Oukitel ಜಾಗತಿಕವಾಗಿ WP20 ಸರಣಿಯ ಇತ್ತೀಚಿನ ಮತ್ತು ನವೀಕರಿಸಿದ ಆವೃತ್ತಿಯಾದ Oukitel WP20 Pro ರಗಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಫೋನ್ ಅನ್ನು ಅಲೈಕ್ಸ್‌ಪ್ರೆಸ್‌ನಲ್ಲಿ ಗ್ಲೋಬಲ್ ಪ್ರೀಮಿಯರ್ ಸೇಲ್ ಅಡಿಯಲ್ಲಿ $109.99 (ರೂ. 8,759) ರಿಯಾಯಿತಿ ದರದಲ್ಲಿ ಬಿಡುಗಡೆ ಮಾಡಲಾಗುವುದು. ಈ ಮಾರಾಟವು ಆಗಸ್ಟ್ 22 ರಿಂದ ಪ್ರಾರಂಭವಾಗುತ್ತದೆ ಮತ್ತು 26 ಆಗಸ್ಟ್ 2022 ರಂದು ಕೊನೆಗೊಳ್ಳುತ್ತದೆ. 


COMMERCIAL BREAK
SCROLL TO CONTINUE READING

Oukitel WP20 Pro ಅದರ ಹಿಂದಿನ WP 20 ನ ಉತ್ತಮ ವೈಶಿಷ್ಟ್ಯಗಳು ಮತ್ತು ಕಾರ್ಯಗಳನ್ನು ಅಳವಡಿಸಿಕೊಂಡಿದೆ, ಆದರೆ ವಿವಿಧ ನವೀಕರಣಗಳು ಮತ್ತು ಅತ್ಯಾಕರ್ಷಕ ಹೊಸ ಕಾರ್ಯಗಳೊಂದಿಗೆ ಬರುತ್ತದೆ ಎನ್ನಲಾಗಿದೆ.   Oukitel WP20 Pro ಆವೃತ್ತಿಯು ಉತ್ತಮ ಶೇಖರಣಾ ಸಾಮರ್ಥ್ಯ ಮತ್ತು ಗಮನಾರ್ಹವಾದ ಯಂತ್ರಾಂಶದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದ್ದು, ಇದರ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ. 


ಇದನ್ನೂ ಓದಿ- ಬಹು ಸಾಧನಕ್ಕಾಗಿ ಒಂದೇ ಚಾರ್ಜರ್


Oukitel WP20 Pro ಹಾಗ್ ಸ್ಟ್ರಾಂಗಸ್ಟ್:
Oukitel WP20 Pro ಅನ್ನು ಕಠಿಣ ಹೊರಾಂಗಣ ಪರಿಸ್ಥಿತಿಗಳಲ್ಲಿ ಹಾಳಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಫೋನ್ IP68/69K ರೇಟಿಂಗ್ ಮತ್ತು ಇತ್ತೀಚಿನ MIL-STD-810H ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು ನೀರು ಮತ್ತು ಧೂಳಿನ ನಿರೋಧಕ ಸ್ಮಾರ್ಟ್‌ಫೋನ್ ಆಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ 1.5 ಮೀಟರ್ ಎತ್ತರದಿಂದ ಬಿದ್ದರೂ ಹಾಳಾಗುವುದಿಲ್ಲ. ಇದಲ್ಲದೆ, ಹೆಚ್ಚಿನ ತಾಪಮಾನ ಮತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಕೇವಲ 297 ಗ್ರಾಂ ತೂಕವಿರುವ ಈ ಫೋನ್ ಬಳಸಲು ಕೂಡ ಆರಾಮದಾಯಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.


Oukitel WP20 ಪ್ರೊ ಬ್ಯಾಟರಿ: 
Oukitel WP20 Pro ನ ಪ್ರಮುಖ ಹೈಲೈಟ್ ಅದರ ಶಕ್ತಿಶಾಲಿ 6300mAh ಬ್ಯಾಟರಿಯಾಗಿದೆ. ಇದು ನಿಮಗೆ 550 ಗಂಟೆಗಳ ಸ್ಟ್ಯಾಂಡ್‌ಬೈ, 55 ಗಂಟೆಗಳ ಕರೆ ಸಮಯ ಮತ್ತು 60 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ನಿಮಗೆ ಸಹಾಯ ಮಾಡುವ OTG ಕಾರ್ಯದೊಂದಿಗೆ ಬರುತ್ತದೆ.  ಬೇಕಾದರೆ ಫೋನ್ ಅನ್ನು ಸುಲಭವಾಗಿ ಮಿನಿ ಪವರ್ ಬ್ಯಾಂಕ್ ಆಗಿ ಪರಿವರ್ತಿಸಬಹುದು ಎನ್ನಲಾಗಿದೆ.


ಇದನ್ನೂ ಓದಿ- ಬರಲಿದೆ ಅತಿ ಕಡಿಮೆ ಬೆಲೆಯ 5G ಫೋನ್‌.. ಲಾಂಚ್‌ ಡೇಟ್, ವೈಶಿಷ್ಟ್ಯ, ಬೆಲೆ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌


Oukitel WP20 ಪ್ರೊ ಕ್ಯಾಮೆರಾ:
Oukitel WP20 Pro 20MP ಹಿಂಭಾಗ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಪ್ಯಾಕ್ ಮಾಡುತ್ತದೆ. ಇದು 5.93-ಇಂಚಿನ HD+ ಡಿಸ್ಪ್ಲೇ, 18:9 ಆಕಾರ ಅನುಪಾತ ಮತ್ತು 720x1440p ರೆಸಲ್ಯೂಶನ್‌ನೊಂದಿಗೆ ಬರುತ್ತದೆ. MediaTek Helio A22 ಪ್ರೊಸೆಸರ್‌ನಿಂದ ನಡೆಸಲ್ಪಡುವ ಇದು 4GB RAM ಮತ್ತು 64GB ROM ನೊಂದಿಗೆ ಬರುತ್ತದೆ. ಇತರ ವೈಶಿಷ್ಟ್ಯಗಳು NFC, ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಇತ್ತೀಚಿನ Android 12OS ಅನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.