ಬೆಂಗಳೂರು : ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಜನವರಿ 2023 ರ ತನ್ನ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.  2022 ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜನವರಿ 2023 ರಲ್ಲಿ ಈ ಕಂಪನಿಯ ಸ್ಕೂಟರ್ ಮಾರಾಟದಲ್ಲಿ 18.4 ಶೇಕಡಾ ಹೆಚ್ಚಳವಾಗಿದೆ.    ಮಾಸಿಕ ಆಧಾರದ ಮೇಲೆ ನೋಡಿದಾಗ ಕಳೆದ ತಿಂಗಳು ಸ್ಕೂಟರ್ ಮಾರಾಟದಲ್ಲಿ 18.4 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಆದರೆ, ವಾರ್ಷಿಕ ಆಧಾರದಲ್ಲಿ ನೋಡಿದಾಗ ಇದರಲ್ಲಿ ಇಳಿಮುಖ ಕಾಣುತ್ತದೆ. ವಾರ್ಷಿಕ ಆಧಾರದ ಮೇಲೆ ಮಾರಾಟ ಕಡಿಮೆಯಾಗಿದೆ


COMMERCIAL BREAK
SCROLL TO CONTINUE READING

ಈ ಜಪಾನಿನ ವಾಹನ ತಯಾರಕ ಕಂಪನಿ ಭಾರತೀಯ ಅಂಗಸಂಸ್ಥೆಯಾದ HMSI ಕಳೆದ ತಿಂಗಳು ಅಂದರೆ ಜನವರಿಯಲ್ಲಿ 2,96,363 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ವಾರ್ಷಿಕ ಲೆಕ್ಕಾಚಾರದ ಪ್ರಕಾರ ನೋಡಿದಾಗ ಈ ಅಂಕಿ ಅಂಶದಲ್ಲಿ 16 ಪ್ರತಿಶತದಷ್ಟು ಕುಸಿತವಾಗಿದೆ. ಕೇಳದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 2,78,143 ಯುನಿಟ್‌ಗಳನ್ನು  ಮಾರಾಟ ಮಾಡಿದ್ದರೆ, ಉಳಿದ 18,220 ಯುನಿಟ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆ. 


ಇದನ್ನೂ ಓದಿ : 6 ಲಕ್ಷಕ್ಕಿಂತ ಕಡಿಮೆ ಬೆಲೆಯ SUV ಇವು ! ವೈಶಿಷ್ಟ್ಯ ಕೂಡಾ ಸೂಪರ್


ಕಳೆದ ವರ್ಷ ಅಂದರೆ 2022ರ ಜನವರಿಯಲ್ಲಿ ಹೋಂಡಾದ ಮಾರಾಟದ ಅಂಕಿ ಅಂಶವು 3,54,209 ಯುನಿಟ್‌ಗಳಾಗಿತ್ತು. 3,15,196 ಯೂನಿಟ್ ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, 39,013  ಯೂನಿಟ್ ಗಳನ್ನೂ  ರಫ್ತು ಮಾಡಲಾಗಿತ್ತು. 


ತಿಂಗಳ ಆಧಾರದ ಮೇಲೆ ಹೆಚ್ಚಾದ ಮಾರಾಟ : 
MoM  ಅಂದರೆ ತಿಂಗಳ ಆಧಾರದ ಮೇಲೆ  ನೋಡುವುದಾದರೆ  ಡಿಸೆಂಬರ್ 2022 ಕ್ಕೆ ಹೋಲಿಸಿದರೆ ಜನವರಿ 2023 ರಲ್ಲಿ ಹೋಂಡಾದ ಮಾರಾಟದ ಕಾರ್ಯಕ್ಷಮತೆ ಉತ್ತಮವಾಗಿದೆ. ಜನವರಿ ತಿಂಗಳ ಮಾರಾಟದಲ್ಲಿ 18.4ರಷ್ಟು ಮಾರಾಟ ಹೆಚ್ಚಳವಾಗಿದೆ. ಡಿಸೆಂಬರ್ 2022 ರಲ್ಲಿ ಒಟ್ಟು 2,50,171 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಜನವರಿಯಲ್ಲಿ ಈ ಸಂಖ್ಯೆ 2,96,363 ಯುನಿಟ್‌ಗಳನ್ನು ತಲುಪಿದೆ. 


ಇದನ್ನೂ ಓದಿ : ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ


ಅಟ್ಸುಶಿ ಒಗಾಟಾ ಏನು ಹೇಳಿದ್ದೇನು ? :
ಜನವರಿ 2023 ರಲ್ಲಿ ಮಾರಾಟದ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅಟ್ಸುಶಿ ಒಗಾಟಾ, “HMSI ಇತ್ತೀಚೆಗೆ ತನ್ನ ಮೊದಲ OBD2 ಮಾಡೆಲ್ ಅನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಸರ್ಕಾರ ನೀಡಿರುವ ಗಡುವುಗಿಂತ ಮೊದಲೇ OBD2 ಮಾಡೆಲ್  ಅನ್ನು ಸ್ಮಾರ್ಟ್ ಕೀಯೊಂದಿಗೆ ಬಿಡುಗಡೆ ಮಾಡಲಾಗಿದೆ. HMSI ಶೀಘ್ರದಲ್ಲೇ ಹೊಸ ಮಾನದಂಡಗಳನ್ನು ಪೂರೈಸಲು ತನ್ನ ಇತರ  ತನ್ನ ಇತರ ಪ್ರಾಡಕ್ಟ್ ಗಳನ್ನು ಅಪ್ಗ್ರೇಡ್ ಮಾಡುವುದಾಗಿ  ಹೇಳಿದ್ದಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.