ಹೀಟರ್,ಗೀಸರ್ ಬೇಡವೇ ಬೇಡ !ಈ ಬಕೆಟ್ ಇದ್ದರೆ ಸಾಕು!ಇದರೊಳಗೆ ಹಾಕಿದ ಕೂಡಲೇ ಕೊತ ಕೊತ ಕುದಿಯುತ್ತದೆ ನೀರು ! ದುಬಾರಿ ವಿದ್ಯುತ್ ಬಿಲ್ ನ ಚಿಂತೆಯೂ ಇಲ್ಲ

Instant Bucket Water Heater: ಈ ಬಕೆಟ್ ವಿಶೇಷ ತಂತ್ರಜ್ಞಾನವನ್ನು ಹೊಂದಿದ್ದು, ಇದರೊಳಗೆ ತಣ್ಣೀರು ಸುರಿದ ತಕ್ಷಣ ಬಿಸಿಯಾಗುತ್ತದೆ. ಇದರ ಬೆಲೆಯು ಗೀಸರ್‌ಗಿಂತ ಕಡಿಮೆ. 

Written by - Ranjitha R K | Last Updated : Nov 11, 2024, 12:26 PM IST
  • ಚಳಿಗಾಲದಲ್ಲಿ ಬಿಸಿ ನೀರಿನ ಬಳಕೆ ಹೆಚ್ಚು.
  • ಸಣ್ಣ ಗೀಸರ್ ನಲ್ಲಿನ ನೀರು ಬಹಳ ಬೇಗನೆ ತಣ್ಣಗಾಗುತ್ತದೆ.
  • ದೊಡ್ಡ ಗೀಸರ್‌ಗಳು ಸಾಕಷ್ಟು ದುಬಾರಿಯಾಗಿರುತ್ತದೆ.
ಹೀಟರ್,ಗೀಸರ್ ಬೇಡವೇ ಬೇಡ !ಈ ಬಕೆಟ್ ಇದ್ದರೆ ಸಾಕು!ಇದರೊಳಗೆ  ಹಾಕಿದ ಕೂಡಲೇ ಕೊತ ಕೊತ ಕುದಿಯುತ್ತದೆ ನೀರು ! ದುಬಾರಿ ವಿದ್ಯುತ್ ಬಿಲ್ ನ ಚಿಂತೆಯೂ ಇಲ್ಲ  title=

Instant Bucket Water Heater : ಚಳಿಗಾಲದಲ್ಲಿ ಬಿಸಿ ನೀರಿನ ಬಳಕೆ ಹೆಚ್ಚು. ಬಿಸಿ ನೀರಿಲ್ಲದೆ ಸ್ನಾನ ಕಷ್ಟ. ಸಣ್ಣ ಗೀಸರ್ ನಲ್ಲಿನ ನೀರು ಬಹಳ ಬೇಗನೆ ತಣ್ಣಗಾಗುತ್ತದೆ. ದೊಡ್ಡ ಗೀಸರ್‌ಗಳು ಸಾಕಷ್ಟು ದುಬಾರಿಯಾಗಿರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ  ಹೊಸ ರೀತಿಯ ಬಕೆಟ್ ಮಾರುಕಟ್ಟೆಗೆ ಬಂದಿದೆ. ಈ ಬಕೆಟ್ ವಿಶೇಷ ತಂತ್ರಜ್ಞಾನವನ್ನು ಹೊಂದಿದ್ದು, ಇದರೊಳಗೆ ತಣ್ಣೀರು ಸುರಿದ ತಕ್ಷಣ ಬಿಸಿಯಾಗುತ್ತದೆ. ಇದರ ಬೆಲೆಯು ಗೀಸರ್‌ಗಿಂತ ಕಡಿಮೆ. 

ಇನ್ಸ್ಟಂಟ್ ಬಕೆಟ್ ವಾಟರ್ ಹೀಟರ್ ವಿಶೇಷಣಗಳು :
ಈ ಬಕೆಟ್‌ನ ಸಾಮರ್ಥ್ಯವು 20 ಲೀಟರ್ ಆಗಿದ್ದು, ಒಬ್ಬ ವ್ಯಕ್ತಿಯು ಸುಲಭವಾಗಿ ಸ್ನಾನ ಮಾಡಬಹುದು. ಇದು ಶಾಕ್ ಪ್ರೂಫ್ ತಂತ್ರಜ್ಞಾನದಿಂದ ಮಾಡಲ್ಪಟ್ಟಿದೆ.ಇದರಿಂದಾಗಿ ವಿದ್ಯುತ್ ಆಘಾತದ ಅಪಾಯವಿರುವುದಿಲ್ಲ. ಇದಕ್ಕೆ ಲಗತ್ತಿಸಲಾದ ಟ್ಯಾಪ್ ಬಿಸಿನೀರನ್ನು ಸುಲಭವಾಗಿ ವಿತರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಎಲ್ಲಾ ನಿರೀಕ್ಷೆಗಳಿಗೂ ಬಿತ್ತು ತೆರೆ ! 5 ಸ್ಟಾರ್ ಸೇಫ್ಟಿ ರೇಟಿಂಗ್ ಇರುವ Maruti Dzire 2024 ಇಂದು ಬಿಡುಗಡೆ ! ಬೆಲೆಯೂ ಅಗ್ಗ !

ಬಳಕೆಯ ವಿಧಾನ  ಹೇಗೆ ? : 
ಬಕೆಟ್‌ನ ಕೆಳಭಾಗದಲ್ಲಿ ಇಮ್ಮರ್ಶನ್ ರಾಡ್ ಇದೆ. ಅದು ನೀರನ್ನು ಬಿಸಿ ಮಾಡುತ್ತದೆ. ನೀರಿನಿಂದ ತುಂಬಿದ ನಂತರ, ರಾಡ್ ಅನ್ನು ವಿದ್ಯುತ್ ಸಾಕೆಟ್  ಗೆ ಕನೆಕ್ಟ್ ಮಾಡಿ. ಈ ರಾಡ್ ನೀರನ್ನು ತ್ವರಿತವಾಗಿ ಬಿಸಿ ಮಾಡಲು ಸಹಾಯ ಮಾಡುತ್ತದೆ. ಕೇವಲ 3 ರಿಂದ 5 ನಿಮಿಷಗಳಲ್ಲಿ ಬಿಸಿ ನೀರು ಸಿಗುತ್ತದೆ. 

ಇನ್ಸ್ಟಂಟ್ ಬಕೆಟ್ ವಾಟರ್ ಹೀಟರ್ ಬೆಲೆ : 
ಇನ್ಸ್ಟಂಟ್  ವಾಟರ್ ಹೀಟರ್ ಬಕೆಟ್ ಅನ್ನು ಸುಲಭವಾಗಿ ಖರೀದಿಸಬಹುದು.  ಸ್ಥಳೀಯ ಮಾರುಕಟ್ಟೆಯಲ್ಲಿಯೂ ಇದು ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್‌ನಿಂದಲೂ ಈ ಬಕೆಟ್ ಅನ್ನು ಖರೀದಿಸಬಹುದು. ಪ್ರಸ್ತುತ ಈ ಬಕೆಟ್ ಖರೀದಿ ಮೇಲೆ 35% ರಿಯಾಯಿತಿ ಇದೆ. ಇದರ ಮೂಲ ಬೆಲೆ 2599 ರೂಪಾಯಿ. ಆದರೆ, ರಿಯಾಯಿತಿಯ ನಂತರ ನೀವು ಅದನ್ನು ಕೇವಲ 1699 ರೂಪಾಯಿಗೆ ಖರೀದಿಸಬಹುದು. 

ಇದನ್ನೂ ಓದಿ : ಸ್ತನ ಕ್ಯಾನ್ಸರ್‌ ರೋಗ ಅಪಾಯವನ್ನು ವೈದ್ಯರಿಗಿಂತ ಮುಂಚೆ ಕಂಡುಹಿಡಿಯುತ್ತೆ ಈ ಆಪ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News