ಸಿನಿ ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡಿದ ಪಿವಿಆರ್ ಐನಾಕ್ಸ್

PVR Inox: ಪಿವಿಆರ್ ಐನಾಕ್ಸ್ ಸಿನಿ ಪ್ರಿಯರಿಗಾಗಿ ಹೊಸ ಪದ್ದತಿಯನ್ನು ಜಾರಿಗೆ ತಂದಿದೆ. ಗ್ರಾಹಕರನ್ನು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸುವ ಉದ್ದೇಶದಿಂದ ಇಂತಹ ಒಂದು ಆಫರ್ ಪರಿಚಯಿಸಲಾಗುತ್ತಿದೆಯಂತೆ. 

Written by - Yashaswini V | Last Updated : Oct 16, 2023, 10:31 AM IST
  • ಓ‌ಟಿ‌ಟಿ ಪ್ಲಾಟ್‌ಫಾರ್ಮ್ ಆಗಮನದ ನಂತರ, ಹೆಚ್ಚಿನ ಚಲನಚಿತ್ರ ವೀಕ್ಷಕರು ತಮ್ಮ ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ
  • ಇದಲ್ಲದೆ, ಚಲನಚಿತ್ರವನ್ನು ವೀಕ್ಷಿಸಲು ಪ್ರತಿ ವಾರ ಚಿತ್ರಮಂದಿರಕ್ಕೆ ಹೋಗುವುದು ದುಬಾರಿಯೂ ಹೌದು.
  • ಇದರಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಮಲ್ಟಿಪ್ಲೆಕ್ಸ್ ಕಂಪನಿ ಪಿವಿಆರ್ ಐನಾಕ್ಸ್ ಭರ್ಜರಿ ಆಫರ್ ನೀಡಿದೆ
ಸಿನಿ ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡಿದ ಪಿವಿಆರ್ ಐನಾಕ್ಸ್  title=

PVR Inox: ಮಲ್ಟಿಪ್ಲೆಕ್ಸ್ ಕಂಪನಿ ಪಿವಿಆರ್ ಐನಾಕ್ಸ್ ಸಿನಿ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪಿವಿಆರ್ ಐನಾಕ್ಸ್'ನಲ್ಲಿ ಕೇವಲ ₹699 ಮಾಸಿಕ ಪಾಸ್  ಚಂದಾದಾರಿಕೆ ಲಭ್ಯವಿದ್ದು, ಈ ಪಾಸ್ ಪಡೆಯುವುದರಿಂದ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಷ್ಟಕ್ಕೂ, ಏನಿದು ಆಫರ್ ಇದರಿಂದ ಏನು ಪ್ರಯೋಜನ ಎಂದು ತಿಳಿಯೋಣ... 

ಮಲ್ಟಿಪ್ಲೆಕ್ಸ್ ಕಂಪನಿ PVR INOX Ltd ಸಿನಿಮಾ ಪ್ರೇಮಿಗಳನ್ನು ಮತ್ತೆ ಮತ್ತೆ ಚಿತ್ರಮಂದಿರಗಳತ್ತ ಆಕರ್ಷಿಸುವ ದೃಷ್ಟಿಯಿಂದ ಮಾಸಿಕ ಚಲನಚಿತ್ರ ಚಂದಾದಾರಿಕೆಯ ಪಾಸ್ ಅನ್ನು ಬಿಡುಗಡೆ ಮಾಡಿದೆ. ಅದು ಕೂಡ ಕೇವಲ ₹ 699ಕ್ಕೆ ಈ ಮಾಸಿಕ ಪಾಸ್ ದೊರೆಯಲಿದೆ. 

ಲಭ್ಯತೆ: 
ಪಿವಿಆರ್ ಐನಾಕ್ಸ್  ಬಿಡುಗಡೆ ಮಾಡಿರುವ ಈ ಮಾಸಿಕ ಚಂದಾದಾರಿಕೆ ಪಾಸ್ ಇಂದಿನಿಂದ ಅಂದರೆ ಅಕ್ಟೋಬರ್ 16 ರಿಂದ ಲಭ್ಯವಿರುತ್ತದೆ. ಮೇಲೆ ತಿಳಿಸಿದಂತೆ ಈ ಮಾಸಿಕ ಪಾಸ್ ದರ ಕೇವಲ 699 ರೂ.ಗಳು. ಈ ಪಾಸ್ ಪಡೆಯುವ ಮೂಲಕ ಗ್ರಾಹಕರು ಪ್ರತಿ ತಿಂಗಳು  10 ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ. 

ಇದನ್ನೂ ಓದಿ- ಸ್ಮಾರ್ಟ್‌ಫೋನ್‌ನ ಬ್ಯಾಟರಿಗೆ ಮಾರಕ ನಿಮ್ಮ ಈ ಸಣ್ಣ ತಪ್ಪುಗಳು

ಗಮನಾರ್ಹ ವಿಷಯವೆಂದರೆ, ಗ್ರಾಹಕರಿಗೆ ಈ ಕೊಡುಗೆ ಪ್ರಯೋಜನ  ಸೋಮವಾರದಿಂದ ಗುರುವಾರದವರೆಗೆ ಅನ್ವಯಿಸುತ್ತದೆ ಮತ್ತು IMAX, Gold, luxe ಮತ್ತು ನಿರ್ದೇಶಕರಂತಹ ಪ್ರೀಮಿಯಂ ಸೇವೆಗಳನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಪಿವಿಆರ್ ಐನಾಕ್ಸ್ ಸಿಇಒ ಹೇಳಿದ್ದಾರೆ.

ಪಿವಿಆರ್ ಐನಾಕ್ಸ್ ಚಂದಾದಾರಿಕೆಯನ್ನು ಪಡೆಯುವ ವಿಧಾನ: 
ನೀವು ಸಹ ಪಿವಿಆರ್ ಐನಾಕ್ಸ್ ಚಂದಾದಾರಿಕೆಯನ್ನು ಪಡೆಯಲು ಬಯಸಿದರೆ ಕಂಪನಿಯ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಈ ಸೇವೆ ಲಭ್ಯವಾಗಲಿದೆ. ಆದರೆ ಗ್ರಾಹಕರು ಕನಿಷ್ಠ ಮೂರು ತಿಂಗಳವರೆಗೆ ಅದರ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. 

ಇದನ್ನೂ ಓದಿ- ಡೇಟಾ ಸುರಕ್ಷತೆಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಟ್ರಾಂಗ್ ಫಿಂಗರ್‌ಪ್ರಿಂಟ್‌ ಪೆನ್‌ಡ್ರೈವ್

ಈ ಕುರಿತಂತೆ ಮಾಹಿತಿ ನೀಡಿರುವ ಪಿವಿಆರ್ ಐನಾಕ್ಸ್  ಸಿಇಒ ಗೌತಮ್ ದತ್ತಾ, ಕಂಪನಿಯು ಗ್ರಾಹಕರ ಸಿನಿಮಾ ನೋಡುವ ಹವ್ಯಾಸವನ್ನು ಬದಲಾಯಿಸಲು ಈ ಉಪಕ್ರಮವನ್ನು ಕೈಗೊಂಡಿದೆ. ಈ ಕೊಡುಗೆಯೊಂದಿಗೆ ಜನರನ್ನು ಮತ್ತೆ ಥಿಯೇಟರ್‌ಗಳತ್ತ ಮುಖಮಾಡುವಂತೆ ಮಾಡುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News