ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ

ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಯಲ್ಲಿನ ಮಾನ್ಯತೆಯನ್ನು ಹೆಚ್ಚಿಸಿದೆ. ಇದರಿಂದ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್, ಹೆಚ್ಚಿನ ಡಾಟಾ ಸೌಲಭ್ಯವೂ  ದೊರೆಯಲಿದೆ.

Written by - Yashaswini V | Last Updated : Feb 2, 2023, 01:15 PM IST
  • ಏರ್‌ಟೆಲ್ ತನ್ನ ಜನಪ್ರಿಯ ಪ್ರೀಪೈಡ್ ಯೋಜನೆಯ ಮಾನ್ಯತೆಯನ್ನು ಹೆಚ್ಚಿಸಿದೆ.
  • ಇದರಿಂದ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್, ಹೆಚ್ಚಿನ ಡಾಟಾ ಸೌಲಭ್ಯವೂ ದೊರೆಯಲಿದೆ.
  • ಏರ್‌ಟೆಲ್ ಪ್ರೀಪೈಡ್ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ
ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ
Airtel Prepaid Plan

ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಆದ ಹೆಸರು ಮಾಡಿರುವ ಏರ್‌ಟೆಲ್ ಇತ್ತೀಚೆಗಷ್ಟೇ ತನ್ನ ಜನಪ್ರಿಯ ಯೋಜನೆಗಳ ದರ ಹೆಚ್ಚಿಸುವ ಮೂಲಕ ಬಾರೀ ಚರ್ಚೆಯಲ್ಲಿತ್ತು. ಇದೀಗ ಏರ್‌ಟೆಲ್ ತನ್ನ ಗ್ರಾಹಕರಿಗೆ ಬಂಪರ್ ಗಿಫ್ಟ್ ಒಂದನ್ನು ನೀಡಿದ್ದು, ಹೆಚ್ಚಿನ ಬೇಡಿಕೆಯಿರುವ ಪ್ರೀಪೈಡ್ ಯೋಜನೆಯೊಂದರ ಮಾನ್ಯತೆಯನ್ನು ಹೆಚ್ಚಿಸಿದೆ. 

ಏರ್‌ಟೆಲ್ 359 ರೂ.ಗಳ ಪ್ರೀಪೈಡ್ ಯೋಜನೆಯ ಮಾನ್ಯತೆಯನ್ನು ಹೆಚ್ಚಿಸಿದೆ.  ಈ ಯೋಜನೆಯಲ್ಲಿ ಬದಲಾವಣೆ ಮಾಡಿರುವ ಏರ್‌ಟೆಲ್ 28 ದಿನಗಳ ಮಾನ್ಯತೆಯನ್ನು ಒಂದು ತಿಂಗಳವರೆಗೆ ಅಂದರೆ 30  ದಿನಗಳವರೆಗೆ ಹೆಚ್ಚಿಸಿದೆ.  ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಡಾಟಾ ಸೌಲಭ್ಯವೂ ಲಭ್ಯವಿದೆ.

ಇದನ್ನೂ ಓದಿ- ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಪವರ್‌ಬ್ಯಾಂಕ್

ಏರ್‌ಟೆಲ್ 359 ರೂ.ಗಳ ಪ್ರೀಪೈಡ್ ಯೋಜನೆಯ ಪ್ರಯೋಜನಗಳು:
* ಏರ್‌ಟೆಲ್‌ನ 359 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ 30 ದಿನಗಳ ಮಾನ್ಯತೆ ಇರಲಿದೆ.
* ಇದರಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿರಲಿದೆ.
* ಇದಲ್ಲದೆ, ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಸೌಲಭ್ಯ ಮತ್ತು ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯವೂ ಲಭ್ಯವಿರಲಿದೆ.

ಇದನ್ನೂ ಓದಿ- ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ.! ಇಲ್ಲವಾದರೆ ಖಾಲಿಯಾವುದು ಖಾತೆ

ಇತರ ಪ್ರಯೋಜನಗಳು:
>> ಏರ್‌ಟೆಲ್‌ನ 359 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ನ 28 ದಿನಗಳ ಉಚಿತ ಚಂದಾದಾರಿಕೆ, SonyLiv, LionsgatePlay ಮತ್ತು ErosNow ನ ಚಂದಾದಾರಿಕೆ ಹೆಚ್ಚುವರಿ ಪ್ರಯೋಜನಗಳಲ್ಲಿ ಲಭ್ಯವಿದೆ.
>> ಬಳಕೆದಾರರು ಅಪೊಲೊ 24X7 ವೃತ್ತಕ್ಕೆ 3 ತಿಂಗಳ ಚಂದಾದಾರಿಕೆಯನ್ನು ಇದರಲ್ಲಿ ಪಡೆಯಲಿದ್ದಾರೆ.
>> ಫಾಸ್ಟ್ಯಾಗ್‌ನಲ್ಲಿ 100 ರೂ.ಗಳ ಕ್ಯಾಶ್‌ಬ್ಯಾಕ್ ಕೂಡ ಇದರಲ್ಲಿ ಲಭ್ಯವಿದೆ. 
>> ಇಷ್ಟೇ ಅಲ್ಲದೆ, ಈ ಪ್ರೀಪೈಡ್ ಯೋಜನೆಯಲ್ಲಿ ಹಲೋ ಟ್ಯೂನ್ಸ್ ಮತ್ತು ವೈಂಕ್‌ಗೆ ಉಚಿತ ಪ್ರವೇಶವೂ ಲಭ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News