Online Scam: ಜಗತ್ತಿನ ಪ್ರಸಿದ್ದ ಪ್ಲಾಟ್‌ಫಾರ್ಮ್‌ಗಳಾದ ಯೂಟ್ಯೂಬ್ ಮತ್ತು ವಾಟ್ಸಾಪ್ ಬಳಕೆದಾರರೇ ಇವರ ಟಾರ್ಗೆಟ್, ಜಸ್ಟ್ ಒನ್ ಬಟನ್ ಒತ್ತಿದ್ರೆ ಬಳಕೆದಾರರಿಗೆ ಗೊತ್ತಿಲ್ಲದಂತೆಯೇ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್. ಇದು ಇತ್ತೀಚೆಗೆ ಮುನ್ನಲೆಗೆ ಬಂದಿರುವ ಆನ್ಲೈನ್ ವಂಚನೆ ಪ್ರಕರಣವಾಗಿದೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಯೂಟ್ಯೂಬ್ ವಿಡಿಯೋ ಲಿಂಕ್ ಮಾಡಿ ಹಣ ಗಳಿಸಿ ಎಂದು ಪಾರ್ಟ್ ಟೈಮ್ ಜಾಬ್ ನೀಡುವ ಸೋಗಿನಲ್ಲಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ 'ಪಂಗನಾಮ' ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಜಸ್ಟ್ ಲೈಕ್ ಬಟನ್ ಕ್ಲಿಕ್ ಮಾಡಿ ಪ್ರತಿಯಾಗಿ ಹಣ ಪಡೆಯಿರಿ. ಇದು ಹಣ ಸಂಪಾದಿಸುವ ಸುಲಭ ಮಾರ್ಗ ಎನ್ನುತ್ತಾ ಹ್ಯಾಕರ್‌ಗಳು ಈ ವಂಚನೆ ಎಸಗಿದ್ದಾರೆ ಎಂದು ತಿಳಿದುಬಂದಿದೆ. 


ಲಭ್ಯವಿರುವ ಮಾಹಿತಿಗಳ ಪ್ರಕಾರ, ಸುಲಭವಾಗಿ ಹಣ ಗಳಿಸುವ ಭರವಸೆ ನೀಡಿ ಹ್ಯಾಕರ್‌ಗಳು ಬುಕ್ ಅಂಗಡಿ ಮಾಲೀಕರಿಗೆ ಬರೋಬ್ಬರಿ 56 ಲಕ್ಷ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ- Flipkart Big Diwali Sale: iPhone 15, ಸ್ಯಾಮ್‌ಸಂಗ್ ಸೇರಿದಂತೆ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!


ಹ್ಯಾಕರ್‌ಗಳು ಅಂಗಡಿಯವರನ್ನು ಹೇಗೆ ವಂಚಿಸಿದರು? 


ಮೊದಲಿಗೆ ಪಾರ್ಟ್‌ಟೈಮ್ ಸಂಪಾದನೆಯಲ್ಲಿ ಲಕ್ಷ ಲಕ್ಷ ದುಡಿಯಬಹುದು ಎಂದು ಪುಸ್ತಕದ ಅಂಗಡಿಯವರನ್ನು ಮೋಡಿ ಮಾಡಿದ ಹ್ಯಾಕರ್‌ಗಳು, ಅವರಿಗೆ ಸುಲಭವಾಗಿ ಹಣ ಗಳಿಸುವ ಭರವಸೆ ನೀಡಿ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರಾಗಿ,  ಸ್ಕ್ರೀನ್‌ಶಾಟ್ ಕಳುಹಿಸುವ ಕೆಲಸವನ್ನು  ನೀಡಿದ್ದಾರೆ. ಮೊದ ಮೊದಲಿಗೆ ಕೆಲಸ ಪೂರ್ಣಗೊಂಡ ಬಳಿಕ 123 ರೂ. ಮತ್ತು 492 ರೂ.ಗಳನ್ನು ಖಾತೆಗೆ ಹಾಕಿದ್ದಾರೆ. ಇದರಿಂದ ಸುಲಭವಾಗಿ ಹಣ ಗಳಿಸಬಹುದು ಎಂದು  ನಂಬಿದ್ದ ಪುಸ್ತಕದ ಅಂಗಡಿಯವರನ್ನು ಒಂದು ಟೆಲಿಗ್ರಾಮ್ ಗ್ರೂಪ್ ಗೆ ಸೇರಿಸಲಾಯಿತು. ಅಲ್ಲಿ ಹೆಚ್ಚಿನ ಕಮಿಷನ್‌ಗೆ ಬದಲಾಗಿ ಹಣವನ್ನು ಠೇವಣಿ ಮಾಡಲು ಅವರನ್ನು ಕೇಳಲಾಗಿದೆ. ಮೋಸದ ಜಾಲದ ಅರಿವಿಲ್ಲದೆ ಮಾಲೀಕ 56.7 ಲಕ್ಷ ರೂ. ಹಣ ಠೇವಣಿ ಮಾಡಿದ್ದಾರೆ. ಇದಾದ ಬಳಿಕ ಹ್ಯಾಕರ್‌ಗಳು ಆತನ ಸಂಪರ್ಕ ಕಳೆದುಕೊಂಡಿದ್ದಾರೆ. ನಂತರವಷ್ಟೇ ಆತನಿಗೆ ತಾನು ಮೋಸ ಹೋಗಿರುವುದರ ಅರಿವಾಗಿದ್ದು ಸೈಬರ್ ಕ್ರೈಂ ನಲ್ಲಿ ದೂರು ದಾಖಲಿಸಿದ್ದಾನೆ. 


ಇತ್ತೀಚಿನ ದಿನಗಳಲ್ಲಿ ತ್ವರಿತ ಸಂದೇಶ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿಯೂ ಕೂಡ ವಂಚಕರು ಈ ಲಿಂಕ್ ಕ್ಲಿಕ್ ಮಾಡಿ ನಿಮಗೆ ಉಡುಗೊರೆಯೊಂದು ಕಾದಿದೆ ಎಂದು ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡರೆ ಕ್ಷಣಮಾತ್ರದಲ್ಲೆ ಬ್ಯಾಂಕ್ ಅಕೌಂಟ್ ಸಂಪೂರ್ಣವಾಗಿ ZERO ಆಗುವ ಸಾಧ್ಯತೆ ಇರುವುದರಿಂದ ಇಂತಹ ಯಾವುದೇ ಲಿಂಕ್ ಕ್ಲಿಕ್ ಮಾಡುವುದಾಗಲಿ, ಗೊತ್ತಿಲ್ಲದೆ ಲೈಕ್ ಮಾಡುವುದಾಗಲಿ ಮಾಡಬೇಡಿ. 


ಇದನ್ನೂ ಓದಿ- WhatsApp, Google ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ಬಳಕೆ ಅಪಾಯಕಾರಿಯೇ? ಪ್ರಸಿದ್ಧ ಆ್ಯಪ್‌ಗಳು ಬ್ಯಾನ್


ಕ್ಲಿಕ್, ಲೈಕ್ ಮಾಡಿ ಹಣ ಗಳಿಸಬಹುದು ಎಂಬ ದುರಾಸೆಯಿಂದ ಇಂತಹ ಸಣ್ಣ ತಪ್ಪು ಮಾಡುವುದರಿಂದ ವರ್ಷಗಳಿಂದ ಕಷ್ಟಪಟ್ಟು ಸಂಪಾದಿಸುವ ಹಣವನ್ನು ಕಳೆದುಕೊಳ್ಳಬೇಡಿ. ಇಂತಹ ವಂಚನೆಗಳ ಬಗ್ಗೆ ಜಾಗೃತರಾಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.