Redmi Note 10 Pro : ಶೀಘ್ರದಲ್ಲೇ ಲಾಂಚ್ ಆಗಲಿದೆ ಅಗ್ಗದ್ 5G ಸ್ಮಾರ್ಟ್‌ಫೋನ್
ಶೀಘ್ರದಲ್ಲೇ ಲಾಂಚ್ ಆಗಲಿರುವ ಅಗ್ಗದ 5G ಸ್ಮಾರ್ಟ್‌ಫೋನ್ ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ (Qualcomm Snapdragon) 700 5G ಸರಣಿ ಪ್ರೊಸೆಸರ್ನೊಂದಿಗೆ ಬರಬಹುದು ಅಥವಾ ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ ಮಿಡ್ ರೇಂಜ್ ಪ್ರೊಸೆಸರ್ನೊಂದಿಗೆ ಬಳಸಬಹುದು. 30W ನ ವೇಗದ ಚಾರ್ಜಿಂಗ್ ಬೆಂಬಲವನ್ನು ಫೋನ್‌ನಲ್ಲಿ ಒದಗಿಸಬಹುದು. 5,020mAh ಬ್ಯಾಟರಿಯನ್ನು ಫೋನ್‌ನಲ್ಲಿ ನೀಡುವ ನಿರೀಕ್ಷೆಯಿದೆ.
ನವದೆಹಲಿ : ಹೊಸ ವರ್ಷದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಅನೇಕ ದೊಡ್ಡ ಕಂಪನಿಗಳು ತಮ್ಮ ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಈ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಏತನ್ಮಧ್ಯೆ ಚೀನಾದ ಮೊಬೈಲ್ ಕಂಪನಿ ಶಿಯೋಮಿ (Xiaomi) ಶೀಘ್ರದಲ್ಲೇ ರೆಡ್ಮಿ ನೋಟ್ 10 ಪ್ರೊ (Redmi Note 10 Pro) ಅನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಇದೆ. ಹೊಸ ಫೋನ್‌ನಲ್ಲಿ 5G ತಂತ್ರಜ್ಞಾನ ಅಳವಡಿಸಲಾಗುವುದು ಎಂಬುದು ಮೊದಲ ಬಾರಿಗೆ ಬಹಿರಂಗಗೊಂಡಿದೆ.
ನಮ್ಮ ಪಾಲುದಾರ ವೆಬ್‌ಸೈಟ್ bgr.in ಪ್ರಕಾರ, ರೆಡ್‌ಮಿ ನೋಟ್ 10 ಪ್ರೊ (Redmi Note 10 Pro) ಅನ್ನು ಇತ್ತೀಚೆಗೆ ಎಫ್‌ಸಿಸಿ ಪ್ರಮಾಣೀಕರಣಕ್ಕಾಗಿ ಕಳುಹಿಸಲಾಗಿದೆ. ಪ್ರಮಾಣೀಕರಣ ತಾಣದ ಪ್ರಕಾರ, ಶಿಯೋಮಿ ರೆಡ್‌ಮಿ ನೋಟ್ 10 ಪ್ರೊನ ಜಾಗತಿಕ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು.
ರೆಡ್‌ಮಿ ನೋಟ್ 10 ಪ್ರೊ (Redmi Note 10 Pro) 5G ಸ್ಮಾರ್ಟ್‌ಫೋನ್ ಆಗಿರುತ್ತದೆ!
ಸ್ವೀಕರಿಸಿದ ಮಾಹಿತಿಯ ಪ್ರಕಾರ ರೆಡ್‌ಮಿ ನೋಟ್ 10 ಪ್ರೊ ಅನ್ನು ಇಸಿಸಿ, ಸಿಂಗಾಪುರದ ಐಎಂಡಿಎ ಮತ್ತು ಮಲೇಷಿಯಾದ ಎಂಸಿಎಂಸಿ ಪ್ರಮಾಣೀಕರಣ ತಾಣಗಳಲ್ಲಿ ಎಫ್‌ಸಿಸಿಗೆ ಹೆಚ್ಚುವರಿಯಾಗಿ ಅದೇ ಮಾದರಿ ಸಂಖ್ಯೆಯೊಂದಿಗೆ ಪಟ್ಟಿ ಮಾಡಲಾಗಿದೆ. ವಿವರಗಳನ್ನು ಪಟ್ಟಿ ಮಾಡುವುದರ ಜೊತೆಗೆ ಟಿಪ್‌ಸ್ಟರ್ ಫೋನ್‌ನ ಕೆಲವು ವಿಶೇಷಣಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಮಾರ್ಟ್‌ಫೋನ್ 5G ನೆಟ್‌ವರ್ಕ್‌ಗಳ ಬೆಂಬಲ ಮತ್ತು ವೇಗದ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರಲಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಫೋನ್ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Xiaomi Mi 10i ಸ್ಮಾರ್ಟ್‌ಫೋನ್ ಬಿಡುಗಡೆ, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ
ರೆಡ್ಮಿ ನೋಟ್ 10 ಪ್ರೊನ ವೈಶಿಷ್ಟ್ಯಗಳನ್ನು ತಿಳಿಯಿರಿ :
ರೆಡ್ಮಿ ನೋಟ್ 10 ಪ್ರೊ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಸಂಭವನೀಯ ವಿಶೇಷಣಗಳ ಬಗ್ಗೆ ಹೇಳುವುದಾದರೆ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ (Qualcomm Snapdragon) 700 5G ಸರಣಿ ಪ್ರೊಸೆಸರ್ನೊಂದಿಗೆ ಬರಬಹುದು ಅಥವಾ ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ ಮಿಡ್ ರೇಂಜ್ ಪ್ರೊಸೆಸರ್ನೊಂದಿಗೆ ಬಳಸಬಹುದು. 30W ನ ವೇಗದ ಚಾರ್ಜಿಂಗ್ ಬೆಂಬಲವನ್ನು ಫೋನ್‌ನಲ್ಲಿ ಒದಗಿಸಬಹುದು. 5,020mAh ಬ್ಯಾಟರಿಯನ್ನು ಫೋನ್‌ನಲ್ಲಿ ನೀಡುವ ನಿರೀಕ್ಷೆಯಿದೆ.
Xiaomi ತನ್ನ ಅಗ್ಗದ 5G ಸ್ಮಾರ್ಟ್‌ಫೋನ್ Mi 10i ಅನ್ನು ನಿನ್ನೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಎಂಬುದು ಉಲ್ಲೇಖಿಸಬೇಕಾದ ಸಂಗತಿ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 20,999 ರೂ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750 ಜಿ 5G ಪ್ರೊಸೆಸರ್ ಇದೆ. ಅಲ್ಲದೆ ಫೋನ್‌ನ ಹಿಂಭಾಗದಲ್ಲಿ 108 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಾಗಿ ಇದು 16 ಎಂಪಿ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ : ನಿಮ್ಮ Mi, Redmi ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಇಲ್ಲಿದೆ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.