಚವು ಪ್ರಸ್ತುತ ಡೀಸೆಲ್ ಬೆಲೆಯ ಶೇಕಡಾ 40 ರಷ್ಟಿದೆ. ಇದು ಮಾಲಿನ್ಯವನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಡಾ. ಜಾನ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೋಳಿಗಳ ತ್ಯಾಜ್ಯದಿಂದ ತೈಲೋತ್ಪಾದನೆ
ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಅಬ್ರಹಾಂ ಅವರಿಗೆ ಸುದೀರ್ಘ ಏಳೂವರೆ ವರ್ಷಗಳ ನಿರೀಕ್ಷೆಯ ನಂತರ 2021 ರ ಜುಲೈ 7 ರಂದು ಭಾರತೀಯ ಪೇಟೆಂಟ್ ಕಚೇರಿ ಪೇಟೆಂಟ್ (Indian Patent Office)  ನೀಡಿದೆ . ಕೋಳಿ ತ್ಯಾಜ್ಯದಿಂದ (Poultry Waste) ತಯಾರಿಸಲಾಗಿರುವ ಎಣ್ಣೆಯಿಂದ ಜೈವಿಕ ಡೀಸೆಲ್ ಅನ್ನು ಅಬ್ರಹಾಂ ಕಂಡುಹಿಡಿದಿದ್ದಾರೆ. 2009-12ರ ಅವಧಿಯಲ್ಲಿ ಇದನ್ನು ಕಂಡುಹಿಡಿದಿದ್ದೇನೆ ಎಂದು ಡಾ. ಅಬ್ರಾಹಿಂ ಹೇಳಿದ್ದಾರೆ. ದಿವಂಗತ ಪ್ರೊಫೆಸರ್ ರಮೇಶ್ ಶ್ರವಣಕುಮಾರ್ ಅವರ ಮಾರ್ಗದರ್ಶನದಲ್ಲಿ ತಾವು ಈ ಸಂಶೋಧನೆಯನ್ನು ಪೂರ್ಣಗೊಳಿಸಿರುವುದಾಗಿ ಅವರು ಹೇಳಿದ್ದಾರೆ.


ಇದನ್ನೂ ಓದಿ- ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ


ಕಾಲೇಜಿನ ವಾಹನ ಜೈವಿಕ ಇಂಧನದಲ್ಲಿಯೇ ಚಲಿಸುತ್ತಿದೆ
ಸಂಶೋಧನೆಯ ನಂತರ, ಅಬ್ರಹಾಂ ವಯನಾಡ್‌ನ ಕಲ್ಪೆಟ್ಟ ಬಳಿಯ ಪೊಕೊಡೆ ಪಶುವೈದ್ಯಕೀಯ ಕಾಲೇಜಿನಲ್ಲಿ 2014 ರಲ್ಲಿ 18 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ರಾಯೋಗಿಕ ಯುನಿಟ್ ಸ್ಥಾಪಿಸಿದ್ದಾರೆ. ಇದಕ್ಕಾಗಿ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (Indian Council of Agricultural Research) ಹಣಕಾಸಿನ ಸಹಾಯ ಪಡೆದುಕೊಂಡಿದ್ದಾರೆ. ನಂತರ ಭಾರತ್ ಪೆಟ್ರೋಲಿಯಂನ (Bharat Petroleum) ಕೊಚ್ಚಿ ಮೂಲದ ಸಂಸ್ಕರಣಾಗಾರವು ಏಪ್ರಿಲ್ 2015 ರಲ್ಲಿ ಅಬ್ರಹಾಂ ಅವರ ಜೈವಿಕ ಡೀಸೆಲ್ಗೆ (Biodiesel) ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿದೆ ಮತ್ತು ಅಂದಿನಿಂದ ಕಾಲೇಜಿನಲ್ಲಿ ವಾಹನವೊಂದು ಅವರು ತಯಾರಿಸಿರುವ ಇಂಧನದಲ್ಲಿಯೇ ಚಲಿಸುತ್ತಿದೆ.


ಇದನ್ನೂ ಓದಿ- Free WiFi: ಆಗಸ್ಟ್ 15 ರಿಂದ ಈ ರಾಜ್ಯದ ನಗರಗಳಲ್ಲಿನ ನಾಗರಿಕರಿಗೆ ಸಿಗಲಿದೆ ಉಚಿತ ವೈ-ಫೈ ಸೌಲಭ್ಯ


ಎಷ್ಟು ಪ್ರಮಾಣದ ಕೋಳಿ ತ್ಯಾಜ್ಯದಿಂದ ಎಷ್ಟು ಬಯೋಡಿಸೇಲ್
ಈ  ಇಂಧನಕ್ಕಾಗಿ ಕೋಳಿ ತ್ಯಾಜ್ಯವನ್ನು ಮಾತ್ರ ಏಕೆ ಬಳಸುತ್ತೀರಾ ಎಂದು ಅಬ್ರಹಾಂ ಅವರನ್ನು ಪ್ರಶ್ನಿಸಲಾಗಿ, ಪಕ್ಷಿಗಳು ಮತ್ತು ಹಂದಿಗಳು ತಮ್ಮ ಹೊಟ್ಟೆಯಲ್ಲಿ ಸಾಕಷ್ಟು ಕೊಬ್ಬನ್ನು ಹೊಂದಿರುತ್ತವೆ ಮತ್ತು ಇದರಿಂದಾಗಿ ಸಾಮಾನ್ಯ ತಾಪಮಾನದಲ್ಲಿ ಅವುಗಳಿಂದ ತೈಲವನ್ನು ಹೊರತೆಗೆಯುವುದು ಸುಲಭ ಎಂದು ಅವರು ಹೇಳಿದ್ದಾರೆ. . ಅಬ್ರಹಾಂ ಮತ್ತು ಅವರ ವಿದ್ಯಾರ್ಥಿಗಳು ಈಗ ಹಂದಿ ತ್ಯಾಜ್ಯದಿಂದ ಜೈವಿಕ ಡೀಸೆಲ್ ತಯಾರಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಟುಕ ಮನೆಗಳಿಂದ ಪಡೆದ 100 ಕೆಜಿ ಕೋಳಿ ತ್ಯಾಜ್ಯದಿಂದ ಒಂದು ಲೀಟರ್ ಜೈವಿಕ ಡೀಸೆಲ್ ಉತ್ಪಾದಿಸಬಹುದು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-WhatsApp Latest Feature: ವಾಟ್ಸ್ ಆಪ್ ನಲ್ಲಿ ಬಂತು Group Video/Voice Callಗೆ ಸಂಬಂಧಿಸಿದ ಈ ಅದ್ಭುತ ವೈಶಿಷ್ಟ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.