Jio ನೀಡುತ್ತಿದೆ ಅಗ್ಗದ plan, ಜೊತೆಗೆ ಉಚಿತವಾಗಿ ಸಿಗಲಿದೆ Disney+ Hotstar
ದಿನಕ್ಕೆ 3GB ಡೇಟಾದೊಂದಿಗೆ ಸಿಗುವ ರಿಲಯನ್ಸ್ ಜಿಯೋ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ. ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾದೊಂದಿಗೆ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ನವದೆಹಲಿ : ರಿಲಯನ್ಸ್ ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ (Jio recharge Plan). ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಯೋ ಹಲವು ಜನಪ್ರಿಯ ಪ್ಲಾನ್ ಗಳನ್ನು ಹೊರ ತಂದಿದೆ. ಪ್ರತಿ ದಿನ 1GB, 2GB ಮತ್ತು 3GB ಡೇಟಾ ನೀಡುವ ಅನೇಕ ಯೋಜನೆಗಳನ್ನು ಜಿಯೋ ತಂದಿದೆ (Jio prepaid plans). ಇದೀಗ ಜಿಯೋ ಗ್ರಾಹಕರು ಪ್ರತಿದಿನ 3GB ಹೈ-ಸ್ಪೀಡ್ ಇಂಟರ್ನೆಟ್‌ನೊಂದಿಗೆ ಅನೇಕ ಅದ್ಭುತ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಜಿಯೋ 419 ರೂ. ಪ್ಲಾನ್ :
419 ಬೆಲೆಯ ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ಪ್ರತಿದಿನ 3GB ಇಂಟರ್ನೆಟ್ ಪಡೆಯಬಹುದು. ಅಂದರೆ, ಈ ಪ್ಲಾನ್ ನಲ್ಲಿ ಒಟ್ಟಾರೆಯಾಗಿ 84GB ಡೇಟಾವನ್ನು ಪಡೆಯುವುದು ಸಾಧ್ಯವಾಗುತ್ತದೆ (Jio prepaid plans). ಮಾತ್ರವಲ್ಲ, ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS ಸಿಗಲಿದೆ.
ಇದನ್ನೂ ಓದಿ : Amazon Deal Of The Day: OPPO ನ 5G ಸ್ಮಾರ್ಟ್‌ಫೋನ್ ಅನ್ನು 3 ಸಾವಿರ ರೂಪಾಯಿಗೆ ಖರೀದಿಸಿ
ಜಿಯೋದ 601 ರೂ. ಪ್ರಿಪೇಯ್ಡ್ ಯೋಜನೆ :
ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿಯೂ ಬಳಕೆದಾರರಿಗೆ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯ ಬೆಲೆ 601 ರೂ. ಇದರಲ್ಲಿ ಬಳಕೆದಾರರಿಗೆ 6GB ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ (Jio PLans). ಇಷ್ಟೇ ಅಲ್ಲ, ಇದರಲ್ಲಿ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS ಸೌಲಭ್ಯವನ್ನು ಪಡೆಯಬಹುದು. ಅಲ್ಲದೆ, ಇದರಲ್ಲಿ OTT ಪ್ರಯೋಜನಗಳು ಕೂಡಾ ಲಭ್ಯವಿರಲಿದೆ. ಈ ಪ್ಲಾನ್ ನಲ್ಲಿ Disney + Hotstar VIP ಮತ್ತು ಎಲ್ಲಾ Jio ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಸಿಗಲಿದೆ (Jio prepaid pan benefits).
ಜಿಯೋ 1199 ರೂ. ಯೋಜನೆ :
ಹಿಂದಿನ ಎರಡು ಯೋಜನೆಗಳಿಗೆ ಹೋಲಿಸಿದರೆ ಈ ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿ ಅಧಿಕವಾಗಿರಲಿದೆ (jio recharge plans). ಇದು 84 ದಿನಗಳ ವ್ಯಾಲಿಡಿಟಿಯ್ತೊಂದಿಗೆ ಬರುತ್ತದೆ. ಇದರಲ್ಲಿ ದಿನಕ್ಕೆ 3GB ಡೇಟಾದ ಜೊತೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸಹ ಪ್ರಯೋಜನಗಳನ್ನು ಸಹ ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯು ಜಿಯೋ ಕ್ಲೌಡ್, ಜಿಯೋ ಸಿನಿಮಾ ಮತ್ತು ಜಿಯೋ ಟಿವಿಯಂತಹ (Jio tv) ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.
ಇದನ್ನೂ ಓದಿ : 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ Mini Fridge, ಕಡಿಮೆ ವಿದ್ಯುತ್ ಬಳಕೆಯೊಂದಿಗೆ ನಿಮಿಷಗಳಲ್ಲಿ ಸಿದ್ದವಾಗಲಿದೆ ಐಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.