ಐಫೋನ್ 12 ಮೇಲೆ ಇದುವರೆಗಿನ ಅತಿ ದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್

ಐಫೋನ್ 12 ಅನ್ನು ಭಾರತದಲ್ಲಿ  65,900 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಇದನ್ನು 49,999 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. 

Written by - Ranjitha R K | Last Updated : Sep 28, 2021, 01:21 PM IST
  • ಐಫೋನ್ 12 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ ಲಭ್ಯ
  • ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಭಾರೀ ರಿಯಾಯಿತಿ ಲಭ್ಯ
  • ಐಫೋನ್ 12 ಅನ್ನು ರೂ 49,999 ಕ್ಕೆ ಖರೀದಿಸಬಹುದು.
ಐಫೋನ್ 12 ಮೇಲೆ  ಇದುವರೆಗಿನ ಅತಿ ದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್

ನವದೆಹಲಿ : ಫ್ಲಿಪ್‌ಕಾರ್ಟ್ (Flipkart) ತನ್ನ 2021 ರ ಬಿಗ್ ಬಿಲಿಯನ್ ಡೇಸ್ ಮಾರಾಟವನ್ನು (Flipkart Big Billion Days sale) ಅಕ್ಟೋಬರ್ 3 ರಂದು ಭಾರತದಲ್ಲಿ ಆರಂಭಿಸಲಿದೆ.   ಪ್ರತಿ ವರ್ಷದಂತೆ ಈ ಬಾರಿ, ಕೂಡಾ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ  (Flipkart sale) ಐಫೋನ್ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. ಅಲ್ಲದೆ, ಈ ವರ್ಷವೂ ಐಫೋನ್‌ಗಳಲ್ಲಿ (iPhone) ಅದ್ಭುತ ಕೊಡುಗೆಗಳು ಲಭ್ಯವಿರಲಿದೆ.  ಸೇಲ್ ಗೂ ಮುನ್ನವೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಐಫೋನ್ 12 ನಲ್ಲಿ ರಿಯಾಯಿತಿಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಟ್ವಿಟರ್‌ನಲ್ಲಿ ಐಫೋನ್ 12 ನ ಸೇಲ್ ಬೆಲೆಯನ್ನು ತೋರಿಸುವ ವಿಡಿಯೋವನ್ನು ಶೇರ್ ಮಾಡಿದೆ.  

ಐಫೋನ್ 12 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ :
ಐಫೋನ್ 12 ಅನ್ನು (iPhone 12 ) ಭಾರತದಲ್ಲಿ  65,900 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಆದರೆ, ಫ್ಲಿಪ್ ಕಾರ್ಟ್ ಸೇಲ್ ನಲ್ಲಿ (Flipkart sale)  ಇದನ್ನು 49,999 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಅಂದರೆ, ಈ ಫೋನ್ ಮೇಲೆ 15,901 ರೂ. ಗಳ ರಿಯಾಯಿತಿ ಸಿಗಲಿದೆ.  

ಇದನ್ನೂ ಓದಿ : ಈ ಪೋನ್ ಗಳಿಗೆ ತನ್ನ ಆಪ್ ಗಳು ಬೆಂಬಲಿಸುವುದನ್ನು ಸ್ಥಗಿತಗೊಳಿಸಲಿದೆ ಗೂಗಲ್

ಐಫೋನ್ 12 ರ ವಿಶೇಷತೆಗಳು :
ಐಫೋನ್ 12 25.13 x 1170 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಸ್ಕ್ರೀನ್  625 ನಿಟ್‌ಗಳ ಬ್ರೈಟ್ ನೆಸ್ , ಎಚ್‌ಡಿಆರ್ ಬೆಂಬಲ ಮತ್ತು 460 ಪಿಪಿಐ ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರುತ್ತದೆ. ಫೋನ್ Apple A14 ಬಯೋನಿಕ್ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 12+12MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.

ಚೀನಾದಲ್ಲಿ ಕಡಿಮೆಯಾಗಿದೆ ಬೆಲೆ :
ಚೀನಾ ಮಾರುಕಟ್ಟೆಯಲ್ಲಿ (China market)  ಐಫೋನ್ 12 ಬೆಲೆ ಕಡಿಮೆಯಾಗಿದೆ. ಫೋನಿನ ಬೆಲೆ  22,863ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಈ ಫೋನ್ ಚೀನಾದಲ್ಲಿ (China) ಈ ಹಿಂದೆ 77,736 ರೂ. ಗೆ ಮಾರಾಟವಾಗುತ್ತಿತ್ತು. ಆದರೆ ಬೆಲೆ ಕಡಿತದ ನಂತರ, ಇದು  54,872 ರೂ. ಗೆ ಮಾರಾಟವಾಗುತ್ತಿದೆ. 

ಇದನ್ನೂ ಓದಿ : ಚೀನಾದಲ್ಲಿ ಧೂಳೆಬ್ಬಿಸಿದ ನಂತರ ಭಾರತಕ್ಕೂ ಲಗ್ಗೆಇಟ್ಟಿದೆ ಈ 5 ಜಿ ಸ್ಮಾರ್ಟ್ ಫೋನ್, ವೈಶಿಷ್ಟ್ಯ ತಿಳಿದರೆ ಎಂಥವರೂ ದಂಗಾಗಬೇಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News