AC ಮೇಲೆ ಸಿಗುತ್ತಿದೆ ಭಾರೀ Discount, 25% ದಷ್ಟು ವಿದ್ಯುತ್ ಕೂಡಾ ಉಳಿತಾಯವಾಗಲಿದೆ

ಈ ಸೇಲ್  ಆಗಸ್ಟ್ 21ಕ್ಕೆ ಆರಂಭವಾಗಿದ್ದು, 25 ರವರೆಗೆ ನಡೆಯಲಿದೆ. ಅಲ್ಲಿ ನೀವು ವಿಂಡೋಸ್ ಎಸಿಯಲ್ಲಿ ಭಾರೀ ರಿಯಾಯಿತಿಗಳನ್ನು ಘೋಷಿಸಲಾಗಿದೆ. 

Written by - Ranjitha R K | Last Updated : Aug 23, 2021, 05:32 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಹೋಂ ಅಪ್ಪ್ಲೈಯೆನ್ಸೆಸ್ ಸೇಲ್
  • ಆಗಸ್ಟ್ 25 ರವರೆಗೆ ರಿಯಾಯಿತಿ ದರದಲ್ಲಿ ಖರೀದಿ ಸಾಧ್ಯ
  • ವಿಂಡೋ ಐಸಿಯಲ್ಲಿ ಉತ್ತಮ ಆಫರ್‌ಗಳು ಸಿಗುತ್ತವೆ
AC ಮೇಲೆ ಸಿಗುತ್ತಿದೆ ಭಾರೀ Discount,   25% ದಷ್ಟು ವಿದ್ಯುತ್ ಕೂಡಾ ಉಳಿತಾಯವಾಗಲಿದೆ    title=
ವಿಂಡೋ ಐಸಿಯಲ್ಲಿ ಉತ್ತಮ ಆಫರ್‌ಗಳು ಸಿಗುತ್ತವೆ (photo zee news)

ನವ ದೆಹಲಿ :  ಬೇಸಿಗೆ ಬಿಸಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಫ್ಯಾನ್ ಅಥವಾ ಕೂಲರ್ ಕೂಡಾ ಕೆಲಸಕ್ಕೆ ಬರುವುದಿಲ್ಲ. ಆ ಸಮಯದಲ್ಲಿ ಸಮಸ್ಯೆ ಬಗೆಹರಿಸುವುದು ಎಸಿ . ಆದರೆ  AC ಹಾಕಿದರೆ,  ವಿದ್ಯುತ್ ಬಿಲ್ ಏರತೊಡಗುತ್ತದೆ. ಈ ಸಮಸ್ಯೆಗೆ  ಫ್ಲಿಪ್‌ಕಾರ್ಟ್ ಪರಿಹಾರವನ್ನು ನೀಡಿದೆ. ಗ್ರ್ಯಾಂಡ್ ಹೋಂ ಅಪ್ಪ್ಲೈಯೆನ್ಸೆಸ್ ಸೇಲ್ (lipkart Grand Home Appliances Sale) ನಡೆಯುತ್ತಿದೆ.   ಈ ಸೇಲ್  ಆಗಸ್ಟ್ 21ಕ್ಕೆ ಆರಂಭವಾಗಿದ್ದು, 25 ರವರೆಗೆ ನಡೆಯಲಿದೆ. ಅಲ್ಲಿ ನೀವು ವಿಂಡೋಸ್ ಎಸಿಯಲ್ಲಿ (Window Ac) ಭಾರೀ ರಿಯಾಯಿತಿಗಳನ್ನು ಘೋಷಿಸಲಾಗಿದೆ. 

ಫ್ಲಿಪ್‌ಕಾರ್ಟ್‌ನ ಮಾರ್ಕ್ಯೂ ಎಸಿಸಿ (MarQ)
1.5 ಟನ್ ಸಾಮರ್ಥ್ಯ ಹೊಂದಿರುವ ಈ MarQ AC 23% ರಿಯಾಯಿತಿ ದರದಲ್ಲಿ ಅಂದರೆ 29,999 ರ ಬದಲು 22,990 ರೂಗಳಿಗೆ ಸಿಗುತ್ತಿದೆ. ಇದರ ಬಳಕೆಯಿಂದ 15% ದಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಇದಕ್ಕೆ 3 ಸ್ಟಾರ್ ಗಳ ರೇಟಿಂಗ್ ಕೂಡ ನೀಡಲಾಗಿದೆ. ಆಟೋ ರೀಸ್ಟಾರ್ಟ್ ಮತ್ತು ಸ್ಲೀಪ್ ಮೋಡ್ ನಂತಹ ವೈಶಿಷ್ಟ್ಯಗಳನ್ನು ಕೂಡಾ ಇದು ಹೊಂದಿದೆ.  ಒಂದು ವರ್ಷದ ಪ್ರಾಡಕ್ಟ್ ವಾರಂಟಿ  ಮತ್ತು 5 ವರ್ಷಗಳ ಕಾಮೆಪ್ರೇಸರ್ ವಾರಂಟಿಯೊಂದಿಗೆ ಈ ಎಸಿ ಯನ್ನು ಖರೀದಿಸಬಹುದು. ಇದನ್ನು 797 ರೂ.ಗಳ ಇಎಂಐನಲ್ಲಿ (EMI) ಖರೀದಿಸಬಹುದು. ನೀವು ಕೋಟಕ್ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit card) ಹೊಂದಿದ್ದರೆ, ಇನ್ನೂ ಹೆಚ್ಚುವರಿ ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ : Truecallerಗೆ ಟಕ್ಕರ್ ನೀಡಲು ಬಂದಿದೆ Bharat calller app, ಇದರ ವೈಶಿಷ್ಟ್ಯ ಗಳೇನು ಗೊತ್ತಾ ?

ಗೋದ್ರೆಜ್ 1.5 ಟನ್ ಎಸಿ :
ಆಟೋ ರೀಸ್ಟಾರ್ಟ್  (Auto restart) ವೈಶಿಷ್ಟ್ಯವನ್ನು ಹೊಂದಿರುವ ಈ ಎಸಿ 1.5 ಟನ್ ಮತ್ತು ಸ್ಲೀಪ್ ಮೋಡ್‌ನೊಂದಿಗೆ ಬರುತ್ತದೆ. ಈ ವಿಂಡೋ ಎಸಿ (window AC) ತ್ರೀಸ್ಟಾರ್ ರೇಟಿಂಗ್ ನೊಂದಿಗೆ ಬರುತ್ತದೆ. ಇದರಲ್ಲಿಯೂ 15%ವರೆಗೆ ವಿದ್ಯುತ್ ಉಳಿತಾಯ ಮಾಡಬಹುದು.  ಒಂದು ವರ್ಷದ ಕಂಪ್ರಾಹೆನ್ಸಿವ್ ವಾರಂಟಿ ಮತ್ತು 5 ವರ್ಷಗಳ ಕಾಮೆಪ್ರೇಸರ್  ವಾರಂಟಿ ಸಿಗುತ್ತದೆ. 29,900 ರೂ.ಗಳ ಈ ಎಸಿಯನ್ನು  23,889 ರೂ.ಗೆ ಖರೀದಿಸಬಹುದು. ತಿಂಗಳಿಗೆ 835 ರೂ.ಗಳ ಇಎಂಐನಲ್ಲಿ ಇದನ್ನು ಖರೀದಿಸಬಹುದು. 

ಇಂಟೆಕ್ಸ್ 1.5 ಟನ್ ಎಸಿ :
25,000 ರೂ. ಮೌಲ್ಯದ ಇಂಟೆಕ್ಸ್ ಅನ್ನು 23,490  ರೂ. ಗೆ ಖರೀದಿಸಬಹುದು. 1.5 ಟನ್ ಸಾಮರ್ಥ್ಯದೊಂದಿಗೆ, ಬರುವ ಈ ಎಸಿ 25% ದಷ್ಟು ವಿದ್ಯುತ್ ಅನ್ನು ಉಳಿಸುತ್ತದೆ. ಅಲ್ಲದೆ, ಇದು 5 ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಇದು ಟರ್ಬೊ ಕೂಲ್, ಸ್ಲೀಪ್ ಮತ್ತು ಡೋರ್ ಮೋಡ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಒಂದು ವರ್ಷದ ಕಂಪ್ರಾಹೆನ್ಸಿವ್ ವಾರಂಟಿ, ಹತ್ತು ವರ್ಷಗಳ  ಪ್ರಾಡಕ್ಟ್ ವಾರಂಟಿ, ಐದು ವರ್ಷದ ಕಾಯಿಲ್ ವಾರಂಟಿಯೊಂದಿಗೆ ಬರುತ್ತದೆ. 815 ರ EMI ನಲ್ಲಿ ಇದನ್ನು  ಖರೀದಿಸಬಹುದು. ಕೋಟಕ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ ರಿಯಾಯಿತಿ ಪಡೆಯುತ್ತೀರಿ.

ಇದನ್ನೂ ಓದಿ : Google: ಈ ಅಪಾಯಕಾರಿ 8 ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News