ನವದೆಹಲಿ: Samsung New Launch 2021 - ದಕ್ಷಿಣ ಕೊರಿಯಾ ಮೂಲಕದ ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿ ಸ್ಯಾಮ್‌ಸಂಗ್ (Samsung) ತನ್ನ M ಸರಣಿಯ (Samsung M Series) ಯಶಸ್ಸನ್ನು ಮುಂದಿನ ಸುತ್ತಿಗೆ ಕೊಂಡೊಯ್ಯಲು ಸಿದ್ಧವಾಗಿದೆ. ಈ ಸಂಬಂಧ, ಕಂಪನಿಯು ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಅಲೆ ಸೃಷ್ಟಿಸಲಿದೆ.  ಸ್ಯಾಮ್‌ಸಂಗ್ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.  ಫೆಬ್ರವರಿ 2 ರಂದು (Samsung February 2021 Launch) ಕಂಪನಿಯು ಭಾರತದಲ್ಲಿ ಎಂ ಸರಣಿಯ ಹೊಸ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ 02 ಅನ್ನು ಪರಿಚಯಿಸುತ್ತಿದೆ. ಈ ಕಡಿಮೆ ಬಜೆಟ್ ಫೋನ್‌ನ ಬಿಡುಗಡೆ ನಿಖರವಾಗಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ವರದಿಗಳ ಪ್ರಕಾರ, ಇದರ ಬೆಲೆ 7 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಡಿಮೆ ಬಜೆಟ್ ನಲ್ಲಿ ಜಬರ್ದಸ್ತ್ ವೈಶಿಷ್ಟ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಅನ್ನು ಮೇರಾ ಎಂ (Mera M) ಎಂದು ಕರೆಯಲಾಗುತ್ತಿದೆ ಅಂದರೆ ನನ್ನ ಮನರಂಜನಾ ಸ್ಮಾರ್ಟ್‌ಫೋನ್ ಎಂದರ್ಥ. ಹೊಸ ಫೋನ್‌ನ ಕೆಲವು ವೈಶಿಷ್ಟ್ಯಗಳು ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ನಲ್ಲಿ ಬಹಿರಂಗಗೊಂಡಿವೆ. ಇದರಿಂದ ನೀವು ಈ ಸ್ಮಾರ್ಟ್ ಫೋನ್ ಯಾವ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ ಎಂಬುದನ್ನು ಊಹಿಸಬಹುದು. ಪಟ್ಟಿಯ ಪ್ರಕಾರ, ಈ ಮಾದರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಸ್ಮಾರ್ಟ್‌ಫೋನ್ ಇನ್ಫಿನಿಟಿ-ವಿ ದರ್ಜೆಯೊಂದಿಗೆ 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ದೇ ವೇಳೆ ಎಚ್ಡಿ + ರೆಸಲ್ಯೂಶನ್ ಅನ್ನು ಈ ಫೋನ್ ನಲ್ಲಿ ನೀಡಲಾಗುತ್ತಿದೆ. ನೀವು ಹೆಚ್ಚು ಕೂಲಂಕುಷವಾಗಿ ಈ  ಫೋನ್‌ ನ ಫೋಟೋ ನೋಡಿ ಅದನ್ನು ನೀವು ಅಂದಾಜಿಸಬಹುದು.


ಇದನ್ನು ಓದಿ- Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?


ಸೋರಿಕೆಯಾದ ವರದಿಯಿಂದ ಈ ಮಾಹಿತಿ ಬಹಿರಂಗ
ಸಾಮ್ಸಂಗ್ ಗ್ಯಾಲಕ್ಸಿ M02 (Samsung Galaxy M02) ಕುರಿತು ಸೋರಿಕೆಯಾಗಿರುವ (Tech News In Kannada) ಒಂದು ವರದಿಯ ಪ್ರಕಾರ ಈ ಸ್ಮಾರ್ಟ್ ಫೋನ್ ನಲ್ಲಿ ರಿಯರ್ ಭಾಗದಲ್ಲಿ 13 ಮೆಗಾ ಪಿಕ್ಸಲ್ ಹಾಗೂ 2 ಮೆಗಾ ಪಿಕ್ಸಲ್ ಎರಡು ಕ್ಯಾಮೆರಾಗಳಿರುವ ಸಾಧ್ಯತೆ ಇದೆ. ಸ್ಯಾಮ್ಸಂಗ್ ನ ಈ ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಡ್ರಾಗನ್ 450 ಪ್ರೋಸೆಸರ್ ಸಪೋರ್ಟ್ ಇರಲಿದೆ ಎನ್ನಲಾಗಿದೆ. ಇನ್ನೊಂದೆಡೆ ಈ ಮಾಡೆಲ್ ನಲ್ಲಿ 3 ಜಿಬಿ RAM ಹಾಗೂ 64 ಜಿಬಿ ಆಂತರಿಕ ಶೇಖರಣಾ ಸಾಮರ್ಥ ಹೊಂದಿರಲಿದೆ ಎನ್ನಲಾಗುತ್ತಿದೆ.


ಇದನ್ನು ಓದಿ- Samsung Galaxy M31s:ಇಂದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪೋನಿನ ವಿಶೇಷತೆ ಏನು ಗೊತ್ತೇ?


ಈ ಫೋನ್ ನ ಅತಿ ದೊಡ್ಡ USP! 5000 mAh ಬ್ಯಾಟರಿ ಸಾಮರ್ಥ್ಯ 
ಅಮೆಜಾನ್  ಲಿಸ್ಟಿಂಗ್ ಪ್ರಕಾರ ಈ ಗ್ಯಾಲಕ್ಸಿ (Samsung Galaxy) ಎಮ್02 ಮಾಡೆಲ್ ಫೋನ್ ನಲ್ಲಿ 5000 mAh ಬ್ಯಾಟರಿ ಇರುವುದು ಇದರ ವಿಶೇಷ USP. ಇಷ್ಟೊಂದು ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೂ ಕೂಡ ಇದರ ಬೆಲೆ 7000 ರೂ.ಗಳಿಗಿಂತ ಕಡಿಮೆಯೇ ಇರಲಿದೆ.


ಇದನ್ನು ಓದಿ-ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ S10 LITE, ಬೆಲೆ ಎಷ್ಟು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.