ನವದೆಹಲಿ :  pic Games, Steam, GOG Galaxy ಮತ್ತು  EA Origin ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಗೇಮಿಂಗ್ ಖಾತೆಗಳಿಗೆ ಪ್ರವೇಶ ಪಡೆಯಲು ಹ್ಯಾಕರ್‌ಗಳು ಈಗ ಮಾಲ್‌ವೇರ್ ಬಳಸುತ್ತಿದ್ದಾರೆ. ಬ್ಲಾಡಿ ಸ್ಟೀಲರ್ ಟ್ರೋಜನ್ ಹೆಸರಿನ ಮಾಲ್ವೇರ್ (Bloody Stealer Trojan) , ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ ಬಳಕೆದಾರರಿಗೆ ಇನ್ ಫೆಕ್ಟ್  ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಬ್ಲಾಡಿ ಸ್ಟೀಲರ್  ಟ್ರೋಜನ್ ಬಳಕೆದಾರರ ಬ್ಯಾಂಕಿಂಗ್ ಮಾಹಿತಿ, ಪಾಸ್‌ವರ್ಡ್‌ಗಳು, ಫಾರ್ಮ್‌ಗಳು, ಕುಕೀಗಳನ್ನು ಪ್ರವೇಶಿಸುತ್ತಿದೆ. ಆದರೆ ಅದನ್ನು ತಡೆಯುವುದಕ್ಕೆ ಒಂದು ಮಾರ್ಗವಿದೆ. 


COMMERCIAL BREAK
SCROLL TO CONTINUE READING

ಡೇಟಾ ಕದಿಯುವುದು ಹೀಗೆ :
ಬ್ಲೀಪಿಂಗ್ ಕಂಪ್ಯೂಟರ್‌ನ ವರದಿಯ ಪ್ರಕಾರ, ಬ್ಲಾಡಿ ಸ್ಟೀಲರ್ ಟ್ರೋಜನ್ ಮಾಲ್‌ವೇರ್ (Bloody Stealer Trojan Malware) ತಿಂಗಳುಗಳಿಂದ ಬಳಕೆದಾರರನ್ನು ಟಾರ್ಗೆಟ್ ಮಾಡುತ್ತಿರುತ್ತದೆ. ಬ್ಲಾಡಿ ಸ್ಟೀಲರ್ ಟ್ರೋಜನ್  ನ ಈ ಕೆಲಸವನ್ನು ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿಯ ಸಂಶೋಧಕರು  ಪತ್ತೆಹಚ್ಚಿದ್ದಾರೆ. ಭದ್ರತಾ ಸಂಸ್ಥೆಯ ಪ್ರಕಾರ, ಮಾಲ್‌ವೇರ್ ಅನ್ನು ಕೇವಲ ಆಟಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿಲ್ಲ. ಇನ್ನೂ ಹಲವಾರು ಪ್ರಸಿದ್ಧ ಗೇಮಿಂಗ್ ಆಪ್‌ಗಳನ್ನು (Gaming app) ಗುರಿಯಾಗಿಸಿಕೊಂಡು ಡೇಟಾವನ್ನು ಕದ್ದು, ನಂತರ ಅದನ್ನು ಡಾರ್ಕ್ ವೆಬ್ ನಲ್ಲಿ ಮಾರಾಟ ಮಾಡಬಹುದು. 


ಇದನ್ನೂ ಓದಿ : ಐಫೋನ್ 12 ಮೇಲೆ ಇದುವರೆಗಿನ ಅತಿ ದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್


ಬ್ಲಾಡಿ ಸ್ಟೀಲರ್ ಟ್ರೋಜನ್ ನಿಂದ  ಸುರಕ್ಷಿತವಾಗಿರುವುದು ಹೇಗೆ ?:
ಹೆಚ್ಚಿನ ಬಳಕೆದಾರರ ಖಾತೆಗಳನ್ನು ಹ್ಯಾಕ್ (account hack) ಮಾಡುವುದು ಸುಲಭ,  ಏಕೆಂದರೆ ಬಳಕೆದಾರರು ಅಂಥಹ ಕೆಲವು  ತಪ್ಪುಗಳನ್ನು ಮಾಡುತ್ತಾರೆ. ವರದಿಯ ಪ್ರಕಾರ, ಬಳಕೆದಾರರು ಅನುಮಾನಾಸ್ಪದ ಅಪ್ಲಿಕೇಶನ್‌ಗಳು ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದಾಗಲೇ ಇಂಥಹ ಸಮಸ್ಯೆ ಉದ್ಭವಿಸುತ್ತದೆ. ಹೆಚ್ಚಿನ ಜನರು ಆಟವನ್ನು ಆಡಲು ಚೀಟ್ ಕೋಡ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಈ ಚೀಟ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲೇ ಬಾರದು. ಏಕೆಂದರೆ ಅವುಗಳು ಬ್ಲಾಡಿ ಸ್ಟೀಲರ್ ಟ್ರೋಜನ್ ನಂತಹ ಮಾಲ್‌ವೇರ್ ಹೊಂದಿರಬಹುದು.


ಬ್ಲಾಡಿ ಸ್ಟೀಲರ್ ಟ್ರೋಜನ್ ವೈಶಿಷ್ಟ್ಯಗಳು :
 ಕೋಡ್‌ನೇಮ್ಡ್ ಬ್ಲಡಿಸ್ಟೀಲರ್, ಟ್ರೋಜನ್ ಬ್ರೌಸರ್‌ಗಳಿಂದ ಕುಕೀಗಳು, ಪಾಸ್‌ವರ್ಡ್‌ಗಳು, ಫಾರ್ಮ್‌ಗಳು, ಬ್ಯಾಂಕ್ ಕಾರ್ಡ್‌ಗಳು (Bank card) ಹಾಗೂ ಪಿಸಿ ಮಾಹಿತಿ ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಕದಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ಹೇಳಿದೆ. ಟ್ರೋಜನ್ ಗಳು ಬೆಥೆಸ್ಡಾ, ಎಪಿಕ್ ಗೇಮ್ಸ್, ಜಿಒಜಿ, ಆರಿಜಿನ್, ಸ್ಟೀಮ್, ಟೆಲಿಗ್ರಾಮ್, ವೀಮ್ ವರ್ಲ್ಡ್ ನಿಂದ ಸೆಷನ್ ಗಳನ್ನು ಕದಿಯಬಹುದು. ಇದರ ಜೊತೆಗೆ, ಡೆಸ್ಕ್‌ಟಾಪ್,uTorrent ಕ್ಲೈಂಟ್ ಮತ್ತು ಮೆಮೊರಿ ಲಾಗ್‌ಗಳಿಂದ ಫೈಲ್‌ಗಳನ್ನು ಬಳಕೆದಾರರ ಡಿವೈಸ್ ಗಳಿಂದ  ಕದಿಯಬಹುದು. ವರದಿಯ ಪ್ರಕಾರ, ಟ್ರೋಜನ್ ನಕಲಿ ಲಾಗಿಂಗ್ ರಕ್ಷಣೆ ಮತ್ತು ರಿವರ್ಸ್ ಎಂಜಿನಿಯರಿಂಗ್ ರಕ್ಷಣೆಯನ್ನು ವೈಶಿಷ್ಟ್ಯಗಳನ್ನು ಹೊಂದಿದೆ.


ಇದನ್ನೂ ಓದಿ : ಈ ಪೋನ್ ಗಳಿಗೆ ತನ್ನ ಆಪ್ ಗಳು ಬೆಂಬಲಿಸುವುದನ್ನು ಸ್ಥಗಿತಗೊಳಿಸಲಿದೆ ಗೂಗಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.