ಗರ್ಲ್ ಫ್ರೆಂಡ್ ಸಿಗುತ್ತಿಲ್ಲ ಎನ್ನುವವರಿಗೆ ಗುಡ್ ನ್ಯೂಸ್ ! ನಿಮ್ಮ ಆಯ್ಕೆ, ಆದ್ಯತೆಗೆ ತಕ್ಕಂತೆ ಕನ್ಯೆ ಹುಡುಕಲಿದೆ AI Tool

ನಿಮ್ಮ ಕನಸಿನ ಜೀವನ ಸಂಗಾತಿಯನ್ನು   ಹುಡುಕುತ್ತಿದ್ದು, ನಿಮ್ಮ ಮನಸ್ಸು ಹುಡುಕುತ್ತಿರುವ ಸಂಗಾತಿ ನಿಮಗೆ ಸಿಗುತ್ತಿಲ್ಲ ಎಂದಾದರೆ AI ನಿಮಗೆ ಸಹಾಯ ಮಾಡಲಿದೆ.

Written by - Ranjitha R K | Last Updated : Jul 31, 2023, 12:05 PM IST
  • AI ಟೂಲ್ ಹುಡುಕಲಿದೆ ಸಂಗಾತಿ
  • ನಿಮ್ಮ ಸಂಗಾತಿಯನ್ನು ಇಲ್ಲಿ ಹುಡುಕುವುದು ಹೇಗೆ ?
  • ನಿಮ್ಮ ಆಯ್ಕೆ, ಆದ್ಯತೆಗೆ ತಕ್ಕಂತೆ ಸಿಗಲಿದೆ ಕನ್ಯೆ
ಗರ್ಲ್ ಫ್ರೆಂಡ್ ಸಿಗುತ್ತಿಲ್ಲ ಎನ್ನುವವರಿಗೆ ಗುಡ್ ನ್ಯೂಸ್ ! ನಿಮ್ಮ ಆಯ್ಕೆ, ಆದ್ಯತೆಗೆ ತಕ್ಕಂತೆ ಕನ್ಯೆ ಹುಡುಕಲಿದೆ  AI Tool title=

ಬೆಂಗಳೂರು : ಪ್ರತಿಯೊಬ್ಬರೂ ತಮಗಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ಸಂಗಾತಿ ಆಯ್ಕೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಯು ಭಿನ್ನವಾಗಿರುತ್ತದೆ. ನಿಮ್ಮ ಕನಸಿನ ಜೀವನ ಸಂಗಾತಿಯನ್ನು   ಹುಡುಕುತ್ತಿದ್ದು, ನಿಮ್ಮ ಮನಸ್ಸು ಹುಡುಕುತ್ತಿರುವ ಸಂಗಾತಿ ನಿಮಗೆ ಸಿಗುತ್ತಿಲ್ಲ ಎಂದಾದರೆ AI ನಿಮಗೆ ಸಹಾಯ ಮಾಡಲಿದೆ. ನಿಮ್ಮ ಇಷ್ಟ  ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಸೂಕ್ತವಾದ ಸಂಗಾತಿಯನ್ನು ಹುಡುಕಲು AI ಸಹಾಯ ಮಾಡುತ್ತದೆ. ಈ ರೀತಿಯಾಗಿ, ಶೀಘ್ರದಲ್ಲೇ  ಕನಸಿನ ಕನ್ಯೆ ಅಥವಾ ಹುಡುಗ ನಿಮ್ಮ ಜೀವನವನ್ನು ಪ್ರವೇಶಿಸಬಹುದು. 

AI ಟೂಲ್ ಹುಡುಕಲಿದೆ ಸಂಗಾತಿ : 
AI ಸಹಾಯದಿಂದ, ಈಗ ನಿಮ್ಮ ಪ್ರೀತಿಯನ್ನು ಹುಡುಕುವ ಕೆಲಸ ಸುಲಭವಾಗಲಿದೆ. ಸಿಲಿಕಾನ್ ವ್ಯಾಲಿ ಮೂಲದ ಆಂಡ್ರೆಸೆನ್ ಹೊರೊವಿಟ್ಜ್ ಎಂಬ ಸ್ಟಾರ್ಟಪ್ ಈ ಕೆಲಸವನ್ನು ಯಶಸ್ವಿಗೊಳಿಸಿದೆ. GitHubನಲ್ಲಿ ಟ್ಯುಟೋರಿಯಲ್ ಅನ್ನು ತೆರೆಯಲಾಗಿದ್ದು, ವಿಭಿನ್ನ ವ್ಯಕ್ತಿತ್ವಗಳು ಮತ್ತು ಹಿನ್ನೆಲೆ ಹೊಂದಿರುವ  ಕಸ್ಟಮೈಸೇಬಲ್  AI ಕಂಪಾನಿಯನ್ ಹೇಗೆ  ರಚಿಸುವುದು ಎಂಬುದನ್ನು ವಿವರಿಸುತ್ತದೆ. ಈ AI ಕಂಪ್ಯಾನಿಯನ್ ಅನ್ನು ವ್ಯಕ್ತಿಯ ನಿರ್ದಿಷ್ಟ ಆಸಕ್ತಿ ಮತ್ತು ಸದಭಿರುಚಿಯನ್ನು ಗಮನದಲ್ಲಿಟ್ಟುಕೊಂಡು  ರಚಿಸಲಾಗುತ್ತದೆ. 

ಇದನ್ನೂ ಓದಿ : Best Internet Plan: 400ಎಂಬಿಪಿಎಸ್ ಇಂಟರ್ನೆಟ್ ಸ್ಪೀಡ್, 12 ಓಟಿಟಿಗಳ ಉಚಿತ ಚಂದಾದಾರಿಕೆ, ಬೆಲೆ ಕೇವಲ 592 ರೂ.!

ಕಂಪನಿಯು ಹೇಳಿಕೆ ಏನು ? : 
ಕಂಪನಿಯ ಪ್ರಕಾರ, ಪರಿಪೂರ್ಣ ಸಂಗಾತಿ ಮಾತ್ರವಲ್ಲ ಉತ್ತಮ ಸ್ನೇಹಿತನನ್ನು ಕೂಡಾ ಸಿದ್ದ ಪಡಿಸಬಹುದು. ಇದಕ್ಕಾಗಿ ನಿಮ್ಮ ಆಯ್ಕೆಯ ಪ್ರಕಾರ AI ಮಾದರಿಯನ್ನು ಆಯ್ಕೆ ಮಾಡಬಹುದು. ಈ ಯೋಜನೆಯನ್ನು ಡೆವಲಪರ್‌ಗಳು ಪ್ರಯೋಗವಾಗಿ ಸಿದ್ಧಪಡಿಸಿದ್ದಾರೆ. ಆದರೆ ಅನೇಕ ಟೆಕ್ ಪ್ರೇಮಿಗಳು ಈ ಪ್ರಯೋಗದಿಂದ ಸಾಕಷ್ಟು ಸಂತೋಷಪಟ್ಟಿದ್ದಾರೆ. ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ನಿಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಸಂಬಂಧವನ್ನು ಆಯ್ಕೆ ಮಾಡಬಹುದು.

ತಮಗಾಗಿ ಪ್ರಣಯ ಪಾಲುದಾರರನ್ನು ರಚಿಸಲು AI ಅನ್ನು ಬಳಸಲು ಪ್ರಯತ್ನಿಸಬಹುದು ಎಂದು ಆಂಡ್ರೆಸೆನ್ ಹೊರೊವಿಟ್ಜ್ ತಿಳಿದಿದ್ದಾರೆ.  ತನ್ನ ಚಾಟ್‌ಬಾಟ್‌ಗಳಲ್ಲಿ ಒಂದನ್ನು ರೋಮ್ಯಾಂಟಿಕ್ ಆಗಿ ಇರಿಸಲಾಗುತ್ತದೆ.  AI ಮಾದರಿಯಲ್ಲಿ  ಬಯೋಗ್ರಫಿ ಮತ್ತು ವ್ಯಕ್ತಿತ್ವದ ಮೂಲಕ ಅದು ಹೇಗೆ ವರ್ತಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ ಎಂಬುದನ್ನು ತೋರಿಸುತ್ತದೆ. 

ಇದನ್ನೂ ಓದಿ : ಏಕಾಏಕಿ ನೆಲಕಚ್ಚಿದ iPhone14 ಬೆಲೆ, ಕೇವಲ 34 ಸಾವಿರ ರೂ.ಗಳಿಗೆ ಸಿಗುತ್ತಿದೆ, ಅವಕಾಶ ಮಿಸ್ ಮಾಡ್ಬೇಡಿ!

ಈ ಯೋಜನೆಯಲ್ಲಿ ಎವೆಲಿನ್ ಎಂಬ ಹೊಸ ಪಾತ್ರವನ್ನು ಸೇರಿಸಲಾಗಿದೆ. ಈಕೆ ಸಾಕಷ್ಟು ವಿಭಿನ್ನವಾದ ಮತ್ತು ವಿಶಿಷ್ಟವಾದ ಹಿನ್ನೆಲೆಯನ್ನು ಹೊಂದಿದ್ದಾಳೆ. ಸರ್ಕಸ್‌ನಲ್ಲಿ ಭಾಗವಹಿಸುವುದು ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡುವುದನ್ನು ಮುಂತಾದ ಹಿನ್ನೆಲೆಯುಳ್ಳ ವ್ಯಕ್ತಿ ಎವೆಲಿನ್. ಅವಳ ರೋಮಾಂಚಕ ಅನುಭವಗಳು ಅವಳನ್ನು ಆಸಕ್ತಿದಾಯಕ ವಿಶಿಷ್ಟ ವ್ಯಕ್ತಿತ್ವದ ಪಾತ್ರವನ್ನಾಗಿ ಮಾಡುತ್ತವೆ.

ಇನ್ನು ಬಳಕೆದಾರರು ಲೆಕ್ಸ್, ಲೇಖಕ ಸೆಬಾಸ್ಟಿಯನ್ ಅಥವಾ ಬಾಹ್ಯಾಕಾಶ ನಾಯಿ ಕೊರ್ಗಿ ಸೇರಿದಂತೆ ಕೆಲವು ಪೂರ್ವ ನಿರ್ಮಿತ ಆಯ್ಕೆಗಳನ್ನು ಸಹ ಹೊಂದಿರುತ್ತಾರೆ. ಇಲ್ಲಿ ನಿಮ್ಮ ಸಂಗಾತಿಯನ್ನು ನೀವೇ ವಿನ್ಯಾಸಗೊಳಿಸಬಹುದು. ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ಕನಸಿನ ಸಂಗಾತಿಯನ್ನು ರಚಿಸಲು ನಿಮಗೆ ಅವಕಾಶವನ್ನು ನೀಡುವ ಮೂಲಕ ಚಲನೆಯಿಂದ ನೋಟದವರೆಗೆ ಎಲ್ಲವನ್ನೂ ಕಸ್ಟಮೈಸ್ ಮಾಡಬಹುದು.

ಇದನ್ನೂ ಓದಿ : ಯಾವ ಸ್ಥಳಗಳಲ್ಲಿ ಶೋಧ ನಡೆಸಿದರೆ ನಿಮಗೆ ವಜ್ರ ಸಿಗುತ್ತೆ, ಕೊನೆಗೂ ಬಹಿರಂಗಗೊಂಡ ರಹಸ್ಯ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News