Flipkart Republic Day Sale: ಐಫೋನ್ 15 ಸೇರಿದಂತೆ ಈ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್

Flipkart Republic Day Sale: ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ದ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024ಅನ್ನು ಇದೇ ಜನವರಿ 14 ರಿಂದ ಪ್ರಾರಂಭಿಸಲಿದೆ. ಈ ಸೇಲ್ ಜನವರಿ 19 ರವರೆಗೂ ಇರಲಿದ್ದು, ಈ ಮಾರಾಟದಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ. 

Written by - Yashaswini V | Last Updated : Jan 10, 2024, 10:03 AM IST
  • ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ Apple ನ ಎಲ್ಲಾ iPhone 15, 14, 13, 12 ಮೇಲೆ ಭಾರೀ ರಿಯಾಯಿತಿ
  • ಇದಲ್ಲದೆ, Google Pixel 7a, Samsung Galaxy S21 FE 5G, Motorola Edge 40 Neo ಸೇರಿದಂತೆ ಹಲವು ಫೋನ್‌ಗಳಲ್ಲಿಯೂ ಸಿಗುತ್ತಿದೆ ಬಂಪರ್ ಡಿಸ್ಕೌಂಟ್
Flipkart Republic Day Sale: ಐಫೋನ್ 15 ಸೇರಿದಂತೆ ಈ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್  title=

Flipkart Republic Day Sale: ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್ ಜನವರಿ 14 ರಿಂದ ಪ್ರಾರಂಭವಾಗಲಿದೆ. ಕಂಪನಿಯು ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಈ ಮಾರಾಟದ ಒಂದು ಝಲಕ್ ತೋರಿಸಿದ್ದು ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ಮಾರಾಟದಲ್ಲಿ ಕಡಿಮೆ ಬೆಳೆಯಲ್ಲಿ ಲಭ್ಯವಿರುವ ಕೆಲವು ಫೋನ್‌ಗಳನ್ನು ಸಹ ಇದರಲ್ಲಿ ಉಲ್ಲೇಖಿಸಿದೆ. 

ಫ್ಲಿಪ್‌ಕಾರ್ಟ್‌ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಜನವರಿ 14 ರಿಂದ ಪ್ರಾರಂಭಿಸಲಿದೆ.  ಪ್ರತಿ ಬಾರಿಯಂತೆ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಒಂದು ದಿನ ಮುಂಚಿತವಾಗಿ ಈ ಮಾರಾಟದ ಪ್ರಯೋಜನವನ್ನು ಪಡೆಯಬಹುದಾಗಿ. ಈ ಸೇಲ್ ಜನವರಿ 19 ರವರೆಗೂ ಮುಂದುವರೆಯಲಿದ್ದು, ಇಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ. 

ಇದನ್ನೂ ಓದಿ- Republic Day Sale 2024: ಶೀಘ್ರದಲ್ಲೇ ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ರೂ.50,000 ಡಿಸ್ಕೌಂಟ್, ಎಲ್ಲಿ ತಿಳಿಯಲು ಸುದ್ದಿ ಓದಿ!

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್: ಈ ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್: 
ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ Apple ನ ಎಲ್ಲಾ iPhone 15, 14, 13, 12 ಮೇಲೆ ಭಾರೀ ರಿಯಾಯಿತಿ ಲಭ್ಯವಾಗಲಿದೆ. ಇದಲ್ಲದೆ, Google Pixel 7a, Samsung Galaxy S21 FE 5G, Motorola Edge 40 Neo, Samsung Galaxy S22, Pixel 8, Vivo T2 Pro, Oppo Reno 10 Pro, Vivo T2x, Poco X5, Realme 11, Redmi 12, Samsung Galaxy F34 ಮತ್ತು Many4 ಫೋನ್‌ಗಳನ್ನು ಸಹ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶವಿದೆ. 

ಆದಾಗ್ಯೂ, ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿರುತ್ತದೆ ಎಂಬ ಬಗ್ಗೆ ಫ್ಲಿಪ್‌ಕಾರ್ಟ್ ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ  ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 

ಇದನ್ನೂ ಓದಿ- ಈ ಪ್ಲಾನ್‌ ಒಬ್ಬರೆ ರಿಚಾರ್ಜ್‌ ಮಾಡಿದ್ರೆ, 3 ಜನ ಇದರ ಲಾಭ ಪಡಿಬಹುದು..! ಉಚಿತ ಕರೆ, ಡೇಟಾ

ಐಫೋನ್ 15 ಖರೀದಿಸುವವರಿಗೆ ಜಾಕ್ಪಾಟ್: 
ಗಮನಾರ್ಹವಾಗಿ ಐಫೋನ್ 15 ಫೋನ್‌ಗಳು ಈಗಾಗಲೇ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.  iPhone 15 128GB ಸ್ಟೋರೇಜ್ ಮಾದರಿ ಅನ್ನು ಆರಂಭದಲ್ಲಿ ಭಾರತದಲ್ಲಿ 79,900 ರೂ. ಗಳಿಗೆ ಬಿಡುಗಡೆ ಮಾಡಲಾಯಿತು. ಆದರೆ, ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಗ್ರಾಹಕರಿಗೆ  6,901 ರೂ.ಗಳ ರಿಯಾಯಿತಿಯೊಂದಿಗೆ 72,999ರೂ.ಗಳಿಗೆ ಲಭ್ಯವಿದೆ. ಇದೀಗ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಐಫೋನ್ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ಘೋಷಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News