Reliance JioFiber ಭಾರತದಲ್ಲಿ ಅತ್ಯಂತ ಜನಪ್ರೀಯ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಕಂಪನಿಗಳಲ್ಲಿ ಒಂದು. ಅತ್ಯಂತ ಕಡಿಮೆ ಸಮಯದಲ್ಲಿ JioFiber ಹಲವು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP) ಅನ್ನು ಹಿಂದಿಕ್ಕಿದೆ. ಇನ್ನೊಂದೆಡೆ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಲು ಕಂಪನಿಯೂ ಕೂಡ ಬ್ರಾಡ್ ಬ್ಯಾಂಡ್ ನ ಹಲವು ಅಗ್ಗದ ಹಾಗೂ ಹೆಚ್ಚು ಡೇಟಾ ನೀಡುವ ಪ್ಲಾನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಹೀಗಿರುವಾಗ ಇಂದು ನಾವು ರಿಲಯನ್ಸ್ ಜಿಯೋ ಫೈಬರ್ ನ ಪೋರ್ಟ್ಫೋಲಿಯೋನಲ್ಲಿರುವ ಅತ್ಯಂತ ಜಬರ್ದಸ್ತ್ ಪ್ಲಾನ್ ಗಳ ಕುರಿತು ಹೇಳಲಿದ್ದು, ಈ ಪ್ಲಾನ್ ಅಡಿ ಜಿಯೋ ಕೇವಲ ರೂ.199 ಗಳಲ್ಲಿ 1000ಜಿಬಿ ಅಂದರೆ 1ಟಿಬಿ ಡೇಟಾ ಒದಗಿಸುತ್ತದೆ. ಹಾಗಾದರೆ ಬನ್ನಿ ಈ ಪ್ಲಾನ್ ಕುರಿತು ವಿಸ್ತ್ರತವಾಗಿ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-whatsapp photoಗಳಿಂದ ತುಂಬಿ ಹೋಗಿದೆಯಾ ನಿಮ್ಮ ಫೋನ್ ? ಹಾಗಿದ್ದರೆ ಈ ಟ್ರಿಕ್ ಬಳಸಿ


Reliance Jio ಕಂಪನಿಯ 1TB ಡೇಟಾ ಪ್ಲಾನ್
ರಿಲಯನ್ಸ್ JioFiber ತನ್ನ ಬಳಕೆದಾರರಿಗೆ ಕೇವಲ ರೂ.199ಕ್ಕೆ 1ಟಿಬಿ ಡೇಟಾ ನೀಡುತ್ತದೆ. ಈ 1TB ಡೇಟಾ ಗ್ರಾಹಕರಿಗೆ 7 ದಿನಗಳಿಗಾಗಿ ನೀಡಲಾಗುತ್ತದೆ. ಅಂದರೆ ಈ ಪ್ಲಾನ್ ವ್ಯಾಲಿಡಿಟಿ 7 ದಿನಗಳವರೆಗೆ ಇರಲಿದೆ.  ಡೇಟಾ ಲಿಮಿಟ್ ಮುಕ್ತಾಯದ ಬಳಿಕ ಪ್ಲಾನ್ ನಲ್ಲಿ ಸಿಗುವ ಇಂಟರ್ನೆಟ್ ಸ್ಪೀಡ್ 1Mbpsಗೆ ಇಳಿಕೆಯಾಗಲಿದೆ. ಈ ಪ್ಲಾನ್ ನ ಇನ್ನೊಂದು ವೈಶಿಷ್ಟ್ಯ ಎಂದರೆ, ಇದರಲ್ಲಿ ಜಿಯೋ ಫೈಬರ್ ಲ್ಯಾಂಡ್ ಲೈನ್ ಸರ್ವಿಸ್ ಜೊತೆಗೆ ಅನ್ಲಿಮಿಟೆಡ್ ಧ್ವನಿ ಕರೆ ಉಚಿತವಾಗಿ ಸಿಗಲಿದೆ. GST ಅನ್ವಯಿಸಿದ ಬಳಿಯ 199 ರೂ.ಬೆಲೆಯ ಈ ಕಾಂಬೋ ಪ್ಲಾನ್ ಬೆಲೆ ರೂ.234.82 ಆಗಲಿದೆ.


ಇದನ್ನೂ ಓದಿ-ಕಡಿಮೆ ಬೆಲೆಗೆ ಸಿಗುತ್ತಿದೆ Samsungನ ಈ ಫೋನ್..! 6GB RAM, 6000mAh ಬ್ಯಾಟರಿ ಜೊತೆ ಸಿಗುತ್ತಿದೆ ಈ ವೈಶಿಷ್ಟ್ಯಗಳು


ಇದೊಂದು ರೀತಿಯ ಕಾಂಬೋ ಪ್ಲಾನ್ ಆಗಿದೆ
ಇದೊಂದು ಡೇಟಾ ಎಚ್ಚರಿಕೆಯ ಪ್ಲಾನ್ ಆಗಿದೆ. ಅಂದರೆ, ಗ್ರಾಹಕರು ತಾವು ಖರೀದಿಸಿರುವ ಪ್ಲಾನ್ ನ ಸಂಪೂರ್ಣ FUP ಪೂರ್ಣಗೊಳಿಸಿದ ಬಳಿಕ ಮಾತ್ರ ಗ್ರಾಹಕರು ಈ ಪ್ಲಾನ್ ಖರೀದಿಸಬಹುದು. ಏಕೆಂದರೆ JioFiber ತನ್ನ ಎಲ್ಲಾ ಪ್ಲಾನ್ ಗಳ ಜೊತೆಗೆ ಬಳಕೆದಾರರಿಗೆ 313TB ಡೇಟಾ ಒದಗಿಸುತ್ತದೆ. ಹೀಗಿರುವಾಗ ಎವರೇಜ್ ಡೇಟಾ ಬಳಕೆದಾರರಿಗೆ ಈ ಪ್ಲಾನ್ ನ ಅಗತ್ಯತೆ ತುಂಬಾ ಕಡಿಮೆ ಬೀಳುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ BSNL ಆಗಲಿ ಅಥವಾ ಏರ್ಟೆಲ್ ಆಗಲಿ ಇಂತಹ ಯಾವುದೇ ಕೊಡುಗೆ ನೀಡುವುದಿಲ್ಲ. ಒಂದು ವೇಳೆ ಏರ್ಟೆಲ್ ಆಗಲಿ ಅಥವಾ ಬಿಎಸ್ಎನ್ಎಲ್ ಗ್ರಾಹಕರು ಒಂದು ವೇಳೆ ನೀಡಲಾಗಿರುವ FUP ಸಂಪೂರ್ಣ ಬಳಸಿಕೊಂಡರೆ, ಅವರಿಗೆ ಈ ರೀತಿಯ ಯಾವುದೇ ಆಫರ್ ಆಗಲಿ ಅಥವಾ ರಿಚಾರ್ಜ್ ಆಗಲಿ ಸಿಗುವುದಿಲ್ಲ.


ಇದನ್ನೂ ಓದಿ-App ಇಲ್ಲದೆಯೇ Ola ಅಥವಾ Uber ಕ್ಯಾಬ್ ಬುಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ