WhatsApp Feature: ಇಡೀ ವಿಶ್ವದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ, ಮೆಟಾ ಮಾಲೀಕತ್ವದ ವಾಟ್ಸಾಪ್ ಒಂದೇ ಖಾತೆಯಲ್ಲಿ ಎರಡು ಪ್ರೊಫೈಲ್‌ಗಳನ್ನು ರಚಿಸಲು ಅವಕಾಶ ಕಲ್ಪಿಸಲಿದೆ. 


COMMERCIAL BREAK
SCROLL TO CONTINUE READING

ಹೌದು, ಶೀಘ್ರದಲ್ಲೇ ವಾಟ್ಸಾಪ್ ಬಳಕೆದಾರರು  ಒಂದೇ ಖಾತೆಯಲ್ಲಿ ಎರಡು ಪ್ರೊಫೈಲ್‌ಗಳನ್ನು ರಚಿಸಬಹುದಾಗಿದೆ. ಈ ಖಾತೆ, ನಿಮ್ಮ  ವೈಯಕ್ತಿಕ ಬಳಕೆಗಾಗಿ ಮಾತ್ರವಲ್ಲದೆ ವೃತ್ತಿಪರ ಕೆಲಸಕ್ಕಾಗಿಯೂ ಬಳಸಲಾಗುತ್ತದೆ. ಅರ್ಥಾತ್, ಒಂದೇ ಸಾಧನದಲ್ಲಿ ವೈಯಕ್ತಿಕ ಖಾತೆಗಳು ಮತ್ತು ವ್ಯಾಪಾರ ಖಾತೆಗಳನ್ನು ಪ್ರತ್ಯೇಕಿಸಲು ವಾಟ್ಸಾಪ್ ಹೊಸ ಮಾರ್ಗವನ್ನು ಒದಗಿಸಿದೆ.


ಇದನ್ನೂ ಓದಿ- Apple iPhone 16: ಐಫೋನ್ 16 ಬಗ್ಗೆ ಮಹತ್ವದ ಮಾಹಿತಿ ಸೋರಿಕೆ, ಏನೆಂದು ತಿಳಿಯಿರಿ


ಏನಿದು ಹೊಸ ವೈಶಿಷ್ಟ್ಯ? 
ವಾಟ್ಸಾಪ್ ಬಗ್ಗೆ ಮಾಹಿತಿ ನೀಡುವ WABetaInfoದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್ ಪರ್ಯಾಯ ಪ್ರೊಫೈಲ್ ಎಂಬ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಸ್ನೇಹಿತರಾಗಿರುವ ಸಂಪರ್ಕಗಳಿಗಾಗಿ ಪ್ರತ್ಯೇಕ  ಪ್ರೊಫೈಲ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ. 


ಗಮನಾರ್ಹವಾಗಿ ವಾಟ್ಸಾಪ್ ಪರ್ಯಾಯ ಪ್ರೊಫೈಲ್ ಬಳಕೆದಾರರ ಪ್ರಾಥಮಿಕ  ಪ್ರೊಫೈಲ್‌ಗಿಂತ ವಿಭಿನ್ನ ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಹೊಂದಿರಬಹುದು. ನಿಮ್ಮ ಪ್ರೈಮರಿ ಅಕೌಂಟ್ ಅನ್ನು ವೀಕ್ಷಿಸಲು ಅನುಮತಿಸದ ಯಾರಿಗಾದರೂ ಈ ಪರ್ಯಾಯ ಪ್ರೊಫೈಲ್ ವಿವರಗಳನ್ನು ವೀಕ್ಷಿಸಲು ಸಾದ್ಯವಾಗುತ್ತದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ನಕಲಿ ಸುದ್ದಿ ಚಾನೆಲ್‌ಗಳ ಹಾವಳಿ ತಪ್ಪಿಸಲು ಐಟಿ ಸಚಿವಾಲಯ ಯೂಟ್ಯೂಬ್‌ಗೆ ನೀಡಿದೆ ಈ ಸಲಹೆ


ಆದಾಗ್ಯೂ, ವಾಟ್ಸಾಪ್ ಇನ್ನೂ ಸಹ ಈ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.