Safest Car In India : ಇತ್ತೀಚಿನ ದಿನಗಳಲ್ಲಿ, ಕಾರನ್ನು ಖರೀದಿಸುವಾಗ, ಜನರು ಅದರ ಸುರಕ್ಷತೆಯ ರೇಟಿಂಗ್‌ನ ಬಗ್ಗೆಯೂ ಗಮನ ಹರಿಸುತ್ತಾರೆ. ವಾಸ್ತವವಾಗಿ, ಜನರು ಕಾರಿನ ಸುರಕ್ಷತೆಯ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಕಾರು ಖರೀದಿಸುವಾಗ, ಕಾರು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಪರಿಗಣಿಸುತ್ತಾರೆ. ನೀವೂ ಸುರಕ್ಷಿತ ಕಾರನ್ನು ಖರೀದಿಸಲು ಎದುರು ನೋಡುತ್ತಿದ್ದರೆ, ದೇಶದ ಟಾಪ್-10 ಸುರಕ್ಷಿತ ಕಾರುಗಳ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ವೋಕ್ಸ್‌ವ್ಯಾಗನ್ ವರ್ಟಸ್: ಟೆಸ್ಟಿಂಗ್ ಏಜೆನ್ಸಿ ಗ್ಲೋಬಲ್ ಎನ್‌ಸಿಎಪಿ  ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ನೀಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 11.47 ಲಕ್ಷ ರೂ.


ಇದನ್ನೂ ಓದಿ: Google Latest Update: ಮೇ 31ರ ನಂತರ ಬ್ಯಾನ್ ಆಗಲಿವೆ ಈ ಆ್ಯಪ್‌ಗಳು


ಸ್ಕೋಡಾ ಸ್ಲಾವಿಯಾ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಈ ಕಾರಿಗೆ ಗ್ಲೋಬಲ್ ಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ನೀಡಿದೆ. ಇದು ಪ್ರೀಮಿಯಂ ಮಧ್ಯಮ ಗಾತ್ರದ ಸೆಡಾನ್ ಕಾರು. ಇದರ ಆರಂಭಿಕ ಬೆಲೆ 11.39 ಲಕ್ಷ ರೂ.


ವೋಕ್ಸ್‌ವ್ಯಾಗನ್ ಟೈಗನ್: ಗ್ಲೋಬಲ್ ಎನ್‌ಸಿಎಪಿ ಇದಕ್ಕೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಇದರ ಆರಂಭಿಕ ಬೆಲೆ ರೂ 11.61  ಲಕ್ಷ  ರೂಪಾಯಿ. 


ಸ್ಕೋಡಾ ಕುಶಾಕ್: ಇದು ಕೂಡಾ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಇದರ ಆರಂಭಿಕ ಬೆಲೆ ರೂ 11.59 ಲಕ್ಷ.  


ಇದನ್ನೂ ಓದಿ: ಜಗತ್ತಿನಲ್ಲಿ ಮನುಷ್ಯರಿಗಿಂತ ಹೆಚ್ಚು ಮೊಬೈಲ್ ಫೋನ್.. ಭೂಮಿ ಮೇಲಿರುವ ಸ್ಮಾರ್ಟ್‌ಫೋನ್‌ಗಳೆಷ್ಟು ಗೊತ್ತಾ?


ಮಹೀಂದ್ರ ಸ್ಕಾರ್ಪಿಯೊ-ಎನ್: ಇದು ಮಹೀಂದ್ರಾದ ಪ್ರಬಲ ಮತ್ತು ಜನಪ್ರಿಯ ಎಸ್‌ಯುವಿ ಆಗಿದೆ.  ಈ ಕಾರಿಗೆ ಗ್ಲೋಬಲ್ NCAP ನಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಸಿಕ್ಕಿದೆ.  ಇದರ ಬೆಲೆ 12.74 ಲಕ್ಷದಿಂದ  ಪ್ರಾರಂಭವಾಗುತ್ತದೆ.


ಮಹೀಂದ್ರಾ XUV300 ಮತ್ತು Mahindra XUV700 ಸಹ ಟಾಪ್-10 ಕಾರುಗಳಲ್ಲಿ ಸೇರಿವೆ. ಇವೆರಡೂ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿವೆ. ಇವುಗಳ ಹೊರತಾಗಿ, ಟಾಪ್-10 ಸುರಕ್ಷಿತ ಕಾರುಗಳಲ್ಲಿ ಮೂರು ಟಾಟಾ ಕಾರುಗಳಿವೆ. ಟಾಟಾ ಪಂಚ್, ಟಾಟಾ ಆಲ್ಟ್ರೋಜ್ ಮತ್ತು ಟಾಟಾ ನೆಕ್ಸನ್. ಈ ಮೂರೂ ಕಾರುಗಳು  ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿವೆ. ಅವುಗಳಲ್ಲಿ ಪಂಚ್ ಅತ್ಯಂತ ಅಗ್ಗದ ಕಾರು. ಇದರ ಬೆಲೆ ರೂ.6 ಲಕ್ಷದಿಂದ ಪ್ರಾರಂಭವಾಗುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.