ಹೆಚ್ಚು ಬಾಳಿಕೆ ಬರಬೇಕಾದರೆ ಚಳಿಗಾಲದಲ್ಲಿ ಇಷ್ಟೇ ಇರಲಿ ಫ್ರಿಜ್ ಟೆಂಪರೇಚರ್ !
ಬೇಸಿಗೆ ಮತ್ತು ಚಳಿಗಾಲದಲ್ಲಿ ಹೊರಗಿನ ವಾತಾವರಣ ಬೇರೆ ಬೇರೆಯಾಗಿರುತ್ತದೆ. ವರ್ಷ ಪೂರ್ತಿ ಒಂದೇ ಟೆಂಪರೇಚರ್ ನಲ್ಲಿ ಫ್ರಿಜ್ ಅನ್ನು ರನ್ ಮಾಡುವುದು ತಪ್ಪು.
ಬೆಂಗಳೂರು : ಹವಾಮಾನಕ್ಕೆ ತಕ್ಕಂತೆ ಫ್ರಿಜ್ ಟೆಂಪರೇಚರ್ ಅನ್ನು ಬದಲಾಯಿಸುತ್ತಾ ಇರಬೇಕು. ಬೇಸಿಗೆಯಲ್ಲಿ, ಮಳೆಗಾಲಕ್ಕೆ ಹೊಂದಿಸಿದ ಟೆಂಪರೇಚರ್ ಅನ್ನೇ ಚಳಿಗಾಲಕ್ಕೂ ಸೆಟ್ ಮಾಡಿದಬಾರದು. ಅಥವಾ ವರ್ಷ ಪೂರ್ತಿ ಒಂದೇ ಟೆಂಪರೇಚರ್ ನಲ್ಲಿ ಫ್ರಿಜ್ ಅನ್ನು ರನ್ ಮಾಡುವುದು ಕೂಡಾ ತಪ್ಪು. ಹೀಗೆ ಮಾಡಿದರೆ ಇದು ಫ್ರಿಜ್ ಬೇಗನೆ ಕೆಟ್ಟು ಹೋಗುವುದಕ್ಕೆ ಕಾರಣವಾಗಬಹುದು.
ಬೇಸಿಗೆ ಮತ್ತು ಚಳಿಗಾಲದಲ್ಲಿ ಹೊರಗಿನ ವಾತಾವರಣ ಬೇರೆ ಬೇರೆಯಾಗಿರುತ್ತದೆ. ಚಳಿಗಾಲದಲ್ಲಿ ಹೊರಗಿನ ಉಷ್ಣತೆ ತಣ್ಣಗಿರುವ ಕಾರಣ ಫ್ರಿಡ್ಜ್‌ನ ತಾಪಮಾನವನ್ನು ಬೇಸಿಗೆಯ ತಾಪಮಾನದಲ್ಲಿ ಇಡಬಾರದು.ಒಂದು ವೇಳೆ ಅಸಡ್ಡೆ ತೋರಿ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ : ಸರ್ಕಾರದಿಂದ ಬಿಗ್ Digital Strike: ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಸ್ ಬ್ಲಾಕ್..!
ಚಳಿಗಾಲದಲ್ಲಿ ಫ್ರಿಜ್ ತಾಪಮಾನವನ್ನು ಹೆಚ್ಚಿಸದಿದ್ದರೆ, ಫ್ರಿಜ್ ನಲ್ಲಿ ಇಟ್ಟಿರುವ ವಸ್ತುಗಳು ಫ್ರೀಜ್ ಆಗಬಹುದು.ಕೆಲವೊಮ್ಮೆ ಹಾಳಾಗಲೂಬಹುದು.ಈ ಸಮಸ್ಯೆಯನ್ನು ತಪ್ಪಿಸಲು ಚಳಿಗಾಲದಲ್ಲಿ ಫ್ರಿಡ್ಜ್ ನ ಉಷ್ಣತೆಯನ್ನು ಕೆಲವು ಡಿಗ್ರಿಗಳಷ್ಟು ಹೆಚ್ಚಿಸಬೇಕಾಗುತ್ತದೆ.
ಡಿ-ಫ್ರಾಸ್ಟ್ :
ಚಳಿಗಾಲದಲ್ಲಿ ಫ್ರಿಜ್ ಅನ್ನು ಪದೇ ಪದೇ ಡಿಫ್ರಾಸ್ಟ್ ಮಾಡಬೇಕು.ಇಲ್ಲವಾದರೆ ಫ್ರಿಜ್ ಒಳಗೆ ಅತಿಯಾದ ಮಂಜುಗಡ್ಡೆಯು ಒಳಗೆ ನಿರ್ಮಾಣವಾಗುತ್ತದೆ. ಇದರಿಂದಾಗಿ ಫ್ರಿಡ್ಜ್‌ನ ಉಷ್ಣತೆಯು ಕಡಿಮೆಯಾಗಿ ಒಳಗಿನ ಆಹಾರವು ಬೇಗನೆ ಕೆಡುತ್ತದೆ. ಮಾತ್ರವಲ್ಲ ಫ್ರಿಜ್‌ನ ಕಂಪ್ರೆಸರ್ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಕಾರಣಗಳಿಂದಾಗಿ ಫ್ರಿಜ್ ಬೇಗನೇ ಹಾಳಾಗುತ್ತದೆ.
ಇದನ್ನೂ ಓದಿ : ದಿಢೀರ್ ಕುಸಿತ ಕಂಡ iPhone 14 ಬೆಲೆ ! Stock ಮುಗಿಯುವ ಮುನ್ನ ಬೇಗ ಖರೀದಿಸಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ರೆಫ್ರಿಜರೇಟರ್‌ಗಳು 1 ರಿಂದ 5 ರವರೆಗಿನ ಸಂಖ್ಯೆಯನ್ನು ಹೊಂದಿವೆ. ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಮಧ್ಯಮ ಅಂದರೆ 3 ರಿಂದ 4 ರವರೆಗೆ ಇಡುವುದು ಸೂಕ್ತವಾಗಿದೆ. ಆದರೆ ಚಳಿಗಾಲದಲ್ಲಿ ಫ್ರಿಜ್ ಅನ್ನು ನಂಬರ್ 1 ನಲ್ಲಿ ಇರಿಸಿದರೆ ಸಾಕಾಗುತ್ತದೆ.
ತರಕಾರಿ ಚೇಂಬರ್ :
ನಿಮ್ಮ ಫ್ರಿಡ್ಜ್‌ನಲ್ಲಿ ತರಕಾರಿ ಚೇಂಬರ್ ಇದ್ದರೆ, ಚಳಿಗಾಲದಲ್ಲಿ, ತರಕಾರಿ ಚೇಂಬರ್ ತಾಪಮಾನವನ್ನು 5 ರಿಂದ 7 ಡಿಗ್ರಿಗಳ ನಡುವೆ ಇಡಬೇಕು. ಹೀಗಾದರೆ 10 ರಿಂದ 15 ದಿನಗಳವರೆಗೆ ತರಕಾರಿಗಳನ್ನು ತಾಜಾವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ