ಐಫೋನ್ SE 4 ನ ಡಮ್ಮಿ ಯೂನಿಟ್ ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈ ಫೋನ್ ಮೇಲ್ನೋಟಕ್ಕೆ ಐಫೋನ್ 14 ರಂತೆಯೇ ಕಾಣಿಸಬಹುದು. ಆದರೆ, iPhone SE 4 ಹಳೆಯ ವಿನ್ಯಾಸವನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಇದು ಹೊಸ ವಿನ್ಯಾಸವನ್ನು ಹೊಂದಿದ್ದು ಫ್ಲಾಟ್ ಅಂಚುಗಳನ್ನು ಹೊಂದಿರುತ್ತದೆ ಮತ್ತು Face ID ಸಿಸ್ಟಮ್‌ಗಾಗಿ ಸಣ್ಣ ನಾಚ್ ನೀಡಲಾಗಿದೆ.
ಡಮ್ಮಿ ಯೂನಿಟ್ ನ ಗಾತ್ರವು iPhone SE (146.7mm x 71.5mm x 7.8mm) ಯಂತೆಯೇ ಇರುತ್ತದೆ ಎಂದು ಹೇಳಲಾಗುತ್ತಿದೆ.ಐಫೋನ್ SE 4 ನ ಗಾತ್ರವೂ ಒಂದೇ ಆಗಿರುತ್ತದೆ ಎನ್ನಲಾಗಿದೆ.ಆದರೆ ಐಫೋನ್ 14 ಪ್ಲಸ್ (6.7-ಇಂಚಿನ ಡಿಸ್ಪ್ಲೇ) ಗಾತ್ರದ ಐಫೋನ್ ಎಸ್ಇ 4 ಪ್ಲಸ್ ಸಹ ಬರಬಹುದು ಎಂದು ತೋರಿಸುವ ಡಮ್ಮಿ ಯುನಿಟ್ ಗಳು ಕೂಡ ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : 2024ರ Top-10 ಡಿಜಿಟಲ್ ಸ್ಟಾರ್ಸ್ ಪಟ್ಟಿ ಬಿಡುಗಡೆ ಮಾಡಿದ Forbes
ಐಫೋನ್ ಎಸ್ಇ 4 ಪ್ಲಸ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಇದು ಬಜೆಟ್ ಸ್ನೇಹಿ ಫೋನ್ ಆಗಿರಲಿದೆ ಎನ್ನುವ ಕಾರಣ ಗ್ರ್ಹಾಕರು ಈ ಫೋನ್ ಬಿಡುಗಡೆಗೆ ಉತ್ಸಾಹದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಲಭ್ಯವಿರುವ ಎಲ್ಲಾ ಮಾಹಿತಿಯು ಲೀಕ್ ಆಗಿರುವ ಮಾಹಿತಿಯೇ ಹೊರತು ಆಪಲ್ ಇದನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.
iPhone SE 4 ವಿನ್ಯಾಸವು iPhone 14 ನಂತೆ ಇರುವ ಸಾಧ್ಯತೆಯಿದೆ. ಆದರೆ iPhone SE 4 Plus ಯಾವ್ಗಾ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ಕೂಡಾ ಸ್ಪಷ್ಟ ಮಾಹಿತಿ ಇಲ್ಲ. ಮುಂಬರುವ ಉತ್ಪನ್ನಗಳ ಬಗ್ಗೆ ಆಪಲ್ ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ.ಆದ್ದರಿಂದ ಅಭಿಮಾನಿಗಳು ಐಫೋನ್ SE 4 ಹೇಗೆ ಕಾಣುತ್ತದೆ ಮತ್ತು ಅದು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಅಧಿಕೃತ ಪ್ರಕಟಣೆಗಾಗಿ ಕಾಯಬೇಕಾಗಿದೆ.
ಇದನ್ನೂ ಓದಿ : ಮಂಗಳನ ಮೇಲ್ಮೈಯಲ್ಲಿ ಮಾನವನ ಮುಖ ? ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.