ಬೆಂಗಳೂರು : ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ ಅತ್ಯಂತ ಕಡಿಮೆ ಬೆಲೆಯ JioBook ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ  ಕೇವಲ 16,499 ರೂ. ಇದು ಬೇಸಿಕ್ ಲ್ಯಾಪ್ಟಾಪ್ ಆಗಿದ್ದು,  ಅದ್ಭುತ  ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನೊಂದಿಗೆ ಜನರು ಡಿಜಿಬಾಕ್ಸ್‌ನಲ್ಲಿ 100GB ಉಚಿತ ಕ್ಲೌಡ್ ಸ್ಟೋರೇಜ್ ಸ್ಪೇಸ್  ಕ್ಲೈಮ್ ಮಾಡುವುದು ಸಾಧ್ಯವಾಗುತ್ತದೆ. ಅಲ್ಲದೆ, ಇದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

JioBook ಲ್ಯಾಪ್‌ಟಾಪ್ ಬಿಡುಗಡೆ :
ಇದು ಶಕ್ತಿಯುತವಾದ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ನಿಂದ ಚಾಲಿತವಾಗಿದೆ. ಇದು ಮಲ್ಟಿ ಟಾಸ್ಕಿಂಗ್ ಮತ್ತು ಸ್ಮೂತ್ ಪರ್ಫಾರ್ಮರ್ ಆಗಿರಲಿದೆ. ಈ ಲ್ಯಾಪ್ಟಾಪ್  64GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, SD ಕಾರ್ಡ್‌ನೊಂದಿಗೆ ಇದನ್ನು 256GBವರೆಗೆ ವಿಸ್ತರಿಸಬಹುದು. ಜಿಯೋಬುಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇನ್ಫಿನಿಟಿ ಕೀಬೋರ್ಡ್ ಮತ್ತು ಮಲ್ಟಿ -ಗೆಸ್ಚರ್ ಟ್ರ್ಯಾಕ್‌ಪ್ಯಾಡ್. ಲ್ಯಾಪ್‌ಟಾಪ್  ಇನ್ ಬಿಲ್ಟ್  USB ಮತ್ತು HDMI ಪೋರ್ಟ್‌ಗಳೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಬಾಹ್ಯ ಸಾಧನಗಳು ಮತ್ತು ಪೆರಿಫೆರಲ್‌ಗಳಿಗೆ  ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ. 


ಇದನ್ನೂ ಓದಿ :  ಗರ್ಲ್ ಫ್ರೆಂಡ್ ಸಿಗುತ್ತಿಲ್ಲ ಎನ್ನುವವರಿಗೆ ಗುಡ್ ನ್ಯೂಸ್ ! ನಿಮ್ಮ ಆಯ್ಕೆ, ಆದ್ಯತೆಗೆ ತಕ್ಕಂತೆ ಕನ್ಯೆ ಹುಡುಕಲಿದೆ AI Tool


ಈ ಲ್ಯಾಪ್ಟಾಪ್ ನ ಕೆಲವು ಪ್ರಮುಖ ಅಂಶಗಳು :  
- ಇದು JioOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು  ಯುಸರ್ ಫ್ರೆಂಡ್ಲಿ ಮತ್ತು ಆಪ್ಟಿಮೈಸ್ಡ್ ಇಂಟರ್ಫೇಸ್ ಆಗಿದೆ.
- ಇದು 4G ಸಂಪರ್ಕ ಮತ್ತು ಡ್ಯುಯಲ್-ಬ್ಯಾಂಡ್ Wi-Fi ಅನ್ನು  ಸಪೋರ್ಟ್ ಮಾಡುತ್ತದೆ. ಇದು ಎಲ್ಲಿ ಬೇಕಾದರೂ ಯಾವುದೇ ಸಮಯದಲ್ಲಿಯಾದರೂ ಆನ್‌ಲೈನ್‌ನಲ್ಲಿ ಉಳಿಯಲು ಸಕ್ರಿಯಗೊಳಿಸುತ್ತದೆ.
- ಇದರ ವಿನ್ಯಾಸವು ಅಲ್ಟ್ರಾ-ಸ್ಲಿಮ್ ಮತ್ತು ಹಗುರವಾಗಿದ್ದು, ಸುಮಾರು 990 ಗ್ರಾಂನಷ್ಟು ತೂಗುತ್ತದೆ.  ಇದನ್ನು ಒಂದು ತೆಗೆದುಕೊಂಡು ಹೋಗುವುದು ಕೂಡಾ ಬಹಳ ಸುಲಭ. 
- ಇದು ಕಾಂಪ್ಯಾಕ್ಟ್ 11.6-ಇಂಚಿನ ಆಂಟಿ-ಗ್ಲೇರ್ HD ಡಿಸ್ಪ್ಲೇಯನ್ನು ಹೊಂದಿದೆ. ಇದು ಹೊರಗಿನ ಬೆಳಕಿನಲ್ಲಿ ವೀಕ್ಷಿಸುವುದು  ಸುಲಭವಾಗುತ್ತದೆ. 


JioBook ಲ್ಯಾಪ್‌ಟಾಪ್ ಲಭ್ಯತೆ : 
ಹೊಸ JioBook ಲ್ಯಾಪ್‌ಟಾಪ್ ಆಗಸ್ಟ್ 5 ರಂದು ಮಾರಾಟಕ್ಕೆ ಲಭ್ಯವಿರುತ್ತದೆ. ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದಲ್ಲದೆ, ಸಾಧನವನ್ನು ಅಮೆಜಾನ್ ಮೂಲಕ ಕೂಡಾ ಮಾರಾಟ ಮಾಡಲಾಗುತ್ತದೆ.


ಇದನ್ನೂ ಓದಿ : Best Internet Plan: 400ಎಂಬಿಪಿಎಸ್ ಇಂಟರ್ನೆಟ್ ಸ್ಪೀಡ್, 12 ಓಟಿಟಿಗಳ ಉಚಿತ ಚಂದಾದಾರಿಕೆ, ಬೆಲೆ ಕೇವಲ 592 ರೂ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.