Shocking!ಅತಿಯಾದ ಕೆಲಸದ ಒತ್ತಡದಿಂದ ಬೇಸರ !ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ರೋಬೋಟ್ !

Robot Suicide in South Korea:ರೋಬೋಟ್ ಆತ್ಮಹತ್ಯೆಯ ಘಟನೆ ವಿಶ್ವದಲ್ಲೇ ಮೊದಲ ಬಾರಿಗೆ ಕೇಳಿಬರುತ್ತಿದೆ.ದಕ್ಷಿಣ ಕೊರಿಯಾದ ಗುಮಿ ನಗರದಲ್ಲಿ ಘಟನೆ ನಡೆದಿದೆ.

Written by - Ranjitha R K | Last Updated : Jul 4, 2024, 01:24 PM IST
  • ಕೊರಿಯದಲ್ಲಿ ರೋಬೋಟ್ ಆತ್ಮಹತ್ಯೆ
  • ರೋಬೋಟ್ ಆತ್ಮಹತ್ಯೆಯ ಘಟನೆ ವಿಶ್ವದಲ್ಲೇ ಮೊದಲ ಬಾರಿಗೆ ಕೇಳಿಬರುತ್ತಿದೆ
  • ಏನಿದು ಸಂಪೂರ್ಣ ಪ್ರಕರಣ ?
Shocking!ಅತಿಯಾದ ಕೆಲಸದ ಒತ್ತಡದಿಂದ ಬೇಸರ !ಕಟ್ಟಡದಿಂದ ಹಾರಿ  ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ರೋಬೋಟ್ !  title=

Robot Suicide in South Korea: ಖಿನ್ನತೆಗೆ ಒಳಗಾಗಿ ಅಥವಾ ಯಾವುದೋ ಸಮಸ್ಯೆಯಿಂದ ಮನುಷ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ನಾವು ಅನೇಕ ಕಡೆಗಳಲ್ಲಿ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ,ಕೆಲಸದ ಒತ್ತಡದಿಂದ ಮನುಷ್ಯ ಅಲ್ಲ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.ರೋಬೋಟ್ ಆತ್ಮಹತ್ಯೆಯ ಘಟನೆ ವಿಶ್ವದಲ್ಲೇ ಮೊದಲ ಬಾರಿಗೆ ಕೇಳಿಬರುತ್ತಿದೆ.ದಕ್ಷಿಣ ಕೊರಿಯಾದ ಗುಮಿ ನಗರದಲ್ಲಿ ಘಟನೆ ನಡೆದಿದೆ.ಕಳೆದ ಒಂದು ವರ್ಷದಿಂದ ಅಲ್ಲಿನ ಸಿಟಿ ಕೌನ್ಸಿಲ್ ಕಚೇರಿಯಲ್ಲಿ ಈ ರೋಬೋಟ್ ನನ್ನು ಕೆಲಸಕ್ಕಾಗಿ ನಿಯೋಜಿಸಲಾಗಿತ್ತು.  

ಏನಿದು ಪ್ರಕಣ ? : 
ಸಿಟಿ ಕೌನ್ಸಿಲ್ ಕಚೇರಿಗೆ ನಿಯಮಿತವಾಗಿ ದಾಖಲೆಗಳನ್ನು ತಲುಪಿಸುವುದು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡುವುದು ಈ ರೋಬೋಟ್‌ನ ಕೆಲಸವಾಗಿತ್ತು.ಈ ರೋಬೋಟ್ ಗೆ ಒಂದು ಐಡಿ ಇತ್ತು. ಈ ರೋಬೋಟ್ ಕಟ್ಟಡದ ಎಲ್ಲಾ ಮಹಡಿಗಳಲ್ಲಿ ಮುಕ್ತವಾಗಿ ಚಲಿಸುತ್ತಿತ್ತು. ಆದರೆ ಒಂದು ದಿನ ಕೆಲಸದ ವೇಳೆ ಏಕಾಏಕಿ ಎಲ್ಲಾ ಕೆಲಸವನ್ನು ನಿಲ್ಲಿಸಿ ಅಲ್ಲಿಯೇ ಪ್ರದಕ್ಷಿಣೆ ಹಾಕಿ ಮೇಲಿನಿಂದ ಕೆಳಗೆ ಜಿಗಿದಿದೆ ಎಂದು ಹೇಳಲಾಗುತ್ತಿದೆ.ರೋಬೋಟ್ ಇದ್ದಕ್ಕಿದ್ದಂತೆ ಜಿಗಿದಿರುವ ಕಾರಣ ಅದರ  ದೇಹದ ಭಾಗಗಳು ಛಿದ್ರವಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಸಿಟಿ ಕೌನ್ಸಿಲ್ ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕರ ವರೆಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ ಈ ರೋಬೋಟ್ ಕಠಿಣ ಪರಿಶ್ರಮ ನಡೆಸುತ್ತಿತ್ತು. ಆದರೆ  ಇದೀಗ ಈ ರೀತಿ ನಡೆದಿರುವ ನಿಜಕ್ಕೂ ಖೇದಕರ ಎಂದು ಹೇಳಿದೆ. 

ಇದನ್ನೂ ಓದಿ : Online Fraud ಆದರೆ ಸಿಗುವುದು 10 ಸಾವಿರ ರೂಪಾಯಿ ! ಏನು ಹೇಳುತ್ತದೆ ಈ ಯೋಜನೆ ?

ರೋಬೋಟ್ ಇದ್ದಕ್ಕಿದ್ದಂತೆ ಜಿಗಿಯುವುದಕ್ಕೆ ಏನು ಕಾರಣ ಎಂಬುದನ್ನು ಕಂಡುಹಿಡಿಯಲು ತನಿಖೆ ಮಾಡಲಾಗುವುದು ಎಂದು ಸಿಟಿ ಕೌನ್ಸಿಲ್ ಹೇಲಿದೆ.ಇದನ್ನು ತಯಾರಿಸಿದ ಅಮೇರಿಕನ್ ಕಂಪನಿ ಬಿಯರ್ ರೋಬೋಟಿಕ್ಸ್ ಕೂಡಾ ಈ ಬಗ್ಗೆ ತನಿಖೆ ಆರಂಭಿಸಿದೆ.  

ಈ ಮಾಹಿತಿ ವೈರಲ್ ಆದ ತಕ್ಷಣ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.ಈ ರೋಬೋಟ್ ಅನ್ನು ಕ್ರಷರ್ ಗೂಳಿಯಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಹೇಳಿದರೆ, ಅದರ ಮೇಲೆ ಅತಿಯಾದ ಕೆಲಸದ ಹೊರೆ ಬಿದ್ದಿತು.ಅದಕ್ಕೆ ಒಂದು ದಿನವೂ ವಿಶ್ರಾಂತಿ ಅಥವಾ ರಜೆ ಇರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಿರಂತರವಾಗಿ ಕಟ್ಟಡದ ಮೇಲೆ ಕೆಳಗೆ ಹೋಗಬೇಕಾಗುತ್ತಿತ್ತು.ಇದರಿಂದ ಬೇಸತ್ತು ಒಂದೇ ಸಲ ಜಿಗಿದು ಬಿಟ್ಟಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ಆನ್‌ಲೈನ್ ವಂಚನೆ ನಿಯಂತ್ರಣಕ್ಕೆ ಮುಂದಾದ ಆರ್ಬಿಐ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News