ಕೇವಲ 150 ರೂ. ಖರ್ಚು ಮಾಡಿ ನಿಮ್ಮ ಹಳೆಯ ಫ್ರಿಡ್ಜ್ ಅನ್ನು ಹೊಸದಾಗಿಸಿ

ಎಲೆಕ್ಟ್ರಿಕ್ ಸಾಧನಗಳಾದ ಕೂಲರ್, ಫ್ರಿಡ್ಜ್, ಎಸಿ ಎಲ್ಲವೂ ಹಳೆಯದಾಗುತ್ತಿದ್ದಂತೆ ಅದರ ಕೂಲಿಂಗ್ ಕಡಿಮೆ ಆಗುವುದು ಸಹಜಲ್ ಆದರೆ, ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ನೀಡಬಲ್ಲ ಅಂತಹ ಸಾಧನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಇದರಿಂದ ನಿಮ್ಮ ಹಳೆಯ ಸಾಧನವನ್ನು ಹೊಸದಾಗಿ ಮಾಡಬಹುದು.

Written by - Yashaswini V | Last Updated : Jun 14, 2022, 08:24 AM IST
  • ಕಾಲಾನಂತರದಲ್ಲಿ ತಂತ್ರಜ್ಞಾನದಲ್ಲಿ ಬದಲಾವಣೆಗಳು ಕಂಡುಬಂದಿವೆ
  • ಇದರಿಂದಾಗಿ ಹಳೆಯ ಸಾಧನವನ್ನು ಕಡಿಮೆ ವೆಚ್ಚದಲ್ಲಿ ಹೊಸದಾಗಿ ಪರಿವರ್ತಿಸಬಹುದು.
  • ನೀವು ಹಳೆಯ ಕೂಲರ್, ಇಲ್ಲವೇ ಫ್ರಿಡ್ಜ್ ಹೊಂದಿದ್ದರೆ ಮತ್ತು ಅದರ ಕೂಲಿಂಗ್ ಕಡಿಮೆ ಆಗಿದ್ದರೆ ಇಲ್ಲಿದೆ ಸುಲಭ ಪರಿಹಾರ
ಕೇವಲ 150 ರೂ. ಖರ್ಚು ಮಾಡಿ ನಿಮ್ಮ ಹಳೆಯ ಫ್ರಿಡ್ಜ್ ಅನ್ನು ಹೊಸದಾಗಿಸಿ title=
How repair refrigerator

ಬೆಂಗಳೂರು: ಕೂಲರ್‌ಗಳು, ಫ್ರಿಜ್‌ಗಳು ಮತ್ತು ಎಸಿಗಳು ಹಳೆಯದಾದಾಗ ಅದರ ಕೂಲಿಂಗ್ ಕಡಿಮೆ ಆಗುವುದು ಸರ್ವೇ ಸಾಮಾನ್ಯ. ಈ ಎಲೆಕ್ಟ್ರಿಕ್ ವಸ್ತುಗಳಿಗೆ ಸರಿಯಾದ ಸಮಯದಲ್ಲಿ ನಿರ್ವಹಣೆ ಮತ್ತು ಸರ್ವಿಸ್ ಮಾಡುವುದರಿಂದ ಮಾತ್ರ ಅವುಗಳನ್ನು ಜೀವಂತವಾಗಿರಿಸಬಹುದು. ಕಾಲಾನಂತರದಲ್ಲಿ ತಂತ್ರಜ್ಞಾನದಲ್ಲಿ ಬದಲಾವಣೆಗಳು ಕಂಡುಬಂದಿವೆ. ಇದರಿಂದಾಗಿ ಹಳೆಯ ಸಾಧನವನ್ನು ಕಡಿಮೆ ವೆಚ್ಚದಲ್ಲಿ ಹೊಸದಾಗಿ ಪರಿವರ್ತಿಸಬಹುದು. ನೀವು ಹಳೆಯ ಕೂಲರ್, ಇಲ್ಲವೇ ಫ್ರಿಡ್ಜ್ ಹೊಂದಿದ್ದರೆ ಮತ್ತು ಅದರ ಕೂಲಿಂಗ್ ಕಡಿಮೆ ಆಗಿದ್ದರೆ, ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ಮಾಡುವ ಅಂತಹ ಸಾಧನದ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ.  

TEC1-12706 ಥರ್ಮೋಎಲೆಕ್ಟ್ರಿಕ್ ಪೆಲ್ಟಿಯರ್ ಕೂಲರ್ ಮಾಡ್ಯೂಲ್ :
ಕಂಪನಿಯ ಪ್ರಕಾರ, TEC1-12706 ಥರ್ಮೋಎಲೆಕ್ಟ್ರಿಕ್ ಪೆಲ್ಟಿಯರ್ ಕೂಲರ್ ಮಾಡ್ಯೂಲ್ ಒಂದು ಬದಿಯಲ್ಲಿ ಬಿಸಿಮಾಡಲು ಮತ್ತು ಇನ್ನೊಂದು ಬದಿಯಲ್ಲಿ ತಂಪಾಗಿಸಲು ಕಾರ್ಯನಿರ್ವಹಿಸುತ್ತದೆ. ಇದರರ್ಥ ಯಾವುದನ್ನಾದರೂ ಬಿಸಿಮಾಡಲು ಅಥವಾ ತಂಪಾಗಿಸಲು ಇದನ್ನು ಬಳಸಬಹುದು. ಈ ಸಾಧನವನ್ನು ಫ್ರಿಜ್ನೊಂದಿಗೆ ಸುಲಭವಾಗಿ ಸಂಪರ್ಕಿಸಬಹುದು. ಪ್ರಮುಖವಾದ ವಿಷಯವೆಂದರೆ ಅದು ವಿದ್ಯುತ್ ಅನ್ನು ಸಹ ಉಳಿಸುತ್ತದೆ. ಈ ಕಾರಣಕ್ಕಾಗಿ, ಇದು ಹೆಚ್ಚಿನ ಬೇಡಿಕೆಯಲ್ಲಿದೆ. 

ಇದನ್ನೂ ಓದಿ- WhatsApp ಬಳಕೆದಾರರಿಗೆ ಗುಡ್ ನ್ಯೂಸ್!

TEC1-12706 ಥರ್ಮೋಎಲೆಕ್ಟ್ರಿಕ್ ಪೆಲ್ಟಿಯರ್ ಕೂಲರ್ ಮಾಡ್ಯೂಲ್ ಬೆಲೆ:
TEC1-12706 ಥರ್ಮೋಎಲೆಕ್ಟ್ರಿಕ್ ಪೆಲ್ಟಿಯರ್ ಕೂಲರ್ ಮಾಡ್ಯೂಲ್ ಹೆಸರಿನ ಈ ಸಾಧನವನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಇದರ ಬೆಲೆಯೂ ತುಂಬಾ ಕಡಿಮೆ. ಇದರ ಬೆಲೆ ಸುಮಾರು 150 ರಿಂದ 200 ರೂ. ಗಳು ಮಾತ್ರ ಎನ್ನಲಾಗಿದೆ.

ಇದನ್ನೂ ಓದಿ- ಬಟ್ಟೆ ವಾಶ್‌ಗೂ ಸೈ, ನೀರು ತುಂಬಿಸಲು ಜೈ.. ಈ ವಿಶೇಷ ಬಕೆಟ್‌ ಬೆಲೆ ತುಂಬಾ ಅಗ್ಗ!

TEC1-12706 ಥರ್ಮೋಎಲೆಕ್ಟ್ರಿಕ್ ಪೆಲ್ಟಿಯರ್ ಕೂಲರ್ ಮಾಡ್ಯೂಲ್‌ನಲ್ಲಿ DC ಮೋಟಾರ್ ಅನ್ನು  ಬಳಸಲಾಗಿದೆ. ಇದು ಅರೆವಾಹಕ ಆಧಾರಿತ ಎಲೆಕ್ಟ್ರಾನಿಕ್ ಸಾಧನವಾಗಿದ್ದು ಅದು ಸಣ್ಣ ಶಾಖ ಅಥವಾ ಕೂಲಿಂಗ್ ಪಂಪ್ ಆಗಿ ಕಾರ್ಯನಿರ್ವಹಿಸುತ್ತದೆ. ದೊಡ್ಡ ಕಚೇರಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮಾಡ್ಯೂಲ್‌ನ ಒಂದು ಬದಿಯಿಂದ ಶಾಖವನ್ನು ಮತ್ತು ಇನ್ನೊಂದು ಬದಿಯಿಂದ ಶೀತವನ್ನು ರವಾನಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News