ನವದೆಹಲಿ: ಇಂದಿನ ಕಾಲದಲ್ಲಿ ನಮ್ಮ ಜೀವನದಲ್ಲಿ ಹಲವು ಆಪ್ ಗಳಿದ್ದು, ಈ ಆಪ್ ಗಳು ನಮ್ಮ ಜೀವನವನ್ನು ಭಾರಿ ಸರಳಗೊಳಿಸಿವೆ. ಮನೋರಂಜನೆ, ಸಾಮಾಜಿಕ ಮಾಧ್ಯಮ, ಶಾಪಿಂಗ್, ತಿಂಡಿ-ತಿನಸು ವಸ್ತುಗಳು ಹಾಗೂ ಇತರೆ ದಿನನಿತ್ಯ ಬಳಕೆಯ ಕೆಲಸಗಳಿಗೆ ಒಂದೊಂದು ಆಪ್ ಗಳಿವೆ. ಇವುಗಳಿಂದ ಜೀವನವೇನೋ ಸುಲಭವಾಗುತ್ತಿದೆ. ಆದರೆ, ನಮ್ಮ ಸ್ಮಾರ್ಟ್ ಫೋನ್ ಮೆಮರಿ ಮೇಲೆ ಇವು ವಿಪರೀತ ಪರಿಣಾಮ ಬೀರುತ್ತವೆ. ಆದರೆ, ಇದೀಗ ನೀವು ಹಲವು ಆಪ್ ಗಳನ್ನು ಡೌನ್ಲೋಡ್ ಮಾಡಬೇಕಾಗಿಲ್ಲ. ಏಕೆಂದರೆ ಈ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Google ವಿರುದ್ದ ತಾರತಮ್ಯದ ಆರೋಪ ಎಸಗಿದ Paytm


ಮಿನಿ ಆಪ್ ಸ್ಟೋರ್ ಬಿಡುಗಡೆಗೊಳಿಸಿದ PayTM
ಬಳಕೆದಾರರ ಸೌಕರ್ಯಕಾಗಿ ಪೇಟಿಎಂ (PayTM)  ಮಿನಿ ಆಪ್ ಸ್ಟೋರ್ ಲಾಂಚ್ ಮಾಡಿದೆ.  ಇದರ ವಿಶೇಷತೆ ಎಂದರೆ, ಇದರ ಕೇವಲ ಒಂದೇ ಒಂದು ಆಪ್ ಅಡಿ 300 ಕ್ಕೂ ಅಧಿಕ ಆಪ್ ಗಳಿವೆ. ಅಂದರೆ, ಇದನ್ನು ಡೌನ್ ಲೋಡ್ ಮಾಡಿದ ಬಳಿಕ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಹಲವು ಆಪ್ ಇಡುವ ಅವಶ್ಯಕತೆ ಇಲ್ಲ.


ಇದನ್ನು ಓದಿ-ತನ್ನ Playstore ನಿಂದ Paytmಗೆ ಕೊಕ್ ನೀಡಿದ Google... ಕಾರಣ ಇಲ್ಲಿದೆ


ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪೇಟಿಎಂ ತನ್ನ ಮಿನಿ ಆಪ್ ನಲ್ಲಿ ಡಾಮಿನೋಸ್, ಡಿಕೈಥ್ಲಾನ್, ನೆಟ್ ಮೆಡ್, ಫ್ರೆಷಾಮೇನ್ಯೂ ಹಾಗೂ ರಾಪಿಡೋ ಗಳಂತಹ ಹಲವು ಆಪ್ ಗಳು ಒಂದೇ ಕಡೆಗೆ ಸಿಗಲಿವೆ. ಇದಲ್ಲದೆ ಈ ಆಪ್ ಗಳ ಮೇಲೆ ಖರೀದಿ ಸೌಕರ್ಯವೂ ಕೂಡ ನೀಡುತ್ತಿದೆ. ಕಂಪನಿಯ ಬೀಟಾ ವರ್ಶನ್ ಬಿಡುಗಡೆಯ ನಡುವೆಯೇ 12 ಮಿಲಿಯನ್ ವಿಜಿಟರ್ ಗಳು ಈ ಆಪ್ ಸ್ಟೋರ್ ಗೆ ಭೇಟಿ ನೀಡಿದ್ದಾರೆ.