ನವದೆಹಲಿ: Recharge Plans That Offer Life Insurance - ಭಾರತೀಯ ಟೆಲಿಕಾಂ ಕಂಪನಿ ಏರ್ಟೆಲ್ (Airtel) ಇತ್ತೀಚೆಗೆ ಎರಡು ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (Prepaid Recharge Plan) ಬಿಡುಗಡೆ ಮಾಡಿದೆ, ಇವು ಗ್ರಾಹಕರಿಗೆ ಉಚಿತ ಕರೆ ಮತ್ತು ಹೈಸ್ಪೀಡ್ 4 ಜಿ ಇಂಟರ್ನೆಟ್, ಜೊತೆಗೆ ಆರೋಗ್ಯ ವಿಮೆ (Life Insurance) ಯ ಪ್ರಯೋಜನವನ್ನು  ಸಹ ನೀಡುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Best Prepaid Recharge: ಅಗ್ಗದ ದರದಲ್ಲಿ 84 ಜಿಬಿಗೂ ಅಧಿಕ 4G ಡಾಟಾ, ಈಗಲೇ ರೀಚಾರ್ಜ್ ಮಾಡಿ


ರೂ.279 ರ ಯೋಜನೆಯಡಿ 4 ಲಕ್ಷ ರೂ.ಗಳ ಇನ್ಸೂರೆನ್ಸ್
ಕಂಪನಿಯ ಪ್ರಕಾರ, ಒಂದು ವೇಳೆ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ 279 ರೂ. ರೀಚಾರ್ಜ್ (Airtel Recharge Plan) ಯೋಜನೆಯನ್ನು ಸಕ್ರಿಯಗೊಳಿಸಿದರೆ, ಅವರು ಪ್ರತಿದಿನ 1.5 ಜಿಬಿ ಹೈಸ್ಪೀಡ್ 4 ಜಿ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಕಳುಹಿಸುವ ಸೌಲಭ್ಯದೊಂದಿಗೆ 4 ಲಕ್ಷ ರೂ.ಗಳ ಜೀವ ವಿಮೆ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಜೀವ ವಿಮೆಗೆ ಯಾವುದೇ ವೈದ್ಯಕೀಯ ಪರೀಕ್ಷೆಗಳು ಮತ್ತು ದಾಖಲೆಗಳ ಅಗತ್ಯವಿಲ್ಲ. ಇದು ಮಾತ್ರವಲ್ಲದೆ, 28 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ದೈನಂದಿನ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗ ಕಡಿಮೆಯಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.


ಇದನ್ನೂ ಓದಿ-Recharge Plans: ತಿಂಗಳಿಗೆ ಕೇವಲ ರೂ.125 ಖರ್ಚು ಮಾಡಿ, ವರ್ಷವಿಡೀ ರಿಚಾರ್ಜ್ ಮಾಡುವ ತಾಪತ್ರಯವನ್ನು ತಪ್ಪಿಸಿಕೊಳ್ಳಿ


ರೂ.179 ರ ಯೋಜನೆಯಡಿ 2 ಲಕ್ಷ ರೂ.ಗಳ ಜೀವ ವಿಮೆ ಸಿಗುತ್ತಿದೆ
ಇನ್ನೊಂದೆಡೆ, ಏರ್‌ಟೆಲ್‌ನ 179 ರೂ ರೀಚಾರ್ಜ್ ಯೋಜನೆ 2 ಲಕ್ಷ ರೂ.ಗಳ ಜೀವ ವಿಮೆಯನ್ನು ನೀಡುತ್ತಿದೆ. ಈ ರೀಚಾರ್ಜ್ (Recharge Plan) ಯೋಜನೆಯ ಸಿಂಧುತ್ವವು 28 ದಿನಗಳಾಗಿದ್ದು, ಇದರಲ್ಲಿ ಪ್ರತಿದಿನ 2 ಜಿಬಿ ಹೈಸ್ಪೀಡ್ 4 ಜಿ ಇಂಟರ್ನೆಟ್, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ, ಜೊತೆಗೆ ಪ್ರತಿದಿನ 300 ಉಚಿತ ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಇದು ಮಾತ್ರವಲ್ಲ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಉಚಿತ ಚಂದಾದಾರಿಕೆ ಸಹ ಯೋಜನೆಯಲ್ಲಿ ಲಭ್ಯ ಇರಲಿದೆ. ದೈನಂದಿನ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗ ಕಡಿಮೆಯಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.


ಇದನ್ನೂ ಓದಿ- BSNL Recharge plan : ಕೇವಲ 68 ರೂಪಾಯಿಯಲ್ಲಿ ಸಿಗಲಿದೆ 21GB data ಜೊತೆಗೆ ಇನ್ನಷ್ಟು ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.