ನವದೆಹಲಿ: ಸ್ಮಾರ್ಟ್‌ಫೋನ್ ಚಾರ್ಜಿಂಗ್, ಆಗಾಗ್ಗೆ ಜನರು ನಿದ್ದೆ ಮಾಡುವಾಗ ತಮ್ಮ ಮೊಬೈಲ್ ಫೋನ್ ಅನ್ನು ಚಾರ್ಜಿಂಗ್‌ಗೆ ಹಾಕುತ್ತಾರೆ. ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ ಮಾಡುವುದರಿಂದ ಮೊಬೈಲ್ ಸಿಡಿಯುವ ಅಪಾಯವೂ ಹೆಚ್ಚು. 


COMMERCIAL BREAK
SCROLL TO CONTINUE READING

ಓವರ್ ಚಾರ್ಜಿಂಗ್ ಯಾವಾಗಲೂ ಫೋನ್‌ಗೆ ಅಪಾಯಕಾರಿ:
ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ನಿದ್ದೆ ಮಾಡುವಾಗ ಚಾರ್ಜಿಂಗ್‌ಗೆ ಹಾಕುತ್ತಾರೆ. ಆದರೆ ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್‌ಗೆ (Mobile Charging) ಇಡುವುದರಿಂದ ಬ್ಯಾಟರಿ ತಾಪ ಹೆಚ್ಚಾಗಿ ಅದು ಸ್ಪೋಟಗೊಳ್ಳಬಹುದು. ಇದು ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ಫೋನ್‌ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಜನವರಿ 1ರಿಂದ ಬದಲಾಗಲಿದೆ ಲ್ಯಾಂಡ್‌ಲೈನ್‌ನಿಂದ Mobile ಫೋನ್‌ಗೆ ಕರೆ ಮಾಡುವ ವಿಧಾನ


ಫೋನ್‌ನ ರಕ್ಷಣಾತ್ಮಕ ಕವರ್ ಜೊತೆಗೆ ಮರೆತೂ ಚಾರ್ಜ್ ಮಾಡಬೇಡಿ:
ಯಾವುದೇ ಹಾನಿಯಿಂದ ಫೋನ್ ಅನ್ನು ರಕ್ಷಿಸಲು ನಾವು ಯಾವಾಗಲೂ ರಕ್ಷಣಾತ್ಮಕ ಕವರ್ ಹಾಕುತ್ತೇವೆ. ಆದರೆ ತಜ್ಞರು ಫೋನ್ ಅನ್ನು ಎಂದಿಗೂ ರಕ್ಷಣಾತ್ಮಕ ಕವರ್ ಜೊತೆಗೆ ಚಾರ್ಜ್ ಮಾಡಬಾರದು ಎಂದು ಹೇಳುತ್ತಾರೆ. ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿ ಶಾಖ ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಸೇಫ್ಟಿ ಕವರ್ ಇದ್ದಾಗ ಬ್ಯಾಟರಿ ಸ್ಫೋಟಗೊಳ್ಳುವ ಅಪಾಯವೂ ಇದೆ.


Flipkart ತಂದಿರುವ ಈ ಯೋಜನೆಯಡಿ ಕೇವಲ ರೂ.1299 ಕ್ಕೆ ಖರೀದಿಸಿ Samsung Galaxy F41


ಪವರ್ ಬ್ಯಾಂಕ್‌ನಿಂದ ಮೊಬೈಲ್ ಚಾರ್ಜ್ ಮಾಡುವಾಗ ಇದನ್ನು ನೆನಪಿನಲ್ಲಿಡಿ:
ಪವರ್ ಬ್ಯಾಂಕಿನಿಂದ (Power Bank) ಚಾರ್ಜ್ ಮಾಡುವಾಗ ಮೊಬೈಲ್ ಫೋನ್ ಅನ್ನು ಎಂದಿಗೂ ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ ಅಂತಹ ಬಳಕೆಯು ಫೋನ್‌ನ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಎರಡರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.