ಚಳಿಗಾಲದಲ್ಲಿ ಫ್ರಿಜ್‌ನ ತಾಪಮಾನ ಇಷ್ಟೇ ಇರಬೇಕು! 90 ಶೇ. ದಷ್ಟು ಜನರಿಗೆ ಗೊತ್ತಿಲ್ಲದ ಮಾಹಿತಿ ಇದು !
ಒಂದು ವೇಳೆ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ಬೆಂಗಳೂರು : ಚಳಿಗಾಲದಲ್ಲಿ ಫ್ರಿಜ್ ಸೆಟ್ಟಿಂಗ್ ಗಳನ್ನು ಬದಲಾಯಿಸಬೇಕಾಗುತ್ತದೆ. ಚಳಿಗಾಲದಲ್ಲಿ ಹೊರಗಿನ ಉಷ್ಣತೆಯೂ ತಣ್ಣಗಿರುವ ಕಾರಣ ಫ್ರಿಡ್ಜ್‌ನ ತಾಪಮಾನವನ್ನು ಬೇಸಿಗೆಯ ತಾಪಮಾನದಲ್ಲಿ ಇಡಬಾರದು. ಒಂದು ವೇಳೆ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ತಾಪಮಾನವನ್ನು ಹೊಂದಿಸಿ :
ಚಳಿಗಾಲದಲ್ಲಿ ತಾಪಮಾನವು ಕಡಿಮೆಯಾಗಿಯೇ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ಫ್ರಿಜ್ ತಾಪಮಾನವನ್ನು ಹೆಚ್ಚಿಸದಿದ್ದರೆ, ಫ್ರಿಜ್ ನಲ್ಲಿ ಇಟ್ಟಿರುವ ವಸ್ತುಗಳು ಫ್ರೀಜ್ ಆಗಬಹುದು. ಕೆಲವೊಮ್ಮೆ ಹಾಳಾಗಲೂಬಹುದು. ಈ ಸಮಸ್ಯೆಯನ್ನು ತಪ್ಪಿಸಲು ಚಳಿಗಾಲದಲ್ಲಿ ಫ್ರಿಡ್ಜ್ ನ ಉಷ್ಣತೆಯನ್ನು ಕೆಲವು ಡಿಗ್ರಿಗಳಷ್ಟು ಹೆಚ್ಚಿಸಬೇಕಾಗುತ್ತದೆ.
ಇದನ್ನೂ ಓದಿ : BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..!
ಡಿ-ಫ್ರಾಸ್ಟ್ :
ಫ್ರಿಜ್ ಅನ್ನು ಪದೇ ಪದೇ ಡಿಫ್ರಾಸ್ಟ್ ಮಾಡಬೇಕು. ಡಿ-ಫ್ರಾಸ್ಟ್ ಮಾಡದಿದ್ದರೆ, ಅತಿಯಾದ ಮಂಜುಗಡ್ಡೆಯು ಒಳಗೆ ನಿರ್ಮಾಣವಾಗುತ್ತದೆ. ಇದರಿಂದಾಗಿ ಫ್ರಿಡ್ಜ್‌ನ ಉಷ್ಣತೆಯು ಕಡಿಮೆಯಾಗಿ ಒಳಗಿನ ಆಹಾರವು ಬೇಗನೆ ಕೆಡುತ್ತದೆ ಮತ್ತು ಫ್ರಿಜ್‌ನ ಕಂಪ್ರೆಸರ್ ಸಹ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಕಾರಣಗಳಿಂದಾಗಿ ಫ್ರಿಜ್ ಬೇಗನೇ ಹಾಳಾಗುತ್ತದೆ. ಮಂಜುಗಡ್ಡೆಯ ಶೇಖರಣೆಯಿಂದಾಗಿ ಫ್ರಿಡ್ಜ್ ಬಾಗಿಲು ತೆರೆಯಲು ಮತ್ತು ಮುಚ್ಚಲು ಕಷ್ಟವಾಗುತ್ತದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ರೆಫ್ರಿಜರೇಟರ್‌ಗಳು 1 ರಿಂದ 5 ರವರೆಗಿನ ಸಂಖ್ಯೆಯನ್ನು ಹೊಂದಿವೆ. ಹೆಚ್ಚಿನವರು ಫ್ರಿಜ್ ತಾಪಮಾನವನ್ನು ಕಡಿಮೆ ಸಂಖ್ಯೆಯಲ್ಲಿ ಇಟ್ಟಿರುತ್ತಾರೆ.ಇದರಿಂದ ಫ್ರಿಡ್ಜ್‌ನಲ್ಲಿರುವ ವಸ್ತುಗಳು ಹಾಳಾಗಬಹುದು.ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಮಧ್ಯಮ ಅಂದರೆ 3 ರಿಂದ 4 ರವರೆಗೆ ಇಡುವುದು ಸೂಕ್ತವಾಗಿದೆ. ಆದರೆ ಚಳಿಗಾಲದಲ್ಲಿ ಫ್ರಿಜ್ ಅನ್ನು ನಂಬರ್ 1 ನಲ್ಲಿ ಇರಿಸಿದರೆ ಸಾಕಾಗುತ್ತದೆ.
ಇದನ್ನೂ ಓದಿ : ಫೋನ್ ಚಾರ್ಜ್ ಮಾಡುವುದಕ್ಕೆ ವಿದ್ಯುತ್ ಬೇಕಿಲ್ಲ, ಬಿಸಿಲು ಸಾಕು !ಮಾರುಕಟ್ಟೆಗೆ ಬಂದಿದೆ ಹೊಸ ಡಿವೈಸ್
ತರಕಾರಿ ಚೇಂಬರ್ :
ನಿಮ್ಮ ಫ್ರಿಡ್ಜ್‌ನಲ್ಲಿ ತರಕಾರಿ ಚೇಂಬರ್ ಇದ್ದರೆ, ಚಿಂತೆ ಮಾಡಬೇಕಾಗಿಲ್ಲ. ವೆಜಿಟೇಬಲ್ ಚೇಂಬರ್ ತಾಪಮಾನವು ವಿಭಿನ್ನವಾಗಿರುತ್ತದೆ. ಈ ಕಾರಣದಿಂದಾಗಿ, ತರಕಾರಿಗಳು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ.ಚಳಿಗಾಲದಲ್ಲಿ, ತರಕಾರಿ ಚೇಂಬರ್ ತಾಪಮಾನವನ್ನು 5 ರಿಂದ 7 ಡಿಗ್ರಿಗಳ ನಡುವೆ ಇಡಬೇಕು. ಹೀಗಾದರೆ 10 ರಿಂದ 15 ದಿನಗಳವರೆಗೆ ತರಕಾರಿಗಳನ್ನು ತಾಜಾವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.