BSNL 4G SIM Port : 2001ರಲ್ಲಿ, BSNL ಸಿಮ್ ಪಡೆಯುವುದು ಕಷ್ಟದ ವಿಷಯವಾಗಿತ್ತು.ಸಿಮ್‌ನ ವೈಟಿಂಗ್ ಪಿರೀಯೇಡ್ 6ರಿಂದ ಒಂದು ವರ್ಷದವರೆಗೆ ಇರುತ್ತಿತ್ತು.ಸಿಮ್ ಪಡೆಯಬೇಕಾದಾಗ ಜನರು ಸರದಿಯಲ್ಲಿ ನಿಲ್ಲಬೇಕಾದ ಕಾಲವಿತ್ತು. ಆ ಬಳಿಕ ಖಾಸಗಿ ಟೆಲಿಕಾಂ ಕಂಪನಿಗಳು ಬಂದು ಬಿಎಸ್‌ಎನ್‌ಎಲ್‌ ಈ ರೇಸ್ ನಲ್ಲಿ ಹಿಂದೆ ಬೀಳುವ ಹಾಗಾಯಿತು.ಆದರೆ,ಸುಮಾರು 23 ವರ್ಷಗಳ ನಂತರ ಮತ್ತೆ ಬಿಎಸ್‌ಎನ್‌ಎಲ್‌ ಬಗ್ಗೆ ಜನರ ಕ್ರೇಜ್ ಹೆಚ್ಚುತ್ತಿದೆ. Jio, Airtel ಮತ್ತು Vi ತಮ್ಮ ಪ್ರಿಪೇಯ್ಡ್ ಯೋಜನೆಗಳನ್ನು ದುಬಾರಿ ಮಾಡಿದ ತಕ್ಷಣ, ಈಗ ಜನ ಮತ್ತೆ BSNL ಕಡೆಗೆ ಮುಖ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸರ್ಕಾರಿ ಟೆಲಿಕಾಂ ಕಂಪನಿಯು ಇಡೀ ದೇಶದಲ್ಲಿ 4G ತರಲು ಹೊರಟಿದೆ. ಇದಾದ ಮೇಲೆ ಜನ  BSNL ಕಡೆಗೆ ಬರುತ್ತಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಬಿಎಸ್‌ಎನ್‌ಎಲ್‌ನ ಚಂದಾದಾರರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಹೆಚ್ಚುತ್ತಿರುವ ಚಂದಾದಾರರ ಸಂಖ್ಯೆ :
BSNL ನ ಚಂದಾದಾರರ ಬೇಸ್ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.4ಜಿ ನೆಟ್‌ವರ್ಕ್ ಸಿದ್ಧವಾಗಿದ್ದು, 5ಜಿಗೆ ಪರಿವರ್ತಿಸುವ ಕೆಲಸವೂ ಆರಂಭವಾಗಿದೆ.ಸ್ವಾವಲಂಬಿ ಭಾರತದ ಅಡಿಯಲ್ಲಿ ಸ್ವದೇಶಿ ತಂತ್ರಜ್ಞಾನದೊಂದಿಗೆ 4ಜಿ ನೆಟ್‌ವರ್ಕ್ ಸಿದ್ಧವಾಗಿದೆ ಎಂದು ಹೇಳಿದರು. ಕೆಲವೇ ತಿಂಗಳುಗಳಲ್ಲಿ ಇದು ದೇಶಾದ್ಯಂತ ಲಭ್ಯವಾಗಲಿದೆ.


ಇದನ್ನೂ ಓದಿ : ಏರ್ ಟೆಲ್, ಜಿಯೋಗೆ ಫುಲ್ ಟಕ್ಕರ್ :ಲಾಂಚ್ ಆಯಿತು BSNL 5G SIM, ಗ್ರಾಹಕರಿಗೆ ಈ ದಿನದಿಂದ ಲಭ್ಯ


Jio, Airtel ಮತ್ತು Vodafone 4G ನೆಟ್‌ವರ್ಕ್ ಅನ್ನು ಪ್ರಾರಂಭಿಸಿದಾಗ, BSNL  ಇನ್ನೂ ಯಾಕೆ 4G ನೆಟ್‌ವರ್ಕ್ ನೀಡುತ್ತಿಲ್ಲ ಎನ್ನುವುದು ಅನೇಕರ ಪ್ರಶ್ನೆಯಾಗಿತ್ತು. ಆದರೆ ನಾವು ಸರ್ಕಾರಿ ಕಂಪನಿಯ ನೆಟ್‌ವರ್ಕ್ ಅನ್ನು ನಿರ್ಮಿಸಬೇಕಾದರೆ, ಚೀನಾ ಅಥವಾ ಬೇರೆ ಯಾವುದೇ ದೇಶದ ಉಪಕರಣಗಳನ್ನು ಬಳಸುವುದು ಬೇಡ ಎಂದು ಪ್ರಧಾನಿ ನಿರ್ಧರಿಸಿದ್ದರು. ಸ್ವದೇಶಿ ತಂತ್ರಜ್ಞಾನದ ಮೂಲಕವೇ 4G ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದರು.


ಟವರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ : 
ಟವರ್ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ.ತೇಜಾ ನೆಟ್‌ವರ್ಕ್,ಸಿ-ಡಾಟ್ ಮತ್ತು ಟಿಸಿಎಸ್‌ನಂತಹ ಭಾರತೀಯ ಕಂಪನಿಗಳು ಇದರಲ್ಲಿ ಭಾಗಿಯಾಗಿವೆ ಎಂದು ಅವರು ಹೇಳಿದರು.'ಅಕ್ಟೋಬರ್ ಒಳಗೆ 80 ಸಾವಿರ ಟವರ್ ಗಳನ್ನು ಅಳವಡಿಸಿ, ಮುಂದಿನ ವರ್ಷ ಮಾರ್ಚ್ ವೇಳೆಗೆ ಉಳಿದ 21 ಸಾವಿರ ಅಂದರೆ 2025ರ ಮಾರ್ಚ್ ವೇಳೆಗೆ ಒಂದು ಲಕ್ಷ 4ಜಿ ಟವರ್ ಗಳನ್ನು ಅಳವಡಿಸಲಾಗುವುದು' ಎಂದರು.


ಇದನ್ನೂ ಓದಿ : ಕೇವಲ 4ರಿಂದ 5 ಲಕ್ಷಕ್ಕೆ ಬಿಎಂಡಬ್ಲ್ಯು, ಆಡಿಯಂತಹ ಕಾರುಗಳು : ಖರೀದಿಗಾಗಿ ಗ್ರಾಹಕರ ನೂಕು ನುಗ್ಗಲು


4G ಅನ್ನು 5Gಗೆ ಪರಿವರ್ತಿಸಲು ಸಾಧ್ಯ :
ಇದೀಗ ಅತಿ ವೇಗವಾಗಿ ಡೌನ್‌ಲೋಡ್ ಮಾಡುವುದು ಸಾಧ್ಯವಾಗುತ್ತದೆ. ಟಿವಿ ನೋಡುವ ಮೋಜನ್ನು ದ್ವಿಗುಣಗೊಳಿಸುತ್ತದೆ.ನಾವು ಇದೇ 4G ಕೋರ್‌ನಲ್ಲಿ 5G ಅನ್ನು ಚಲಾಯಿಸಬಹುದು. 5G ಸೇವೆಗಳಿಗಾಗಿ, ಟವರ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆ ಕೆಲಸ ನಡೆಯುತ್ತಿದೆ.ಶೀಘ್ರದಲ್ಲೇ ನಾವು 4G ಯಿಂದ 5G ಗೆ  ಶಿಫ್ಟ್ ಆಗುವ ಕೆಲಸ ಪೂರ್ಣಗೊಳ್ಳಲಿದೆ ಎಂದು ಸಿಂಧಿಯಾ  ಹೇಳಿದ್ದಾರೆ.ಇದೀಗ ಟೆಲಿಕಾಂ ಗ್ರಾಹಕರು ಖಾಸಗಿ ಕಂಪನಿಗಳಿಂದ BSNLನಟ್ಟ ಮತ್ತೆ ಮುಖ ಮಾಡುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. 


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.