whatsapp photoಗಳಿಂದ ತುಂಬಿ ಹೋಗಿದೆಯಾ ನಿಮ್ಮ ಫೋನ್ ? ಹಾಗಿದ್ದರೆ ಈ ಟ್ರಿಕ್ ಬಳಸಿ

Whatsapp Tips And Tricks:ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳಿಂದಲೇ ಮೊಬೈಲ್ ಜಾಗವನ್ನು ತುಂಬುತ್ತದೆ. ಫೋನ್‌ನ ಗ್ಯಾಲರಿಯು ಪ್ರತಿದಿನ ಬರುವ ಈ ಫೋಟೋಗಳಿಂದ ಕೂಡಿದೆ. ನಂತರ ಫೋನ್ ಸ್ಟೋರೇಜ್ ಖಾಲಿಯಾದ ನಂತರ, ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.

Written by - Ranjitha R K | Last Updated : Jul 21, 2021, 02:58 PM IST
  • ವಾಟ್ಸ್‌ಆ್ಯಪ್‌ ಶುಭೋದಯ ಫೋಟೋಗಳಿಂದ ತುಂಬಿ ಹೋಗಿದೆಯಾ
  • ಈ ಟ್ರಿಕ್ ಬಳಸಿದರೆ ವಾಟ್ಸ್‌ಆ್ಯಪ್‌ನಲ್ಲಿ ಬರುವ ಫೋಟೋ, ವೀಡಿಯೊಗಳು ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ
  • ಇದಕ್ಕಾಗಿ ನೀವು ವಾಟ್ಸ್‌ಆ್ಯಪ್‌ ಸೆಟ್ಟಿಂಗ್ ಗೆ ಹೋಗಬೇಕು.
whatsapp photoಗಳಿಂದ ತುಂಬಿ ಹೋಗಿದೆಯಾ ನಿಮ್ಮ ಫೋನ್ ? ಹಾಗಿದ್ದರೆ ಈ ಟ್ರಿಕ್ ಬಳಸಿ   title=
Whatsapp Tips And Tricks (photo zee news)

ನವದೆಹಲಿ :  Whatsapp Tips And Tricks: ವಾಟ್ಸಾಪ್ ಅನ್ನು ಕೋಟ್ಯಂತರ ಜನರು ಬಳಸುತ್ತಾರೆ. ಮಕ್ಕಳಿಂದ ವೃದ್ಧರವರೆಗೆ ವಾಟ್ಸ್‌ಆ್ಯಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ಅನೇಕ whatsaap ಗ್ರೂಪ್ ಗಳಿರುತ್ತವೆ. ಈ ಗ್ರೂಪ್ ನಲ್ಲಿ ಅನೇಕ ಪೋಸ್ಟ್ ಗಳು ಬರುತ್ತವೆ. ಇಲ್ಲಿ ಬರುವ ಅನೇಕ ಪೋಸ್ಟ್ ಗಳಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಬಹಳಷ್ಟು ಸಲ ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳೇ ಹೆಚ್ಚಾಗಿರುತ್ತವೆ.  

ಈ ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳಿಂದಲೇ ಮೊಬೈಲ್ ಸ್ಪೇಸ್ ತುಂಬಿ ಹೋಗುತ್ತದೆ. ಫೋನ್‌ನ ಗ್ಯಾಲರಿಯು (Phone gallery) ಪ್ರತಿದಿನ ಬರುವ ಈ ಫೋಟೋಗಳಿಂದ ಕೂಡಿರುತ್ತದೆ. ನಂತರ ಫೋನ್ ಸ್ಟೋರೇಜ್ ಖಾಲಿಯಾದ ನಂತರ, ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೆ ಈ ಟ್ರಿಕ್ ಬಳಸುವ ಮೂಲಕ, ಫೋಟೋಗಳು ಗ್ಯಾಲರಿಗೆ (Photo gallery) ಬರದಂತೆ ತಡೆಯಬಹುದು. 

ಇದನ್ನೂ ಓದಿ : ಕಡಿಮೆ ಬೆಲೆಗೆ ಸಿಗುತ್ತಿದೆ Samsungನ ಈ ಫೋನ್..! 6GB RAM, 6000mAh ಬ್ಯಾಟರಿ ಜೊತೆ ಸಿಗುತ್ತಿದೆ ಈ ವೈಶಿಷ್ಟ್ಯಗಳು

ವಾಟ್ಸ್‌ಆ್ಯಪ್‌ (Whatsaap) ಇನ್ಸ್ಟಾಲ್ ಮಾಡಿದ ತಕ್ಷಣ, ಗ್ಯಾಲರಿಯಲ್ಲಿ ಡೀಫಾಲ್ಟ್ ಫೋಲ್ಡರ್ ರಚನೆಯಾಗುತ್ತದೆ. ಅದರಲ್ಲಿ ಯಾವುದೇ ವೀಡಿಯೊ (Video) ಅಥವಾ ಫೋಟೋ ಬಂದರೂ ಅದು, ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಆದರೆ, ಈ ಟ್ರಿಕ್ ಬಳಸುವುದರಿಂದ, ಗ್ಯಾಲರಿಯಲ್ಲಿ ಫೋಟೋ, ವಿಡಿಯೋ ಸೇವ್ ಆಗದಂತೆ ಮಾಡಬಹುದು.   

ಆಂಡ್ರಾಯ್ಡ್ ಬಳಕೆದಾರರು ಈ ರೀತಿ ಮಾಡಬಹುದು : 
1. ಮೊದಲನೆಯದಾಗಿ, ನಿಮ್ಮ ವಾಟ್ಸ್‌ಆ್ಯಪ್‌ ಓಪನ್ ಮಾಡಿ, ಸೆಟ್ಟಿಂಗ್‌ಗಳಿಗೆ ಹೋಗಿ.
2. ಸೆಟ್ಟಿಂಗ್‌ಗಳಲ್ಲಿ  ಚಾಟ್ ಆಪ್ಶನ್  (Chat option) ಇರುತ್ತದೆ ಅದನ್ನು ಕ್ಲಿಕ್ ಮಾಡಿ.
3. ಗ್ಯಾಲರಿಯಲ್ಲಿ ಟಾಗಲ್ ಆಫ್ ಶೋ ಮೀಡಿಯಾ ಕ್ಲಿಕ್ ಮಾಡಿ.
4. ಅದರ ನಂತರ ವಾಟ್ಸ್‌ಆ್ಯಪ್‌ನಲ್ಲಿ ಬರುವ ಫೋಟೋಗಳು ಮತ್ತು ವೀಡಿಯೊಗಳು ಗ್ಯಾಲರಿಯಲ್ಲಿ  ಸೇವ್ ಆಗುವುದಿಲ್ಲ. 

ಇದನ್ನೂ ಓದಿ : App ಇಲ್ಲದೆಯೇ Ola ಅಥವಾ Uber ಕ್ಯಾಬ್ ಬುಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಐಒಎಸ್ ಬಳಕೆದಾರರು ಈ ರೀತಿ ಮಾಡಬಹುದು : 
1. ಮೊದಲನೆಯದಾಗಿ, ನಿಮ್ಮ ವಾಟ್ಸ್‌ಆ್ಯಪ್‌ ಓಪನ್ ಮಾಡಿ, ಸೆಟ್ಟಿಂಗ್‌ಗಳಿಗೆ ಹೋಗಿ.
2. ಸೆಟ್ಟಿಂಗ್‌ಗಳಲ್ಲಿ  ಚಾಟ್ ಆಪ್ಶನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
3. ಟಾಗಲ್ ಆಫ್ ಸೇವ್ ಟು ಕ್ಯಾಮೆರಾ ರೋಲ್ ಕ್ಲಿಕ್ ಮಾಡಿ.
4. ಇಷ್ಟಾದ ನಂತರ ವಾಟ್ಸ್‌ಆ್ಯಪ್‌ನಲ್ಲಿ ಬರುವ ಫೋಟೋಗಳು ಮತ್ತು ವೀಡಿಯೊಗಳು ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News