Realme ಲಾಂಚ್ ಮಾಡಿದೆ ಕಡಿಮೆ ಬೆಲೆಯ Smartphone, ಬೆಲೆ ಮತ್ತು ವೈಶಿಷ್ಟ್ಯ ಏನಿರಲಿದೆ ತಿಳಿಯಿರಿ
Realme 8i ಪಂಚ್-ಹೋಲ್ ಸ್ಕ್ರೀನ್ ಹೊಂದಿರುವ 6.6-ಇಂಚಿನ IPS LCD ಸ್ಕ್ರೀನ್ ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
ನವದೆಹಲಿ : Realme 8s 5G, Realme Pad, Realme Cobble Bluetooth ಸ್ಪೀಕರ್ ಮತ್ತು Realme Pocket Bluetooth ಸ್ಪೀಕರ್ ಅನ್ನು ಘೋಷಿಸಲು Realme ಇಂದು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕಂಪನಿಯು ರಿಯಲ್‌ಮಿ 8i ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದೆ. ಇದು ಬಳಕೆದಾರರಿಗೆ 120Hz ಡಿಸ್ಪ್ಲೇ , Helio G96 ಚಿಪ್‌ಸೆಟ್ ಮತ್ತು 50MP ಟ್ರಿಪಲ್ ಕ್ಯಾಮೆರಾದಂತಹ ರೋಮಾಂಚಕಾರಿ ವೈಶಿಷ್ಟ್ಯಗಳನ್ನು ನೀಡುತ್ತಿದೆ.
Realme 8i ನ ವೈಶಿಷ್ಟ್ಯಗಳು :
Realme 8i ಪಂಚ್-ಹೋಲ್ ಸ್ಕ್ರೀನ್ ಹೊಂದಿರುವ 6.6-ಇಂಚಿನ IPS LCD ಸ್ಕ್ರೀನ್ ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು Helio G96 ಚಿಪ್‌ಸೆಟ್‌ನೊಂದಿಗೆ ಬಂದಿದೆ. ಹ್ಯಾಂಡ್ಸೆಟ್ ಅನ್ನು 4 GB / 6 GB RAM ಮತ್ತು 64 GB / 128 GB ಸ್ಟೋರೇಜ್ ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು Realme UI 2.0 ಆಧಾರಿತ ಆಂಡ್ರಾಯ್ಡ್ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ : Vodafone Idea ಗ್ರಾಹಕರಿಗೆ ಆಘಾತ, ಈಗ ಈ ಪ್ಲಾನ್ ಗಳಲ್ಲಿ ಸಿಗುತ್ತಿಲ್ಲ ಅಧಿಕ ಇಂಟರ್ ನೆಟ್
Realme 8i ಕ್ಯಾಮೆರಾ :
ಸೆಲ್ಫಿಗಾಗಿ, ಇದು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಸ್ಕ್ವಾರೀಶ್ ರಿಯರ್ ಫೇಸಿಂಗ್ ಕ್ಯಾಮೆರಾ ಮಾಡ್ಯೂಲ್ ಅನ್ನು 50 ಮೆಗಾಪಿಕ್ಸೆಲ್ ಮೇನ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಅಸಿಸ್ಟ್ ಲೆನ್ಸ್ ಅನ್ನು ಒಳಗೊಂಡಿದೆ.
Realme 8i ಬ್ಯಾಟರಿ :
ಈ ಹ್ಯಾಂಡ್ಸೆಟ್ 5,000mAh ಬ್ಯಾಟರಿಯನ್ನು ಹೊಂದಿದ್ದು, ಅದು USB-C ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ 4G VoLTE, Wi-Fi 802.11ac, ಬ್ಲೂಟೂತ್ 5.1, ಜಿಪಿಎಸ್, ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : Infinix: ಅಗ್ಗದ ದರದಲ್ಲಿ 6000mAH ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್, ಫುಲ್ ಚಾರ್ಜ್ ಆದ ಬಳಿಕ ಸ್ವಯಂಚಾಲಿತವಾಗಿ ಆಫ್ ಆಗುತ್ತೆ
Realme 8i ಬೆಲೆ :
ರಿಯಲ್‌ಮಿ 8i ಯ 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ ರೂ 13,999ಗಳಾಗಿವೆ. 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂ ಆಗಿದೆ. ಈ ಫೋನ್ ನಲ್ಲಿ ಎರಡು ಬಣ್ಣದ ಆಯ್ಕೆಗಳನ್ನು ಪಡೆಯಬಹುದು. ಭಾರತದಲ್ಲಿ ರಿಯಲ್‌ಮಿ 8i ಮೊದಲ ಮಾರಾಟವನ್ನು ಸೆಪ್ಟೆಂಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ಮಾಡಲಾಗುವುದು. ಖರೀದಿದಾರರು ರಿಯಲ್‌ಮೆ ಇಂಡಿಯಾ (Realme India) ಆನ್‌ಲೈನ್ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್ (Flipkart) ಮೂಲಕ ಇದರ ಲಾಭವನ್ನು ಪಡೆದುಕೊಳ್ಳಬಹುದು. ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್‌ಗಳೊಂದಿಗೆ (ICICI Credit card) ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ 1,000 ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.