ನವದೆಹಲಿ : ಬಿಎಸ್ಎನ್ಎಲ್ (BSNL) ಬಳಕೆದಾರರಿಗೆ ಅಗ್ಗದ ಮತ್ತು ಉತ್ತಮ ರೀಚಾರ್ಜ್ ಪ್ಲಾನ್ (Recharge plan) ಅನ್ನು ತಂದಿದೆ. ಇದು 70 ರೂಪಾಯಿಗಿಂತಲೂ ಕಡಿಮೆಯ ರೀಚಾರ್ಜ್ ಪ್ಲಾನ್. ಇದರಲ್ಲಿ ದೈನಂದಿನ ಡಾಟಾ ಜೊತೆಗೆ ಅನೇಕ ಪ್ರಯೋಜನಗಳು ಸಿಗಲಿವೆ.
68 ರೂ ರೀಚಾರ್ಜ್ :
ಬಿಎಸ್ಎನ್ಎಲ್ನ (BSNL) ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 68 ರೂಪಾಯಿ. ಇದರಲ್ಲಿ ದೈನಂದಿನ ಡೇಟಾ (Data) ಪ್ರಯೋಜನ ಸಿಗಲಿದೆ. ಹೌದು, ಈ ಅಗ್ಗದ ರೀಚಾರ್ಜ್ ನಲ್ಲಿ (Recharge) ದೈನಂದಿನ ಬಳಕೆಗಾಗಿ 1.5 ಜಿಬಿ ಡೇಟಾ ಸಿಗಲಿದೆ. ಅದೇ ಸಮಯದಲ್ಲಿ, ಈ ಯೋಜನೆಯ ವ್ಯಾಲಿಡಿಟಿ, 14 ದಿನಗಳವರೆಗೆ ಇರುತ್ತದೆ. ಅಂದರೆ 68 ರೂಪಾಯಿ ರೀಚಾರ್ಜ್ ನಲ್ಲಿ 14 ದಿನಗಳವರೆಗೆ 21 ಜಿಬಿ ಡೇಟಾ ಸಿಗಲಿದೆ.
ಇದನ್ನೂ ಓದಿ : Oppo Phones: ಭಾರತದಲ್ಲಿ 2,500 ರೂ. ಅಗ್ಗವಾದ Oppo ಫೋನ್, ಇಲ್ಲಿದೆ ಬೆಲೆ, ವೈಶಿಷ್ಟ್ಯ
ಬಿಎಸ್ಎನ್ಎಲ್ ಅಲ್ಲದೆ, ಬೇರೆ ಯಾವುದೇ ಟೆಲಿಕಾಂ ಕಂಪನಿಯು ಈ ರೀತಿಯ ರೀಚಾರ್ಜ್ ಪ್ಲಾನ್ ಒದಗಿಸಿಲ್ಲ. Vi ಪ್ರತಿದಿನ 1 ಜಿಬಿ ಡೇಟಾವನ್ನು 148 ರೂ.ಗಳ ಪ್ಯಾಕ್ನಲ್ಲಿ ಒದಗಿಸುತ್ತದೆ, ಇದರ ವ್ಯಾಲಿಡಿಟಿ 18 ದಿನಗಳವರೆಗೆ ಇರಲಿದೆ.
ಜಿಯೋ ಯೋಜನೆ :
ಜಿಯೋನ (Jio) 28 ದಿನಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಸಿಗುತ್ತದೆ. ಅಲ್ಲದೆ, ಬಳಕೆದಾರರು ಯಾವುದೇ ನೆಟ್ವರ್ಕ್ನಲ್ಲಿ (Network) ಅನಿಯಮಿತ ಕರೆ ಮಾಡುವ ಅವಕಾಶವಿರುತ್ತದೆ. ಇದಲ್ಲದೆ, ಬಳಕೆದಾರರು, ಜಿಯೋ ನ್ಯೂಸ್ ಮತ್ತು ಜಿಯೋ ಸಿನೆಮಾದಂತಹ ಅಪ್ಲಿಕೇಶನ್ಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ : Whatsappನಲ್ಲಿದೆ ಈ ಅದ್ಭುತ ಫೀಚರ್ಸ್ ; App ಬಳಸುವುದು ಇನ್ನಷ್ಟು ಸುಲಭ
ಏರ್ಟೆಲ್ ಯೋಜನೆ :
ಏರ್ಟೆಲ್ನ (Airtel) ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಪ್ರತಿದಿನ 100 ಎಸ್ಎಂಎಸ್ನೊಂದಿಗೆ (SMS) 2 ಜಿಬಿ ಡೇಟಾ ಲಭ್ಯವಿರುತ್ತದೆ. ಅಲ್ಲದೆ, ಬಳಕೆದಾರರು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ಬಳಕೆದಾರರು ಯೋಜನೆಯೊಂದಿಗೆ ಏರ್ಟೆಲ್ ಎಕ್ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕಿನ ಚಂದಾದಾರಿಕೆಯನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಈ ಪ್ಯಾಕ್ನ ವ್ಯಾಲಿಡಿಟಿ 28 ದಿನಗಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.