ಬಹು ನಿರೀಕ್ಷೆಯ 7 ಸೀಟರ್ ಬಿಡುಗಡೆ ಮಾಡಿದ ಕಿಯಾ ! ಅದ್ಬುತ ವೈಶಿಷ್ಟ್ಯಗಳೊಂದಿಗೆ ರೋಡಿಗಿಳಿದಿದೆ ಕಾರು !

Kia Carens New Variant: ಕಿಯಾ ಇಂಡಿಯಾ ಹೊಸ  ಲಕ್ಸುರಿ (ಒ) ರೂಪಾಂತರವನ್ನು 7-ಸೀಟ್ ಕಾನ್ಫಿಗರೇಶನ್‌ನಲ್ಲಿ ಪರಿಚಯಿಸಿದೆ. ಈ ಕಾರು  ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. 

Written by - Ranjitha R K | Last Updated : Apr 6, 2023, 12:29 PM IST
  • ಕಿಯಾ ಇಂಡಿಯಾ ಹೊಸ ಲಕ್ಸುರಿ (ಒ) ರೂಪಾಂತರ ಬಿಡುಗಡೆ
  • ಹೊಸ ವೈಶಿಷ್ಟ್ಯಗಳೊಂದಿಗೆ ರೋಡಿಗಿಳಿದಿದೆ ಈ ಕಾರು
  • ಬೆಲೆ ಎಷ್ಟು ಗೊತ್ತಾ ?
ಬಹು ನಿರೀಕ್ಷೆಯ 7 ಸೀಟರ್ ಬಿಡುಗಡೆ ಮಾಡಿದ ಕಿಯಾ ! ಅದ್ಬುತ ವೈಶಿಷ್ಟ್ಯಗಳೊಂದಿಗೆ ರೋಡಿಗಿಳಿದಿದೆ ಕಾರು ! title=

Kia Carens New Variant : ಕಿಯಾ ಇಂಡಿಯಾ ಹೊಸ  ಲಕ್ಸುರಿ (ಒ) ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ 17 ಲಕ್ಷ (ಎಕ್ಸ್ ಶೋ ರೂಂ). ಹೊಸ ರೂಪಾಂತರವನ್ನು 7-ಸೀಟ್ ಕಾನ್ಫಿಗರೇಶನ್‌ನಲ್ಲಿ ಪರಿಚಯಿಸಲಾಗಿದೆ. ಇದ ನ್ನು ಲಕ್ಸುರಿ ಟ್ರಿಮ್‌ಗಿಂತ ಮೇಲೆ ಮತ್ತು ಐಷಾರಾಮಿ + ಟ್ರಿಮ್‌ಗಿಂತ ಕೆಳಗೆ ಲೈನ್ ಅಪ್ ಮಾಡಲಾಗಿದೆ. ಇನ್ನು ಈ ಕಾರಿನ  ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಹೊಸ ಕಿಯಾ ಕ್ಯಾರೆನ್ಸ್ ಲಕ್ಸುರಿ (O) ರೂಪಾಂತರವು ಮಲ್ಟಿ ಡ್ರೈವ್ ಮೋಡ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದಲ್ಲದೇ, ಲಕ್ಸುರಿ ಟ್ರಿಮ್‌ನಲ್ಲಿ ಕಂಡುಬರುವ ಎಲ್ಲಾ ವೈಶಿಷ್ಟ್ಯಗಳು ಇದರಲ್ಲಿ ಬರುತ್ತವೆ.

ಕಿಯಾ ಕ್ಯಾರೆನ್ಸ್ ಲಕ್ಸುರಿ (O) ರೂಪಾಂತರವು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ  10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4.2-ಇಂಚಿನ ಕಲರ್ MID, OTಅಪ್ಡೇಟ್ ನೊಂದಿಗೆ Kia ಕನೆಕ್ಟ್ UI, ಲೆದರ್ ರ್ಯಾಪ್ದ್ ಸ್ಟೀರಿಂಗ್ ವೀಲ್, ಏರ್ ಪ್ಯೂರಿಫೈಯರ್,  ಸೆಕೆಂಡ್ ರೋಗೆ  ಸೀಟ್‌ಬ್ಯಾಕ್ ಟೇಬಲ್‌ ನೊಂದಿಗೆ ಬರುತ್ತದೆ. ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಅಂಡರ್ ಸೀಟ್ ಟ್ರೇ, ಫುಲ್ ಲೆಥೆರೆಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ಗೋ, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರಲಿವೆ. 

ಇದನ್ನೂ  ಓದಿ : ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ತಪ್ಪದೇ ಈ 5 ವಿಷಯಗಳ ಬಗ್ಗೆ ಗಮನಹರಿಸಿ

ಇದು 6 ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಮತ್ತು ಡಿಸೆಂಟ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಬ್ರೇಕ್ ಅಸಿಸ್ಟ್ ಸಿಸ್ಟಮ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಹೊಸ ಕಿಯಾ ಕ್ಯಾರೆನ್ಸ್ ಲಕ್ಸುರಿ  (O) ರೂಪಾಂತರವನ್ನು 1.5L ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5L ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. 

ಪೆಟ್ರೋಲ್ ಎಂಜಿನ್ ಘಟಕವು 253Nm ಜೊತೆಗೆ 160bhp ಅನ್ನು ಉತ್ಪಾದಿಸುತ್ತದೆ ಆದರೆ ಡೀಸೆಲ್ ಎಂಜಿನ್ ಘಟಕವು 115bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6- ಸ್ಪೀಡ್  iMT,6- ಸ್ಪೀಡ್  ಟಾರ್ಕ್ ಕನ್ವರ್ಟರ್ ಅಟೋಮ್ಯಾಟಿಕ್ ಮತ್ತು 7-ಸ್ಪೀಡ್ DCT ಅಟೋಮ್ಯಾಟಿಕ್ ಆಯ್ಕೆಯನ್ನು  ನೀಡಲಾಗಿದೆ. 

ಇದನ್ನೂ  ಓದಿ :  Jio Recharge: ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜಿಯೋ ರಿಚಾರ್ಜ್ ಯೋಜನೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News