ಏರ್ ಟೆಲ್, ಜಿಯೋಗೆ ಫುಲ್ ಟಕ್ಕರ್ :ಲಾಂಚ್ ಆಯಿತು BSNL 5G SIM, ಗ್ರಾಹಕರಿಗೆ ಈ ದಿನದಿಂದ ಲಭ್ಯ

BSNL 5G SIM Viral Video: ಬಿಎಸ್‌ಎನ್‌ಎಲ್ 5ಜಿ ಸಿಮ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಮ್ ಕಾರ್ಡ್‌ನಲ್ಲಿ '5G ರೆಡಿ' ಎಂದು ಬರೆಯಲಾಗಿದೆ.  

Written by - Ranjitha R K | Last Updated : Aug 2, 2024, 04:00 PM IST
  • BSNL ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ 5G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ
  • ತನ್ನ ಮೂಲಸೌಕರ್ಯವನ್ನು 4G ಮತ್ತು 5G ಸೇವೆಗಳಿಗಾಗಿ ಟೆಸ್ಟಿಂಗ್
  • ಈ ಕಂಪನಿಗಳು BSNLನ ನೆಟ್ವರ್ಕ್ ಅನ್ನು ಬಳಸಿಕೊಂಡು 5G ಪ್ರಯೋಗಗಳನ್ನು ನಡೆಸುತ್ತವೆ.
ಏರ್ ಟೆಲ್, ಜಿಯೋಗೆ ಫುಲ್ ಟಕ್ಕರ್ :ಲಾಂಚ್ ಆಯಿತು BSNL 5G SIM, ಗ್ರಾಹಕರಿಗೆ ಈ ದಿನದಿಂದ ಲಭ್ಯ  title=

BSNL 5G SIM Viral Video: BSNL ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ 5G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.ಸರ್ಕಾರಿ ಕಂಪನಿಯು ತನ್ನ ಮೂಲಸೌಕರ್ಯವನ್ನು 4G ಮತ್ತು 5G ಸೇವೆಗಳಿಗಾಗಿ ಟೆಸ್ಟಿಂಗ್ ನಡೆಸುತ್ತಿದೆ.  ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಶನ್ ಟೆಕ್ನಾಲಜಿ ಎಂಟರ್‌ಪ್ರೈಸಸ್ (VoICE) ಹೆಸರಿನ ಭಾರತೀಯ ಟೆಲಿಕಾಂ ಕಂಪನಿಗಳ ಗುಂಪಿನ ವರದಿಯ ಪ್ರಕಾರ, ಈ ಕಂಪನಿಗಳು BSNL ನ ಮೂಲಸೌಕರ್ಯವನ್ನು ಬಳಸಿಕೊಂಡು ಸಾರ್ವಜನಿಕರಿಗೆ 5G ಪ್ರಯೋಗಗಳನ್ನು ನಡೆಸಲು ಸಿದ್ಧವಾಗಿವೆ.ಈ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಾ ನೆಟ್‌ವರ್ಕ್ಸ್, ವಿಎನ್‌ಎಲ್,ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್‌ಎಫ್‌ಸಿಎಲ್‌ನಂತಹ ಕಂಪನಿಗಳು ಸೇರಿವೆ.ಈ ಕಂಪನಿಗಳು BSNLನ ನೆಟ್ವರ್ಕ್ ಅನ್ನು ಬಳಸಿಕೊಂಡು 5G ಪ್ರಯೋಗಗಳನ್ನು ನಡೆಸುತ್ತವೆ. 

ಸರ್ಕಾರವು BSNLಗೆ 700 MHz, 2200 MHz, 3300 MHz ಮತ್ತು 26 GHz ಸ್ಪೆಕ್ಟ್ರಮ್ ಬ್ಯಾಂಡ್‌ಗಳನ್ನು ಹಂಚಿಕೆ ಮಾಡಿದೆ.ಈ ಸ್ಪೆಕ್ಟ್ರಮ್ನೊಂದಿಗೆ, BSNL ದೇಶಾದ್ಯಂತ 4G ಮತ್ತು 5G ನೆಟ್ವರ್ಕ್ ಗಳನ್ನು ಒದಗಿಸುತ್ತದೆ. 

ಇದನ್ನೂ ಓದಿ : ಕೇವಲ 4ರಿಂದ 5 ಲಕ್ಷಕ್ಕೆ ಬಿಎಂಡಬ್ಲ್ಯು, ಆಡಿಯಂತಹ ಕಾರುಗಳು : ಖರೀದಿಗಾಗಿ ಗ್ರಾಹಕರ ನೂಕು ನುಗ್ಗಲು

ಬಿಎಸ್‌ಎನ್‌ಎಲ್ 5ಜಿ ಸಿಮ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  : 
ಈಗ ವೈರಲ್ ಆಗುತ್ತಿರುವ ವಿಡಿಯೋ ಮಹಾರಾಷ್ಟ್ರದ ಕೆಲವು ಬಿಎಸ್‌ಎನ್‌ಎಲ್ ಕಚೇರಿಯಿಂದ ಹೊರ ಬಂದಿರುವುದು ಎನ್ನಲಾಗುತ್ತಿದೆ. ಈ ವಿಡಿಯೋದಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿಗಳು ಸಿಮ್ ಕಾರ್ಡ್ ಪ್ಯಾಕೆಟ್‌ಗಳನ್ನು ತೆರೆಯುತ್ತಿರುವುದು ಕಂಡುಬಂದಿದೆ. ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್‌ನಲ್ಲಿ 5ಜಿ ಲೋಗೋ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.ಆದರೆ,ಈ ಸಿಮ್ ಕಾರ್ಡ್‌ಗಳು ಪರೀಕ್ಷೆಗಾಗಿಯೇ ಅಥವಾ ಸಾಮಾನ್ಯ ಜನರಿಗಾಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. BSNL ಇನ್ನೂ 5G ಮತ್ತು 4G ಸೇವೆಗಳನ್ನು ಪ್ರಾರಂಭಿಸಿಲ್ಲ. ಸಿಮ್ ಕಾರ್ಡ್‌ನಲ್ಲಿ '5G ರೆಡಿ' ಎಂದು ಬರೆಯಲಾಗಿದೆ.ಅಂದರೆ ಈ ಸಿಮ್ 5G ನೆಟ್ ವರ್ಕ್ ಅನ್ನು ಬೆಂಬಲಿಸುತ್ತದೆ ಎಂದರ್ಥ. 

 

 

ಎಲ್ಲಿ ನಡೆಯುತ್ತಿದೆ BSNL 5G ಟ್ರಯಲ್ ? :
ದೆಹಲಿ, ಬೆಂಗಳೂರು ಮತ್ತು ಚೆನ್ನೈನ ಕೆಲವು ಪ್ರಮುಖ ಸ್ಥಳಗಳಲ್ಲಿ 5G ಪ್ರಯೋಗಗಳು ನಡೆಯಲಿವೆ. ಈ ಸ್ಥಳಗಳಲ್ಲಿ ಬೆಂಗಳೂರಿನ ಸರ್ಕಾರಿ ಕಚೇರಿ, ದೆಹಲಿಯ ಸಂಚಾರ ಭವನ, ಕನ್ನಾಟ್ ಪ್ಲೇಸ್, JNU ಕ್ಯಾಂಪಸ್ ಮತ್ತು IIT ದೆಹಲಿ, ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್, ಗುರುಗ್ರಾಮ್ ಮತ್ತು IIT ಹೈದರಾಬಾದ್‌ನ ಕೆಲವು ಆಯ್ದ ಸ್ಥಳಗಳು ಸೇರಿವೆ.

ಇದನ್ನೂ ಓದಿ :  5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News