Samsung ಬಿಡುಗಡೆ ಮಾಡಿದೆ 4K Smart TV! ಬೆಲೆಯೂ ದುಬಾರಿಯೇನಲ್ಲ !
ಸ್ಯಾಮ್‌ಸಂಗ್ ಹೊಸ ಕ್ರಿಸ್ಟಲ್ 4K ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ.ಈ ಟಿವಿ ಎರಡು ಗಾತ್ರಗಳಲ್ಲಿ ಲಭ್ಯವಿದೆ.
ಬೆಂಗಳೂರು :ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ಹೊಸ ಕ್ರಿಸ್ಟಲ್ 4K ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ.ಈ ಟಿವಿಯ ಬೆಲೆ 41,990 ರೂ.ಗಳಿಂದ ಪ್ರಾರಂಭವಾಗುತ್ತದೆ.ಇದು ಅನೇಕ ಹೊಸ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.ಈ ವೈಶಿಷ್ಟ್ಯಗಳಲ್ಲಿ 4K ಅಪ್‌ಸ್ಕೇಲಿಂಗ್,ಸ್ಲಿಮ್ ಡಿಸೈನ್, ಉತ್ತಮ ಬಣ್ಣಗಳು,ವಾಯ್ಸ್ ಕಮಾಂಡ್, ಮತ್ತು ಕ್ರಿಸ್ಟಲ್ ಪ್ರೊಸೆಸರ್ ಸೇರಿವೆ.
2024 ಕ್ರಿಸ್ಟಲ್ 4K ಡೈನಾಮಿಕ್ ಟಿವಿ ಪ್ರಮುಖ ವೈಶಿಷ್ಟ್ಯಗಳು :
ಕ್ರಿಸ್ಟಲ್ ಪ್ರೊಸೆಸರ್ 4K ಮತ್ತು 4K ಅಪ್‌ಸ್ಕೇಲಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. 2024 ಕ್ರಿಸ್ಟಲ್ 4K ಡೈನಾಮಿಕ್ ಟಿವಿಯಲ್ಲಿನ ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಮತ್ತು ಕಾಣಿಸುತ್ತವೆ.ಡೈನಾಮಿಕ್ ಕ್ರಿಸ್ಟಲ್ ಕಲರ್ ತಂತ್ರಜ್ಞಾನದಿಂದಾಗಿ,ಬಣ್ಣಗಳು ತುಂಬಾ ನ್ಯಾಚುರಲ್ ಆಗಿ ಕಾಣಿಸುತ್ತವೆ.
ಇದನ್ನೂ ಓದಿ : ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ನೀರು ಸರಬರಾಜು, ಮೂಲಸೌಕರ್ಯ ಅಭಿವೃದ್ಧಿ 5,000 ಕೋಟಿ ಸಾಲದ ಉದ್ದೇಶ: ಸಚಿವ ಎಂಬಿ ಪಾಟೀಲ
ಸಿಗುವುದು ಈ ಎಲ್ಲಾ ವೈಶಿಷ್ಟ್ಯ :
ಈ ಟಿವಿ ಬಿಕ್ಸ್ಬಿ ಮತ್ತು ಅಮೆಜಾನ್ ಅಲೆಕ್ಸಾ ಧ್ವನಿ ಸಹಾಯಕಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.ಇದರೊಂದಿಗೆ ನಿಮ್ಮ ಧ್ವನಿಯೊಂದಿಗೆ ಟಿವಿ ಮತ್ತು ಇತರ ಗೃಹೋಪಯೋಗಿ ಉಪಕರಣಗಳನ್ನು ನಿಯಂತ್ರಿಸಬಹುದು.ಕ್ರಿಸ್ಟಲ್ 4K ಡೈನಾಮಿಕ್ ಟಿವಿ ತುಂಬಾ ಸ್ಲಿಮ್ ಮತ್ತು ನಯವಾದ ವಿನ್ಯಾಸವನ್ನು ಹೊಂದಿದೆ.ಆದ್ದರಿಂದ ಇದು ಯಾವುದೇ ಕೋಣೆಯಲ್ಲಿ ಬೇಕಾದರೂ ಚೆಂದವಾಗಿ ಕಾಣುತ್ತದೆ.ಸ್ಯಾಮ್‌ಸಂಗ್ ಟಿವಿ ಜೊತೆಗೆ ಪ್ಲಸ್ ಟಿವಿ ಕೂಡಾ ಲಭ್ಯವಿದೆ. ಇದರ ಮೂಲಕ ನೀವು ಯಾವುದೇ ಚಂದಾದಾರಿಕೆ ಅಥವಾ ಸೆಟಪ್ ಇಲ್ಲದೆ ಅನೇಕ ಉಚಿತ ಚಾನಲ್‌ಗಳನ್ನು ವೀಕ್ಷಿಸಬಹುದು.ಈ ಚಾನಲ್‌ಗಳಲ್ಲಿ ನೀವು ಸುದ್ದಿ,ಕ್ರೀಡೆ ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು.
ಈ ಟಿವಿಯಲ್ಲಿ ಹಲವು ಹೊಸ ಸೌಂಡ್ ತಂತ್ರಜ್ಞಾನಗಳಿದ್ದು ಅದು ಧ್ವನಿಯನ್ನು ಉತ್ತಮಗೊಳಿಸುತ್ತದೆ.OTS Lite ಎಂಬ ತಂತ್ರಜ್ಞಾನದಿಂದ ಟಿವಿ ಸ್ಕ್ರೀನ್ ಮೇಲಿರುವ ವಸ್ತುವಿನಿಂದಲೇ ಸೌಂಡ್ ಬರುವಂಥ ಅನುಭವ ಆಗುತ್ತದೆ.ಕ್ಯೂ-ಸಿಂಫನಿ ಎಂಬ ತಂತ್ರಜ್ಞಾನದೊಂದಿಗೆ,ಟಿವಿಯ ಬಿಲ್ಟ್-ಇನ್ ಸ್ಪೀಕರ್‌ಗಳು ಮತ್ತು ಸೌಂಡ್‌ಬಾರ್ ಇನ್ನೂ ಉತ್ತಮ ಧ್ವನಿಯನ್ನು ಉತ್ಪಾದಿಸುತ್ತದೆ.ಅಡಾಪ್ಟಿವ್ ಸೌಂಡ್ ತಂತ್ರಜ್ಞಾನದೊಂದಿಗೆ,ಟಿವಿಯ ಧ್ವನಿಯು ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ.
ಭಾರತದಲ್ಲಿ 2024 ಕ್ರಿಸ್ಟಲ್ 4K ಡೈನಾಮಿಕ್ ಟಿವಿ ಬೆಲೆ :
ಹೊಸ Samsung TV ಎರಡು ಗಾತ್ರಗಳಲ್ಲಿ ಬರುತ್ತದೆ. 43 ಇಂಚುಗಳು ಮತ್ತು 55 ಇಂಚುಗಳಲ್ಲಿ ಈ ಟಿವಿ ಲಭ್ಯವಿದೆ. ಸಣ್ಣ ಟಿವಿ ಬೆಲೆ 41,990 ರೂ. ಮತ್ತು ದೊಡ್ಡ ಟಿವಿ ಬೆಲೆ 49,990 ರೂ. ಈ ಟಿವಿಗಳನ್ನು Samsung ವೆಬ್‌ಸೈಟ್ ಅಥವಾ Amazon ನಿಂದ ಖರೀದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.