Rocketry: ರಾಕೆಟ್ ಕ್ಷೇತ್ರದಲ್ಲಿ ಭಾರತದ ಮಹತ್ವದ ಹೆಜ್ಜೆ, ಕ್ರಯೋಜೆನಿಕ್ ಎಂಜಿನ್‌ನ ಸಮಗ್ರ ಸೌಲಭ್ಯ ರೆಡಿ
Cryogenic Engine Facility Inaugurated: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಂಗಳೂರಿನಲ್ಲಿ ಆರ್ಟ್ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್) ಉದ್ಘಾಟಿಸಲಿದ್ದಾರೆ.
Cryogenic Engine Facility: ಭಾರತದಲ್ಲಿ ತಯಾರಾಗಬೇಕಿದ್ದ ಒಂದು ಕ್ರಯೋಜೆನಿಕ್ ಇಂಜಿನ್ ಗಾಗಿ ಅಮೆರಿಕ ದೀರ್ಘಕಾಲದಿಂದ ಅಡೆತಡೆಗಳನ್ನು ಉಂಟುಮಾಡುತ್ತಲೇ ಇತ್ತು. ಆದರೆ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಆ ಎಂಜಿನ್‌ನ ಸಂಪೂರ್ಣ ಉತ್ಪಾದನಾ ಸೌಲಭ್ಯವನ್ನೇ ದೇಶಕ್ಕೆ ಸಮರ್ಪಿಸಲಿದ್ದಾರೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬಾಹ್ಯಾಕಾಶಕ್ಕೆ ಹೋಗುವ ರಾಕೆಟ್‌ಗಳಿಗೆ ಹೆಚ್ಚು ಅಗತ್ಯವಿರುವ ಕ್ರಯೋಜೆನಿಕ್ ಎಂಜಿನ್‌ಗಳ ಸಮಗ್ರ ಸೌಲಭ್ಯವನ್ನು ಭಾರತ ಸಿದ್ಧಪಡಿಸಿದೆ, ಅಲ್ಲಿ ಈ ಎಂಜಿನ್ ಗಳ ತಯಾರಿಕೆಯಿಂದ ಹಿಡಿದು ಪರೀಕ್ಷೆಯವರೆಗೆ ಎಲ್ಲಾ ಕೆಲಸಗಳು ನಡೆಯಲಿವೆ.
ಎಚ್‌ಎಎಲ್ ಪ್ರಕಾರ, ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರಿನಲ್ಲಿ ಈ ಅತ್ಯಾಧುನಿಕ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್) ಉದ್ಘಾಟಿಸಲಿದ್ದಾರೆ. ಈ ಸೌಲಭ್ಯದ ನಿರ್ಮಾಣದೊಂದಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಎಲ್ಲಾ ರಾಕೆಟ್ ಎಂಜಿನ್‌ಗಳು ಒಂದೇ ಸೂರಿನಡಿ ನಿರ್ಮಾಣಗೊಳ್ಳಲಿವೆ.
ರಾಕೆಟ್ ಇಂಜಿನ್‌ಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲು ಈ ಸೌಲಭ್ಯದ ರಚನೆಯು ಒಂದು ಮಹತ್ವದ ಹೆಜ್ಜೆಯಾಗಿದೆ. HAL ಪ್ರಕಾರ, ICMF ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಭಾರತಕ್ಕಾಗಿ ಕ್ರಯೋಜೆನಿಕ್ (CE-20) ಮತ್ತು ಸೆಮಿ-ಕ್ರಯೋಜೆನಿಕ್ (SE2000) ಬಾಹ್ಯಾಕಾಶ ಉಡಾವಣಾ ವಾಹನಗಳನ್ನು ತಯಾರಿಸಲು 70 ಕ್ಕೂ ಹೆಚ್ಚು ಹೈಟೆಕ್ ಉಪಕರಣಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ನಿರ್ಮಿಸಲಾಗಿದೆ.
ಕ್ರಯೋಜನಿಕ್ ಇಂಜಿನ್ ಗಳನ್ನು ಎಲ್ಲಿ ಬಳಸಲಾಗುತ್ತದೆ?
ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ಉಡಾವಣಾ ವಾಹನಗಳಲ್ಲಿ ಕ್ರಯೋಜೆನಿಕ್ ಎಂಜಿನ್‌ಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ ಮತ್ತು ಇದುವರೆಗೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜಪಾನ್‌ನಂತಹ ಕೆಲ ಆಯ್ದ ದೇಶಗಳು ಮಾತ್ರ ಇದನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಇದೀಗ ಭಾರತವೂ ಕೂಡ ಈ ವರ್ಗಕ್ಕೆ ಶಾಮೀಲಾಗಿದೆ, ಆದರೆ ಭಾರತದಲ್ಲಿ ಕ್ರಯೋಜೆನಿಕ್ ಇಂಜಿನ್‌ಗಳನ್ನು ತಯಾರಿಸಲು ಅಮೆರಿಕ ಸಾಕಷ್ಟು ಅಡೆತಡೆಗಳನ್ನು ಉಂಟುಮಾಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Tata Nexon EVಗೆ ಪೈಪೋಟಿ ನೀಡಲು ಬರ್ತಿದೆ ಹೊಸ ಎಲೆಕ್ಟ್ರಿಕ್ ಕಾರು: ಯಾವಾಗ ಗೊತ್ತಾ?
ಅಷ್ಟೇ ಯಾಕೆ ಅಮೇರಿಕಾ ರಷ್ಯಾಗೂ ಕೂಡ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಒದಗಿಸಲು ನಿರಾಕರಿಸಿದ ಒಂದು ಕಾಲವಿತ್ತು. ಹೀಗಾಗಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಸಾಕಷ್ಟು ಅಡಚಣೆ ಎದುರಾಗುತ್ತಿದ್ದವು. 90 ರ ದಶಕದಲ್ಲಿ, ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ಅವರು ಈ ಕ್ರಯೋಜೆನಿಕ್ ಎಂಜಿನ್ ವಿಭಾಗದ ಮುಖ್ಯಸ್ಥರಾಗಿದ್ದರು, ಆದರೆ, ಪಿತೂರಿ ನಡೆಸಿ ಅವರನ್ನು ಜೈಲಿಗಟ್ಟಲಾಗಿತ್ತು.
ಇದನ್ನೂ ಓದಿ-15,000 ರೂ.ಗಿಂತ ಕಡಿಮೆ ಬೆಲೆಗೆ iPhone 14 ಖರೀದಿಸಿ! ಆಫರ್‌ನ ಮಾಹಿತಿ ಇಲ್ಲಿದೆ ನೋಡಿ
ಕ್ರಯೋಜೆನಿಕ್ ಎಂಜಿನ್ ಅನ್ನು ಮೊದಲ ಬಾರಿಗೆ ಯಾವಾಗ ಬಳಸಲಾಯಿತು
ಇಸ್ರೋ 2014 ರಲ್ಲಿ GSLV-D5 ಉಪಗ್ರಹವನ್ನು ಉಡಾವಣೆ ಮಾಡಿದಾಗ ಮೊದಲ ಬಾರಿಗೆ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸಿತ್ತು. ಈ ಎಂಜಿನ್ ಅನ್ನು ಖಾಸಗಿ ಕಂಪನಿಗಳ ಸಹಾಯದಿಂದ ಸಿದ್ಧಪಡಿಸಲಾಗಿತ್ತು. ಬಾಹ್ಯಾಕಾಶದಲ್ಲಿ ಭವಿಷ್ಯದ ಸಂಶೋಧನೆಗೆ ಕ್ರಯೋಜೆನಿಕ್ ತಂತ್ರಜ್ಞಾನ ಬಹಳ ಮುಖ್ಯವಾಗಿದೆ. ಕ್ರಯೋಜೆನಿಕ್ ಇಂಜಿನ್ ಗಳು ಬರುವ ಮೊದಲು HAL, ISRO ಗಾಗಿ ಲಿಕ್ವಿಡ್ ಪ್ರೊಪೆಲ್ಲಂಟ್ ಟ್ಯಾಂಕ್‌ಗಳನ್ನು ಮತ್ತು PSLV, GSLV ಇತ್ಯಾದಿಗಳಿಗೆ ಉಡಾವಣಾ ವಾಹನಗಳ ರಚನೆಯನ್ನು ಸಹ ಸಿದ್ಧಪಡಿಸಿತ್ತು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.