ನವದೆಹಲಿ: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಗಳು ನಡೆಯುತ್ತಿವೆ. ಇಲ್ಲಿ ನೀವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಸೇರಿದಂತೆ ಅನೇಕ ಉತ್ಪನ್ನಗಳನ್ನು ಖರೀದಿಸಬಹುದು. ಈ ಮಾರಾಟದ ಸಮಯದಲ್ಲಿ ಐಫೋನ್ 13 ಅನ್ನು ಕಡಿಮೆ ಬೆಲೆಗೆ ಮನೆಗೆ ಕೊಂಡೊಯ್ಯಬಹುದು. ಆದರೆ ಇತ್ತೀಚಿನ ಸರಣಿ iPhone 14 ಖರೀದಿ ಮೇಲೆ ಯಾವುದೇ ರಿಯಾಯಿತಿ ಸಿಗುತ್ತಿಲ್ಲ. ನೀವು ಆ್ಯಪಲ್ ಐಫೋನ್ 14ಅನ್ನು ಕಡಿಮೆ ಬೆಲೆಗೆ ಖರೀದಿಸಬಯಸಿದ್ರೆ ಇಲ್ಲಿದೆ ಉತ್ತಮ ಅವಕಾಶ. iPhone 14ನಲ್ಲಿ ಆಫರ್ ಎಲ್ಲಿ ಲಭ್ಯವಿದೆ ಮತ್ತು ಎಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಲ್ಲಿ iPhone 14 ಖರೀದಿಸಿ
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಹೊರತುಪಡಿಸಿ ನೀವು ಐಫೋನ್ 14ಅನ್ನು ಎಲ್ಲಿ ಖರೀದಿಸಬಹುದು? ಈ ಪ್ರಶ್ನೆಗೆ ಉತ್ತರವೇ ಆ್ಯಪಲ್ನ ಅಧಿಕೃತ ಭಾರತೀಯ ಇ-ಸ್ಟೋರ್, ಆ್ಯಪಲ್ ಇಂಡಿಯಾ ಸ್ಟೋರ್. ಈ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ವಿಶೇಷ ದೀಪಾವಳಿ ಮಾರಾಟ ನಡೆಯುತ್ತಿದೆ. ಇಲ್ಲಿ ನಿಮಗೆ ಐಫೋನ್ 14ನಲ್ಲಿ ಖರೀದಿ ಮೇಲೆ ವಿಶೇಷ ರಿಯಾಯಿತಿ ಸಿಗುತ್ತದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಅರ್ಧದಷ್ಟು ಬೆಲೆಗೆ ಐಫೋನ್ 12 ಖರೀದಿಸುವ ಸುವರ್ಣಾವಕಾಶ
ಅತ್ಯಂತ ಅಗ್ಗವಾಗಿ ಐಫೋನ್ 14 ಖರೀದಿಸಿ
ನೀವು Apple ಇಂಡಿಯಾ ಸ್ಟೋರ್ನಿಂದ iPhone 14ನ ಮೂಲ ರೂಪಾಂತರವನ್ನು 79,900 ರೂ. ಬದಲಿಗೆ 72,900 ರೂ.ಗಳಿಗೆ ಖರೀದಿಸಬಹುದು. ಈ ಆಫರ್ನ ಪ್ರಯೋಜನ ಪಡೆಯಲು ನೀವು ಎಚ್ಡಿಎಫ್ಸಿ ಬ್ಯಾಂಕ್ ಅಥವಾ ಅಮೆರಿಕನ್ ಎಕ್ಸ್ಪ್ರೆಸ್ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬೇಕು. ಅಷ್ಟೇ ಅಲ್ಲ ಇಲ್ಲಿ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದ್ದು, ಇದರಡಿ ನಿಮ್ಮ ಹಳೆಯ ಫೋನ್ ಗುಣಮಟ್ಟಕ್ಕೆ ಅನುಗುಣವಾಗಿ 2,200 ರೂ.ನಿಂದ 58,730 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಪೂರ್ಣ ಪ್ರಯೋಜನ ಪಡೆದ ನಂತರ iPhone 14ನ ಬೆಲೆ 72,900 ರೂ.ಗಳಿಂದ 14,170 ರೂ.ಗೆ ಇಳಿಯುತ್ತದೆ.
ಐಫೋನ್ 14ರ ವಿಶೇಷಣಗಳು
128GB ಸ್ಟೋರೇಜ್ ಹೊಂದಿರುವ ಮಾದರಿಯಲ್ಲಿ ನೀವು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ, A15 ಬಯೋನಿಕ್ ಚಿಪ್ ಪ್ರೊಸೆಸರ್ ಮತ್ತು 5G ನೆಟ್ವರ್ಕ್ಗೆ ಬೆಂಬಲ ಪಡೆಯುತ್ತೀರಿ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್ಫೋನ್ನಲ್ಲಿ 12-12MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 12MP ಫ್ರಂಟ್ ಕ್ಯಾಮೆರಾ ಇದೆ. ಈ ಡ್ಯುಯಲ್ ಸಿಮ್ ಸ್ಮಾರ್ಟ್ಫೋನ್ನ ಸ್ಟೋರೇಜ್ಅನ್ನು ವಿಸ್ತರಿಸಲಾಗುವುದಿಲ್ಲ, ಆಡಿಯೊ ಜಾಕ್ ಇಲ್ಲ ಮತ್ತು ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗುತ್ತಿಲ್ಲ. ಚಾರ್ಜ್ ಮಾಡಲು ಈ ಫೋನ್ ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ಲೈಟ್ನಿಂಗ್ ಕೇಬಲ್ನೊಂದಿಗೆ ಬರುತ್ತದೆ.
ಇದನ್ನೂ ಓದಿ: ಕೇವಲ 500 ರೂ. ನಲ್ಲಿ ನಿಮ್ಮ ಸ್ಮಾರ್ಟ್ಫೋನ್ನ್ನು iPhone 14 Pro Max ಗೆ ಬದಲಿಸಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.