Amazon Deal Of The Day: OPPO ನ 5G ಸ್ಮಾರ್ಟ್‌ಫೋನ್ ಅನ್ನು 3 ಸಾವಿರ ರೂಪಾಯಿಗೆ ಖರೀದಿಸಿ

Amazon Deal Of The Day: ನೀವು ಸಹ 5G ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್ ದಿನದ ಡೀಲ್ ನಿಮಗೆ ಉಪಯುಕ್ತವಾಗಬಹುದು. OPPO A74 5G ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

Written by - Yashaswini V | Last Updated : Mar 3, 2022, 02:07 PM IST
  • ಅಮೇಜಾನ್ ಡೀಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಅದ್ಭುತ ರಿಯಾಯಿತಿಗಳು ಸಹ ಲಭ್ಯವಿದೆ.
  • OPPO A74 5G ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.
  • ನೀವು OPPO A74 5G ಅನ್ನು 3 ಸಾವಿರ ರೂಪಾಯಿಗಳಿಗೆ ಖರೀದಿಸಲು ಉತ್ತಮ ಅವಕಾಶವಿದೆ
Amazon Deal Of The Day: OPPO ನ 5G ಸ್ಮಾರ್ಟ್‌ಫೋನ್ ಅನ್ನು 3 ಸಾವಿರ ರೂಪಾಯಿಗೆ ಖರೀದಿಸಿ title=
Amazon Deal Of The Day- OPPO A74 5G Offers

Amazon Deal Of The Day: ಅಮೆಜಾನ್‌ನ ಡೀಲ್ ಆಫ್ ದಿ ಡೇಯಲ್ಲಿ ಅನೇಕ ಉತ್ಪನ್ನಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಇಂದಿನ ಡೀಲ್ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿಗಳು ಸಹ ಲಭ್ಯವಿದೆ. ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ 5G ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಈ ವರ್ಷ ಭಾರತದಲ್ಲಿ 5G ಬರಲಿದೆ, ಆದ್ದರಿಂದ ಜನರು 5G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇಚ್ಚಿಸುತ್ತಿದ್ದಾರೆ.  ನೀವು ಸಹ 5G ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್‌ನ ಡೀಲ್ ಆಫ್ ದಿ ಡೇ (Amazon Deal Of The Day) ನಿಮಗೆ ಉಪಯುಕ್ತವಾಗಬಹುದು. OPPO A74 5G ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.

ಅಮೆಜಾನ್‌ನ ಡೀಲ್ ಆಫ್ ದಿ ಡೇ- OPPO A74 5G ಕೊಡುಗೆಗಳು ಮತ್ತು ರಿಯಾಯಿತಿಗಳು:
OPPO A74 5G 6GB RAM + 128GB ಸ್ಟೋರೇಜ್ ರೂಪಾಂತರದ ಬಿಡುಗಡೆಯ ಬೆಲೆ ರೂ. 20,990 ಆಗಿದೆ, ಆದರೆ ಫೋನ್ Amazon ನಲ್ಲಿ ರೂ. 17,990 ಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ 3 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಫೋನ್ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.

ಇದನ್ನೂ ಓದಿ- Redmi Note 11E: ಬಲವಾದ ವೈಶಿಷ್ಟ್ಯಗಳೊಂದಿಗೆ ರೆಡ್ಮಿ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ

ಅಮೆಜಾನ್‌ನ ಡೀಲ್ ಆಫ್ ದಿ ಡೇ- OPPO A74 5G ಎಕ್ಸ್ಚೇಂಜ್ ಆಫರ್ :
OPPO A74 5G ನಲ್ಲಿ 14,900 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ (Smartphone) ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಈ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 14,900 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿರುತ್ತದೆ. ನೀವು ಈ ಎಲ್ಲಾ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾದರೆ ಫೋನ್‌ 3,090 ರೂ.ಗಳಿಗೆ ಲಭ್ಯವಾಗಲಿದೆ.

ಇದನ್ನೂ ಓದಿ-  3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ Mini Fridge, ಕಡಿಮೆ ವಿದ್ಯುತ್‌ ಬಳಕೆಯೊಂದಿಗೆ ನಿಮಿಷಗಳಲ್ಲಿ ಸಿದ್ದವಾಗಲಿದೆ ಐಸ್

Oppo A74 5G ನ ವೈಶಿಷ್ಟ್ಯಗಳು:
ಇದು 6.5-ಇಂಚಿನ ಟಚ್‌ಸ್ಕ್ರೀನ್ FHD+ ಡಿಸ್ಪ್ಲೇ ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 2400x1080 ಆಗಿದೆ. ಇದರ ಸ್ಕ್ರೀನ್ ಟು ಬಾಡಿ ಅನುಪಾತ 90.5 ಪ್ರತಿಶತ. ಇದರ ಪಿಕ್ಸೆಲ್ ಸಾಂದ್ರತೆಯು 405PPI ಆಗಿದೆ. ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 5G ಪ್ರೊಸೆಸರ್ನೊಂದಿಗೆ 2 GHz ವರೆಗೆ ಕ್ಲಾಕ್ ಸ್ಪೀಡ್ ಹೊಂದಿದೆ. ಇದರಲ್ಲಿ ಗ್ರಾಫಿಕ್ಸ್ ಗಾಗಿ ಅಡ್ರಿನೊ 619 ನೀಡಲಾಗಿದೆ. ಇದು 6 GB RAM ಮತ್ತು 128 GB ಸಂಗ್ರಹಣೆಯನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News