ನಿಮ್ಮ Mi, Redmi ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಇಲ್ಲಿದೆ ಪರಿಹಾರ

ನಿಮ್ಮ ಎಂಐ (Mi) ಮತ್ತು ರೆಡ್‌ಮಿ (Redmi) ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಚಿಂತಿಸಬೇಡಿ. ಈ ಸಮಸ್ಯೆಯನ್ನು ನೀವು ಮಾತ್ರ ಎದುರಿಸುತ್ತಿಲ್ಲ. ಹಲವಾರು ಸ್ಮಾರ್ಟ್‌ಫೋನ್ ಬಳಕೆದಾರರು ಇತ್ತೀಚೆಗೆ ತಮ್ಮ ಮಿ ಮತ್ತು ರೆಡ್‌ಮಿ ಫೋನ್‌ಗಳನ್ನು ಮತ್ತೆ ರೀಬೂಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Last Updated : Nov 17, 2020, 11:55 AM IST
  • ನಿಮ್ಮ ಎಂಐ (Mi) ಮತ್ತು ರೆಡ್‌ಮಿ (Redmi) ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ?
  • ಹಲವಾರು ಸ್ಮಾರ್ಟ್‌ಫೋನ್ ಬಳಕೆದಾರರು ಇತ್ತೀಚೆಗೆ ತಮ್ಮ ಮಿ ಮತ್ತು ರೆಡ್‌ಮಿ ಫೋನ್‌ಗಳನ್ನು ಮತ್ತೆ ರೀಬೂಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
  • Mi & Mi ಸಾಧನಗಳು ದೋಷವನ್ನು ತೋರಿಸುತ್ತಿವೆ, ಇದರಿಂದಾಗಿ ಸಾಧನದ ಅನಗತ್ಯ ರೀಬೂಟ್ ಉಂಟಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ನಿಮ್ಮ  Mi, Redmi ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ?  ಇಲ್ಲಿದೆ ಪರಿಹಾರ title=

ನವದೆಹಲಿ: ನಿಮ್ಮ ಎಂಐ (Mi) ಮತ್ತು ರೆಡ್‌ಮಿ (Redmi) ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಚಿಂತಿಸಬೇಡಿ. ಇದು ನಿಮ್ಮೊಬ್ಬರ ಸಮಸ್ಯೆಯಲ್ಲ. ಹಲವಾರು ಸ್ಮಾರ್ಟ್‌ಫೋನ್ ಬಳಕೆದಾರರು ಇತ್ತೀಚೆಗೆ ತಮ್ಮ ಎಂಐ ಮತ್ತು ರೆಡ್‌ಮಿ ಫೋನ್‌ಗಳನ್ನು ಮತ್ತೆ ರೀಬೂಟ್ ಮಾಡುವ ಬಗ್ಗೆ ದೂರಿದ್ದಾರೆ.

ಬಳಕೆದಾರರ ಪ್ರತಿಕ್ರಿಯೆಯನ್ನು ಸ್ಮಾರ್ಟ್‌ಫೋನ್‌ (Smartphones) ತಯಾರಕರು ಸಹ ಒಪ್ಪಿಕೊಂಡಿದ್ದಾರೆ ಮತ್ತು ಕಂಪನಿಯು "ಸಮಸ್ಯೆಯನ್ನು ಪರಿಹರಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ದೃಢಪಡಿಸಿದೆ. ಸಮಸ್ಯೆಯನ್ನು ಪರಿಹರಿಸುವ ನವೀಕರಣವು ಮುಂದಿನ ವಾರದ ಆರಂಭದಲ್ಲಿ ಹೊರಬರಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಈ ಕುರಿತಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿಯು, “Mi & Mi ಸಾಧನಗಳು ದೋಷವನ್ನು ತೋರಿಸುತ್ತಿವೆ, ಇದರಿಂದಾಗಿ ಸಾಧನದ ಅನಗತ್ಯ ರೀಬೂಟ್ ಉಂಟಾಗುತ್ತಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. ಅಪ್ಲಿಕೇಶನ್ ನವೀಕರಣದ ಸಮಯದಲ್ಲಿ ಕೆಲವು ಕೋಡ್ ತಪ್ಪಾಗಿ ವರ್ತಿಸುತ್ತಿದೆ ಎಂದು ಗಮನಿಸಲಾಗಿದೆ” ಎಂದು ತಿಳಿಸಿದೆ.

ನಿಮ್ಮ ಮೊಬೈಲ್‌ನಲ್ಲೂ ಕೆಲವು ಅಪ್ಲಿಕೇಶನ್‌ಗಳನ್ನು Remove ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಟ್ರಿಕ್ ಅನುಸರಿಸಿ

ಇದಲ್ಲದೆ ಸಮಸ್ಯೆಯನ್ನು ಬಗೆಹರಿಸಲು ಮತ್ತು ಮುಂದಿನ ವಾರದ ಆರಂಭದಲ್ಲಿ ಶಾಶ್ವತ ನವೀಕರಣವನ್ನು ರೂಪಿಸಲು ಅಪ್ಲಿಕೇಶನ್ ಡೆವಲಪರ್‌ನೊಂದಿಗೆ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ನೀಡಿರುವ ಕಂಪನಿಯು ಕಳೆದ 36 ಗಂಟೆಗಳ ಅವಧಿಯಲ್ಲಿ ತಾತ್ಕಾಲಿಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿರುವುದಾಗಿ ವಿವರಿಸಿದೆ. ಗ್ರಾಹಕರು ತಮ್ಮ ಸಾಧನಗಳನ್ನು ಸೇವಾ ಕೇಂದ್ರದಲ್ಲಿ ಪ್ಲಾಶ್ ಮಾಡಿಸುವ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಪಡೆಯಬಹುದಾಗಿದೆ. Mi ಇಂಡಿಯಾದಲ್ಲಿ ಗ್ರಾಹಕರ ಅನುಭವವು ಹೆಚ್ಚಿನ ಆದ್ಯತೆಯಾಗಿದೆ ಮತ್ತು ಅವರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಅದು ಹೇಳಿದೆ.

ಮೊದಲಿಗಿಂತ ಹೆಚ್ಚು ಶಕ್ತಿಶಾಲಿ ನಿಮ್ಮ ಸ್ಮಾರ್ಟ್‌ಫೋನ್ ಅದು ಹೇಗೆಂದು ಇಲ್ಲಿ ತಿಳಿಯಿರಿ

ಏರ್ಟೆಲ್ ನೆಟ್ವರ್ಕ್ನ ಸಿಮ್ ಹೊಂದಿರುವ  ಮಿ (Mi) ಮತ್ತು ರೆಡ್‌ಮಿ (Redmi) ಬಳಕೆದಾರರಿಗೆ ಹೊಡೆತ ಬಿದ್ದಿದೆ ಎಂದು ಖಚಿತಪಡಿಸುವ ಮೂಲಕ ಈ ಸಮಸ್ಯೆಯನ್ನು ಏರ್ಟೆಲ್ ಸಹ ತಿಳಿಸಿದೆ. ಕಂಪನಿಯ ಗ್ಲೋಬಲ್ ಸಿಐಒ ಹರ್ಮೀನ್ ಮೆಹ್ತಾ ನವೆಂಬರ್ 15 ರಂದು ಬಳಕೆದಾರರಿಗೆ ಭರವಸೆ ನೀಡಿದ್ದರಿಂದ ಟೆಲಿಕಾಂ ದೈತ್ಯ ಈ ಸಮಸ್ಯೆಯನ್ನು ಪರಿಹರಿಸಲು ಏರ್ಟೆಲ್ ಎಂಐ ಇಂಡಿಯಾದೊಂದಿಗೆ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಸಣ್ಣ ಟ್ವೀಕ್ ಹಾಕಲಾಗಿದೆ ಮತ್ತು ಹೊಸ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಲು ಬಳಕೆದಾರರು ಅಪ್ಲಿಕೇಶನ್ ತೆರೆಯುವ ಅಗತ್ಯವಿದೆ ಎಂದು ಮೆಹ್ತಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಈ ವಿಷಯವು ಏರ್‌ಟೆಲ್‌ ಕಂಪನಿಯ ವತಿಯಿಂದ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಕೆಲವು @airtelindia ಗ್ರಾಹಕರು MI ಫೋನ್‌ಗಳಲ್ಲಿ ಫೋನ್ ಕ್ರ್ಯಾಶ್‌ಗಳನ್ನು ಅನುಭವಿಸುತ್ತಿದ್ದಾರೆ. ಕಾರಣವನ್ನು ಕಂಡುಹಿಡಿಯಲು ನಾವು ಶೋಮಿಯೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಅವರು ಪರಿಹಾರವನ್ನು ಸಿದ್ಧಪಡಿಸುತ್ತಿದ್ದಾರೆ. ಏತನ್ಮಧ್ಯೆ ನಾವು ಸಹಾಯ ಮಾಡಲು ಏರ್ಟೆಲ್ #Thanksapp ಸಣ್ಣ ಟ್ವೀಕ್ ಅನ್ನು ಹಾಕಿದ್ದೇವೆ ಎಂದು ಕಂಪನಿ ಟ್ವೀಟ್ ಮೂಲಕ ತಿಳಿಸಿದೆ.

Trending News