Jio anniversary offer : ಇಂದಿನಿಂದ ಐದು ದಿನಗಳವರೆಗೆ ರಿಚಾರ್ಜ್ ಮಾಡಿದರೆ ಸಿಗುವುದು ಉಚಿತ ಡೇಟಾ ಮತ್ತು OTT!ವರ್ಷಪೂರ್ತಿ ಬಳಸಬಹುದು ನಾನ್ ಸ್ಟಾಪ್ ಇಂಟರ್ನೆಟ್

ಜಿಯೋ ತನ್ನ ತನ್ನ 8 ನೇ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. 

Written by - Ranjitha R K | Last Updated : Sep 5, 2024, 02:57 PM IST
  • ರಿಲಯನ್ಸ್ ಜಿಯೋ ತನ್ನ ಮೊಬೈಲ್ ಬಳಕೆದಾರರಿಗೆ ಕೆಲವು ವಿಶೇಷ ಕೊಡುಗೆಗಳನ್ನು ತಂದಿದೆ.
  • 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಕೊಡುಗೆಗಳನ್ನು ತಂದಿದೆ.
  • ಆಯ್ದ ರೀಚಾರ್ಜ್ ಯೋಜನೆಗಳಲ್ಲಿ ಮಾತ್ರ ಲಭ್ಯವಿರಲಿದೆ.
Jio anniversary offer : ಇಂದಿನಿಂದ ಐದು ದಿನಗಳವರೆಗೆ ರಿಚಾರ್ಜ್ ಮಾಡಿದರೆ ಸಿಗುವುದು ಉಚಿತ ಡೇಟಾ ಮತ್ತು OTT!ವರ್ಷಪೂರ್ತಿ ಬಳಸಬಹುದು ನಾನ್ ಸ್ಟಾಪ್ ಇಂಟರ್ನೆಟ್  title=

ಬೆಂಗಳೂರು : ರಿಲಯನ್ಸ್ ಜಿಯೋ ತನ್ನ ಮೊಬೈಲ್ ಬಳಕೆದಾರರಿಗೆ ಕೆಲವು ವಿಶೇಷ ಕೊಡುಗೆಗಳನ್ನು ತಂದಿದೆ.ಕಂಪನಿಯು ತನ್ನ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಕೊಡುಗೆಗಳನ್ನು ತಂದಿದೆ.ಈ ಕೊಡುಗೆಗಳು ಕೆಲವು ದಿನಗಳವರೆಗೆ ಮಾತ್ರ ಮತ್ತು ಆಯ್ದ ರೀಚಾರ್ಜ್ ಯೋಜನೆಗಳಲ್ಲಿ ಮಾತ್ರ ಲಭ್ಯವಿರಲಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ  ಇಂದಿನಿಂದ ಅಂದರೆ ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 10 ರ ನಡುವೆ ರೀಚಾರ್ಜ್ ಮಾಡಿದರೆ 700 ರೂಪಾಯಿ ಲಾಭವನ್ನು ಪಡೆಯಬಹುದು. ಈ ಕೊಡುಗೆಯು 899 ರೂ., 999 ರೂಪಾಯಿಯ ಮೂರು ತಿಂಗಳ ಯೋಜನೆಗಳು ಮತ್ತು 3599 ರೂಪಾಯಿಯ ಒಂದು ವರ್ಷದ ಯೋಜನೆಯಲ್ಲಿ ಮಾತ್ರ ಲಭ್ಯವಿರುತ್ತದೆ. 

ಜಿಯೋ ವಾರ್ಷಿಕೋತ್ಸವದ ಕೊಡುಗೆ :
ಆಯ್ದ ಪ್ಲಾನ್‌ಗಳಿಂದ ರೀಚಾರ್ಜ್ ಮಾಡುವ ಬಳಕೆದಾರರು 700 ರೂ. ಲಾಭವನ್ನು ಪಡೆಯುತ್ತಾರೆ.ಇದರಲ್ಲಿ, 10 OTT ಅಪ್ಲಿಕೇಶನ್‌ಗಳ ಚಂದಾದಾರಿಕೆ ಮತ್ತು 28 ದಿನಗಳವರೆಗೆ  10GB ಡೇಟಾ ಲಭ್ಯವಿರುತ್ತದೆ. ಇದರ ಬೆಲೆ 175 ರೂ.ಇದಲ್ಲದೆ, ಜಿಯೋ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ 3 ತಿಂಗಳವರೆಗೆ Zomato ಗೋಲ್ಡ್ ಸದಸ್ಯತ್ವವನ್ನು ಪಡೆಯುತ್ತಾರೆ.ಅಲ್ಲದೆ, ನೀವು AJIO ನಲ್ಲಿ 2999 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಖರೀದಿಸಿದರೆ 500 ರೂ.ವೋಚರ್ ಸಿಗುತ್ತದೆ. 

ಇದನ್ನೂ ಓದಿ : iPhone 15 Pro Max ಮೇಲೆ ಭಾರೀ ಡಿಸ್ಕೌಂಟ್ !ಇಷ್ಟೊಂದು ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಸಿಗುತ್ತಿರುವುದು ಈ ಮಳಿಗೆಯಲ್ಲಿ ಮಾತ್ರ !

ಜಿಯೋ 899 ರೂ. ರೀಚಾರ್ಜ್ ಯೋಜನೆ :
ಈ ಯೋಜನೆಯು  3 ತಿಂಗಳವರೆಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ.ಇದು ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ.ಈ ಯೋಜನೆಯೊಂದಿಗೆ ನೀವು 20GB ಹೆಚ್ಚುವರಿ ಡೇಟಾ ಮತ್ತು ಅನಿಯಮಿತ 5G ಡೇಟಾ ಸಿಗುತ್ತದೆ. 

ಜಿಯೋ  999 ರೂ. ರೀಚಾರ್ಜ್ ಯೋಜನೆ : 
ಜಿಯೋದ  999 ರೂ. ಪ್ಲಾನ್ 98 ದಿನಗಳವರೆಗೆ ಇರುತ್ತದೆ.ಇದರಲ್ಲಿ, ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ.ಇದು ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ.ಇದು 98 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿಯೂ ಅನಿಯಮಿತ 5G ಡೇಟಾ ಸಿಗುತ್ತದೆ. 

ಇದನ್ನೂ ಓದಿ : ಅತ್ಯಂತ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Samsung Galaxy A06 ಸ್ಮಾರ್ಟ್‌ಫೋನ್

ಜಿಯೋ  3,599 ರೂ. ರೀಚಾರ್ಜ್ ಯೋಜನೆ : 
ಜಿಯೋದ 3,599 ರೂ ಪ್ಲಾನ್ 356 ದಿನಗಳವರೆಗೆ ಇರುತ್ತದೆ.ಇದರಲ್ಲಿ, ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ. ಇದು ಪ್ರತಿದಿನ 2.5GB ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿಯೂ ಅನಿಯಮಿತ 5G ಡೇಟಾ  ಸಿಗುವುದು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News