ಬೆಂಗಳೂರು : WhatsApp ನಮ್ಮ ಚಾಟ್ ಅನ್ನು ಸುಲಭಗೊಳಿಸುತ್ತದೆ. ಆದರೆ  ಕನೆಕ್ಟ್ ಆಗಿ ಉಳಿಯುವುದರ ಜೊತೆಗೆ ನಿಮ್ಮ ಖಾತೆಯನ್ನು ಸೆಕ್ಯುರ್ ಆಗಿ ಇರಿಸುವುದು ಕೂಡಾ ಮುಖ್ಯವಾಗಿದೆ.ವಾಟ್ಸಾಪ್‌ನಲ್ಲಿಯೂ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.ಇಂಥಹ ಪರಿಸ್ಥಿತಿಯಲ್ಲಿ,ನಿಮ್ಮ ಅಕೌಂಟ್  ಅನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯವಾಗಿದೆ.ಇಂದು ನಾವು ಈ ಬಗ್ಗೆ  5 ಸುಲಭ ಸಲಹೆಗಳನ್ನು ನೀಡಲಿದ್ದೇವೆ. 


COMMERCIAL BREAK
SCROLL TO CONTINUE READING

 two-step verification :
 two-step verification ನಿಮ್ಮ ಖಾತೆಯ ಕೀಯಂತೆ ಕಾರ್ಯ ನಿರ್ವಹಿಸುತ್ತದೆ. ಹೊಸ ಸಾಧನದಲ್ಲಿ WhatsApp ನೊಂದಿಗೆ ನಿಮ್ಮ ಸಂಖ್ಯೆಯನ್ನು ನೋಂದಾಯಿಸುವಾಗ SMS ವೆರಿಫಿಕೆಶನ ಕೋಡ್ ಜೊತೆಗೆ ಆರು-ಅಂಕಿಯ PIN ಅನ್ನು ಕೇಳುವ ಮೂಲಕ ಟೂ ಸ್ಟೆಪ್ ವೆರಿಫಿಕೆಶನ್ ಕೆಲಸ ಮಾಡುತ್ತದೆ. 


ಇದನ್ನೂ ಓದಿ : ಮೊಟ್ಟ ಮೊದಲ CNG Bike ಹೊರ ತಂದ Bajaj : ಇಂದಿನಿಂದಲೇ ಬುಕಿಂಗ್ ಆರಂಭ


ಫಿಂಗರ್‌ಪ್ರಿಂಟ್/ಫೇಸ್ ಐಡಿ ಲಾಕ್ : 
ನಿಮ್ಮ ಚಾಟ್ ಅನ್ನು ಹಾಗೆಯೇ ಓಪನ್ ಆಗಿ ಬಿಟ್ಟು ಬಿಡಬೇಡಿ.ನಿಮ್ಮ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಕ್ ವೈಶಿಷ್ಟ್ಯವನ್ನು ಆನ್ ಮಾಡಿ. ಹೀಗೆ ಮಾಡುವುದರಿಂದ ಫೋನ್ ಅನ್‌ಲಾಕ್ ಆಗಿದ್ದರೂ ಬೇರೆ ಯಾರೂ WhatsApp ಅನ್ನು ಆಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಫೋನ್ ಅನ್ನು ಎಲ್ಲೋ ಇಟ್ಟು ಮರೆತಾಗ ಈ ವೈಶಿಷ್ಟ್ಯ ವಿಶೇಷವಾಗಿ ಕೆಲಸಕ್ಕೆ ಬರುತ್ತದೆ. 


ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಿ :
ನೀವು ಲಾಸ್ಟ ಆನ್ಲೈನ್ ಇದ್ದ ಮಾಹಿತಿ, ಪ್ರೊಫೈಲ್ ಪಿಕ್ಚರ್, ಅನ್ನು ಎಲ್ಲರೂ  ನೋಡುವ ಅವಶ್ಯಕತೆ ಇಲ್ಲ. ನಿಮ್ಮ ಪ್ರೈವೆಸಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ .  ನಿಮ್ಮ ಪ್ರೊಫೈಲ್ ಮಾಹಿತಿ,ಸ್ಟೇಟಸ್ ಅಪ್ಡೇಟ್, ಲಾಸ್ಟ ಸೀನ್ ಮುಂತಾದವುಗಳನ್ನು ಯಾರು ನೋಡಬಹುದು, ಯಾರು ನೋಡಬಾರದು ಎನ್ನುವುದನ್ನು ಸೆಟ್ ಮಾಡಿಕೊಳ್ಳಿ. ಇದು ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Shocking!ಅತಿಯಾದ ಕೆಲಸದ ಒತ್ತಡದಿಂದ ಬೇಸರ !ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ರೋಬೋಟ್ !


ಫಿಶಿಂಗ್ ಲಿಂಕ್‌ : 
ಇಮೇಲ್‌ನಂತೆ, WhatsApp ಸಂದೇಶಗಳಲ್ಲಿಯೂ ಸಹ,ಜನರು ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಕೇಳಿ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಬಹುದು.  ನಿಮಗೆ ಗೊತ್ತಿಲ್ಲದ ನಂಬರ್ ನಿಂದ ಬರುವ ಸಂದೇಶಗಳು ಅಥವಾ ಆತುರದಿಂದ ಪೂರ್ಣಗೊಳಿಸುವ ಕೆಲಸ ಅಥವಾ ಹೆಚ್ಚು ಲಾಭದಾಯಕ ವ್ಯವಹಾರಗಳನ್ನು ಕೇಳುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ.ಯಾವುದೇ ಸಂದೇಶವು ಅನುಮಾನಾಸ್ಪದವಾಗಿ ಕಂಡುಬಂದರೆ, ಅದರಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಆ ನಂಬರ್ ಬಗ್ಗೆ ರಿಪೋರ್ಟ್ ಮಾಡುವುದನ್ನು ಮರೆಯಬೇಡಿ. 


ಕನೆಕ್ಟೆಡ್ ಡಿವೈಸ್ ಗಳನ್ನೂ ಚೆಕ್ ಮಾಡಿ : 
ನಿಮ್ಮ ಅಕೌಂಟ್ ನಲ್ಲಿ ಯಾವ್ ಡಿವೈಸ್ ಲಾಗಿನ್ ಆಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಅಪರಿಚಿತ ಸಾಧನ ನಿಮ್ಮ ಗಮನಕ್ಕೆ ಬಂದರೆ ಅದರಿಂದ ತಕ್ಷಣ ಲಾಗ್ ಔಟ್ ಮಾಡಬಹುದು.ವಿಶೇಷವಾಗಿ ಸಾರ್ವಜನಿಕ ಕಂಪ್ಯೂಟರ್‌ನಲ್ಲಿ WhatsApp ಅನ್ನು ಬಳಸಿದ ನಂತರ,ನಿಮ್ಮ ಕನೆಕ್ಟೆಡ್ ಡಿವೈಸ್ ಅನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಾ ಇರುವುದು ಒಳ್ಳೆಯ  ಹವ್ಯಾಸ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.