ಪೋರ್ಟಬಲ್ ಮ್ಯಾಟ್ರೆಸ್ ಎಸಿ: ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. ಈ ಸಂದರ್ಭದಲ್ಲಿ ಕೂಲರ್‌ಗಳು ಸಹ ವಿಫಲಗೊಳ್ಳುತ್ತವೆ.  ಇದರಿಂದ ಪರಿಹಾರ ಪಡೆಯಲು ಹವಾ ನಿಯಂತ್ರಣ ಅಂದರೆ ಎಸಿ ಅತ್ಯುತ್ತಮ ಆಯ್ಕೆ ಆಗಿದೆ. ಆದರೆ, ಅದರ ದುಬಾರಿ ಬೆಲೆಯಿಂದಾಗಿ ಎಲ್ಲರೂ ಎಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ಹಲವು ಬಗೆಯ ಎಸಿಗಳು ಲಭ್ಯವಿವೆ. ಕೆಲವನ್ನು ಗೋಡೆಗೆ ತೂಗು ಹಾಕಿದರೆ ಇನ್ನು ಕೆಲವನ್ನು ಕಿಟಕಿಯಲ್ಲಿ ಸುಲಭವಾಗಿ ಅಳವಡಿಸಬಹುದು. ಅಂತಹ ಎಸಿಗಳ ಬಗ್ಗೆ ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಪೋರ್ಟಬಲ್ ಮ್ಯಾಟ್ರೆಸ್ ಎಸಿ ನಿಮಗೆ ಪ್ರಯೋಜನಕಾರಿ ಆಗಿದೆ. ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುವ ಈ ಪೋರ್ಟಬಲ್ ಮ್ಯಾಟ್ರೆಸ್ ಎಸಿಯ ವಿಶೇಷತೆ ಎಂದರೆ ಇದು ಕೈಗೆಟುವ ಬೆಲೆಯಲ್ಲಿ ಲಭ್ಯವಿದೆ. ಇದರ ಬೆಲೆ ವಿಶೇಷತೆಗಳ ಬಗ್ಗೆ ತಿಳಿಯೋಣ...


ಪೋರ್ಟಬಲ್ ಮ್ಯಾಟ್ರೆಸ್ ಎಸಿ ವಿಶೇಷತೆ: 
ಈ ಪೋರ್ಟಬಲ್ ಮ್ಯಾಟ್ರೆಸ್ ಎಸಿಯ ವಿಶೇಷತೆ ಎಂದರೆ ಇದನ್ನು ನೀವು ಎಲ್ಲಿ ಬೇಕಾದರೂ ಸುಲಭವಾಗಿ ಅಳವಡಿಸಬಹುದು. ಇದು ನೀವು ಮಲಗಿದ ತಕ್ಷಣ ಅಥವಾ ನೀವು ಹಾಸಿಗೆ ಮೇಲೆ ಕುಳಿತ ತಕ್ಷಣ ನಿಮಗೆ ತಂಪಾದ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಕೇವಲ 150 ರೂ. ಖರ್ಚು ಮಾಡಿ ನಿಮ್ಮ ಹಳೆಯ ಫ್ರಿಡ್ಜ್ ಅನ್ನು ಹೊಸದಾಗಿಸಿ


ವೈಯಕ್ತಿಕ ತಾಪಮಾನ ನಿಯಂತ್ರಣ ವೈರ್‌ಲೆಸ್ ರಿಮೋಟ್ ಇಂಟಿಗ್ರೇಷನ್ ಕೂಲಿಂಗ್ ಮತ್ತು ಹೀಟಿಂಗ್ ಮ್ಯಾಟ್ರೆಸ್:
ಎಸಿಯನ್ನು Alibaba.com ನಲ್ಲಿ 15 ರಿಂದ 16 ಸಾವಿರ ರೂಪಾಯಿಗಳ ನಡುವೆ ಖರೀದಿಸಬಹುದು. ಈ ಎಸಿ ಒಂದಲ್ಲ ಎರಡರ ಘಟಕಗಳಿಂದ ಮಾಡಲ್ಪಟ್ಟಿದೆ. ಎರಡೂ ಘಟಕಗಳನ್ನು ಸಂಯೋಜಿಸುವ ಮೂಲಕ ಎಸಿ ಕಂಪ್ಲೀಟ್ ಆಗುತ್ತದೆ.


ಇದನ್ನೂ ಓದಿ- ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳ ಈ ತಂತ್ರದಿಂದ ಜಾಗರೂಕರಾಗಿರಿ


ಇದು ಈ ರೀತಿ ಕೆಲಸ ಮಾಡುತ್ತದೆ:
ಈ ಏರ್ ಕಂಡಿಷನರ್ ಹಾಸಿಗೆಯೊಂದಿಗೆ ಬರುತ್ತದೆ. ಇದರಲ್ಲಿ ಎಸಿಯನ್ನು ಪೈಪ್ ಮೂಲಕ ಜೋಡಿಸಲಾಗುತ್ತದೆ. ಎಸಿಯನ್ನು ಪೈಪ್‌ಗೆ ಜೋಡಿಸಿದ ತಕ್ಷಣ ಹಾಸಿಗೆ ತಂಪಾದ ಗಾಳಿಯನ್ನು ನೀಡುತ್ತದೆ. ಗಾಳಿಯು ಪೈಪ್ ಮೂಲಕ ಹಾಸಿಗೆಯನ್ನು ಪ್ರವೇಶಿಸುತ್ತದೆ. ಹೀಗಾಗಿ ಈ ಹಾಸಿಗೆಯ ಮೇಲೆ ಕುಳಿತುಕೊಳ್ಳುವ ಅಥವಾ ಮಲಗಿರುವ ವ್ಯಕ್ತಿಯು ಅದ್ಭುತವಾದ ತಂಪಾದ ಗಾಳಿಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಈ ಎಸಿ ಭಾರತದಲ್ಲಿ ಲಭ್ಯವಿಲ್ಲ. ಇದು ಶೀಘ್ರದಲ್ಲಿ ಭಾರತದಲ್ಲೂ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.