ಫೋನ್ ಚಾರ್ಜ್ ಮಾಡುವಾಗ ನೆನಪಿರಲಿ 40-80 ನಿಯಮ
Smartphone Tips: ನೀವು ನಿಮ್ಮ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡ್ತೀರಾ! ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಫೋನ್ ಅನ್ನು ಚಾರ್ಜ್ ಮಾಡಲು ನಿಯಮವೊಂದಿದ್ದು ಅದನ್ನು `40-80 ಚಾರ್ಜಿಂಗ್ ನಿಯಮ` ಎಂದು ಕರೆಯಲಾಗುತ್ತದೆ.
Smartphone Tips: ಪ್ರಸ್ತುತ ಇಡೀ ಜಗತ್ತಿನಾದ್ಯಂತ ಬಹುತೇಕ ಎಲ್ಲಾ ಜನರು ಸಹ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಬ್ಯಾಂಕಿಂಗ್ ಕೆಲಸದಿಂದ ಹಿಡಿದು ಜ್ಞಾನ, ಕ್ರೀಡೆ, ಮನರಂಜನೆ ಹೀಗೆ ಎಲ್ಲದರಲ್ಲೂ ಫೋನ್ ನಮ್ಮ ಜೀವನವನ್ನು ಬಹುತೇಕ ಆಕ್ರಮಿಸಿಬಿಟ್ಟಿದೆ. ಹೀಗಿರುವಾಗ ಫೋನ್ ಆಫ್ ಆಗದಂತೆ ಅದರಲ್ಲಿ ಬ್ಯಾಟರಿ ಖಾಲಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕೆಲಸ. ನಮ್ಮಲ್ಲಿ ಕೆಲವರು ಫೋನ್ ಬ್ಯಾಟರಿ ಸ್ವಲ್ಪ ಕಡಿಮೆಯಾದರೂ ಅದನ್ನು ಚಾರ್ಜ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇನ್ನೂ ಕೆಲವರು ಫೋನ್ ಬ್ಯಾಟರಿ ಪೂರ್ತಿಯಾಗಿ ಖಾಲಿಯಾಗುವವರೆಗೂ ವಿಡಿಯೋ, ಗೇಮ್ ಆಡುತ್ತಾ ಕಾಲ ಕಳೆಯುತ್ತಾರೆ. ಆದರೆ, ಇವೆರಡೂ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗಲು ಪ್ರಮುಖ ಕಾರಣವಾಗಬಹುದು. ಇದನ್ನು ತಪ್ಪಿಸಲು ಫೋನ್ ಚಾರ್ಜ್ ಮಾಡುವಾಗ ಕೆಲ ನಿಯಮಗಳ ಬಗ್ಗೆ ಜಾಗೃತರಾಗಿರುವುದು ಅವಶ್ಯಕ.
ಏನು!, ಫೋನ್ ಚಾರ್ಜ್ ಮಾಡಲು ಯಾವ ನಿಯಮ ಎಂದು ಶಾಕ್ ಆಗಬೇಡಿ. ನಿಮ್ಮ ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕೆಂದು ನೀವು ಬಯಸಿದರೆ ಇದಕ್ಕಾಗಿ ಚಾರ್ಜಿಂಗ್ ಮಾಡುವ ವೇಳೆ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಅವಶ್ಯಕ. ಇದನ್ನು "40-80 ಚಾರ್ಜಿಂಗ್ ನಿಯಮ" ಎಂತಲೂ ಕರೆಯಬಹುದು. ಈ ನಿಯಮದ ಅನುಸಾರ, ನಾವು ನಮ್ಮ ಫೋನ್ ಅನ್ನು 40% ಕ್ಕಿಂತ ಕಡಿಮೆ ಚಾರ್ಜ್ ಮಾಡಬಾರದು ಮತ್ತು 80% ಕ್ಕಿಂತ ಹೆಚ್ಚು ಚಾರ್ಜ್ ಮಾಡಬಾರದು.
ಇದನ್ನೂ ಓದಿ- Flipkart Republic Day Sale: ಐಫೋನ್ 15 ಸೇರಿದಂತೆ ಈ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್
ಸ್ಮಾರ್ಟ್‌ಫೋನ್ ಬಳಕೆದಾರರ ಅಭಿಪ್ರಾಯವೇನು?
ಸ್ಮಾರ್ಟ್‌ಫೋನ್ ಚಾರ್ಜಿಂಗ್ ಗೆ ಸಂಬಂಧಿಸಿದಂತೆ Quora ಪ್ಲಾಟ್‌ಫಾರ್ಮ್‌ನಲ್ಲಿ ಕೆಲವರು 40-80 ಚಾರ್ಜಿಂಗ್ ನಿಯಮವು ಸ್ಮಾರ್ಟ್‌ಫೋನ್ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರಲು ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ. 40-80 ಚಾರ್ಜಿಂಗ್ ನಿಯಮವು ಯಾವುದೇ ಫೋನ್ ಅನ್ನು ಯಾವಾಗಲೂ 40% ಕ್ಕಿಂತ ಕಡಿಮೆ ಚಾರ್ಜ್ ಮಾಡಬಾರದು ಅಂತೆಯೇ 80% ಕ್ಕಿಂತ ಹೆಚ್ಚು ಚಾರ್ಜ್ ಮಾಡಬಾರದು ಎಂಬುದನ್ನೂ ಒತ್ತಿ ಹೇಳುತ್ತದೆ.
ಇದನ್ನೂ ಓದಿ- UPI Tap-To-Pay Feature: ಯುಪಿಐ ಟ್ಯಾಪ್-ಟು-ಪೇ ವೈಶಿಷ್ಟ್ಯ ಬಿಡುಗಡೆ ದಿನಾಂಕ ಮತ್ತಿದರ ವೈಶಿಷ್ಟ್ಯ
ಡಿಸ್ಚಾರ್ಜ್-ಚಾರ್ಜ್ ಸೈಕಲ್:
ವಾಸ್ತವವಾಗಿ, ಇಂದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುವ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ನಿರ್ದಿಷ್ಟ ಸಂಖ್ಯೆಯ 'ಡಿಸ್ಚಾರ್ಜ್-ಚಾರ್ಜ್ ಸೈಕಲ್'ಗಳಿಗೆ ಚಾರ್ಜ್ ಮಾಡಬಹುದು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಒಂದೊಮ್ಮೆ ನಾವು ಫೋನ್ ಅನ್ನು ಫುಲ್ ಚಾರ್ಜ್ ಮಾಡಿದಾಗ ಎಂದರೆ 0% ರಿಂದ 100% ವರೆಗೆ ಚಾರ್ಜ್ ಮಾಡಿದಾಗ, ನಾವು ಡಿಸ್ಚಾರ್ಜ್-ಚಾರ್ಜ್ ಚಕ್ರವನ್ನು ಪೂರ್ಣಗೊಳಿಸುತ್ತೇವೆ. ಇದು ಸ್ಮಾರ್ಟ್‌ಫೋನ್ ಬ್ಯಾಟರಿ ವೇಗವಾಗಿ ಕ್ಷೀಣಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ "40-80 ಚಾರ್ಜಿಂಗ್ ನಿಯಮ"ವನ್ನು ಅನುಸರಿಸಿದರೆ ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
ನೀವು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಾವಧಿಯವರೆಗೆ ಬಾಳಿಕೆ ಬರಬೇಕು ಎಂದು ಬಯಸಿದರೆ ಫೋನ್ ಚಾರ್ಜ್ ಮಾಡುವಾಗ ಈ "40-80 ಚಾರ್ಜಿಂಗ್ ನಿಯಮ"ವನ್ನು ಅನುಸರಿಸಲು ಪ್ರಯತ್ನಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.