ನವದೆಹಲಿ: Samsung Launches Cheapest Smartphone - ಒಂದು ವೇಳೆ ನೀವೂ ಕೂಡ ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಸ್ಮಾರ್ಟ್ ಫೋನ್ ಖರೀದಿಸಲು ಬಯಸುತ್ತಿದ್ದರೆ, ಇದು ನಿಮಗೆ ಉತ್ತಮ ಸಮಯವಾಗಿರಲಿದೆ. ಏಕೆಂದರೆ ಕೊರಿಯನ್ ಸ್ಮಾರ್ಟ್ ಫೋನ್ ತಯಾರಕ ಕಂಪನಿ Samsung ತನ್ನ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಆಗಿರುವ Samsung Galaxy M02 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹ್ಯಾಂಡ್ ಸೆಟ್ ಬೆಲೆಯನ್ನು ಕಂಪನಿ ತೀರಾ ಕಡಿಮೆ ನಿಗದಿಪಡಿಸಿದೆ. ಇಷ್ಟೊಂದು ಕಡಿಮೆ ಬೆಲೆಗೆ ಈ ಫೋನ್ ನಲ್ಲಿ ಯಾವ ಯಾವ ವೈಶಿಷ್ಟ್ಯಗಳು ಸಿಗಲಿವೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.


ಬೆಲೆ 7000 ಕ್ಕಿಂತಲೂ ಕಡಿಮೆಯಾಗಿದೆ
ನಮ್ಮ ವೆಬ್ ಸೈಟ್ ನ ಸಹಯೋಗಿ ವೆಬ್ ಸೈಟ್ ಆಗಿರುವ bgr.in ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, Samsung Galaxy M02 ಸ್ಮಾರ್ಟ್ ಫೋನ್ ನ 2GB+32GB ಸ್ಟೋರೇಜ್ ವೇರಿಯಂಟ್ ಬೆಲೆ ರೂ.6,999 ನಿಗದಿಪಡಿಸಲಾಗಿದೆ. ಇದರ ಇನ್ನೊಂದು ವೇರಿಯಂಟ್ 3GB+32GB ಬೆಲೆಯನ್ನು 7,499 ನಿಗದಿಪಡಿಸಲಾಗಿದೆ. ಈ ಫೋನ್ ಅಮೆಜಾನ್ ಹಾಗೋಒ ಸ್ಯಾಮ್ಸಂಗ್ ಇಂಡಿಯಾ ಆನ್ಲೈನ್ ಸ್ಟೋರ್ ಮಾಧ್ಯಮದ ಮೂಲಕ ಸೇಲ್ ಗಾಗಿ ಶೀಘ್ರವೇ ತೆರೆದುಕೊಳ್ಳಲಿದೆ. ಫೆಬ್ರುವರಿ 9 ರಿಂದ ಈ ಫೋನ್ ನ ಮಾರಾಟ ಆರಂಭಗೊಳ್ಳಲಿದೆ.


ತುಂಬಾ ಪವರ್ ಫುಲ್ ಬ್ಯಾಟರಿ ಇದರಲ್ಲಿದೆ
ಮೂಲಗಳಿಂದ ದೊರೆತ Samsung Galaxy M02 ಸ್ಮಾರ್ಟ್ ಫೋನ್ ನಲ್ಲಿ 5000 mAh ಬ್ಯಾಟರಿಯೊಂದಿಗೆ 32 GB ಆನ್ ಬೋರ್ಡ್ ಸ್ಟೋರೇಜ್ ನೀಡಲಾಗಿದೆ. ಇದಲ್ಲದೆ 13 MP ಕ್ಯಾಮರಾ ಹಾಗೂ 6.5 ಇಂಚಿನ ಪರದೆಯ ಹೊತೆಗೆ ಹಲವು ವೈಶಿಷ್ಟ್ಯಗಳನ್ನೂ ನೀಡಲಾಗಿದೆ. ಇದರಲ್ಲಿ ನಾಲ್ಕು ಕಲರ್ ವೇರಿಯಂಟ್ ಗಳಿವೆ. ಬ್ಲಾಕ್, ಬ್ಲೂ, ಗ್ರೇ ಹಾಗೂ ರೆಡ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿರಲಿದೆ.


ಇದನ್ನು ಓದಿ- Samsung Mobile On Rent: ಬಾಡಿಗೆಯ ಮೇಲೆ ಪಡೆಯಿರಿ Galaxy Smartphones, Samsung ಆರಂಭಿಸಿದೆ ಈ ಕಾರ್ಯಕ್ರಮ


ವೈಶಿಷ್ಟ್ಯಗಳೇನು ?
Samsung Galaxy M02 ಸ್ಮಾರ್ಟ್ ಫೋನ್ ನಲ್ಲಿ 6.5 ಇಂಚಿನ HD+Infinity-V  ಡಿಸ್ಪ್ಲೇ ನೀಡಲಾಗಿದೆ. ಈ ಫೋನ್ ನಲ್ಲಿ MediaTek ಪ್ರೋಸೆಸರ್ ಇದೆ. ಈ ಫೋನ್ ನ ಆಂತರಿಕ ಮೆಮೊರಿಯನ್ನು SD ಕಾರ್ಡ್ ಬಳಸಿ 1 TB ವರೆಗೆ ಹೆಚ್ಚಿಸಬಹುದು. ಈ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ Android 10 ಆಧಾರಿತ One UI ಮೇಲೆ ಕಾರ್ಯನಿರ್ವಹಿಸುತ್ತದೆ.


ಇದನ್ನು ಓದಿ- Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?


Samsung Galaxy M02 ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 13 ಮೆಗಾಪಿಕ್ಸಲ್ ಮೆನ್ ಕ್ಯಾಮರಾ ಹಾಗೂ 2 ಮೆಗಾಪಿಕ್ಸಲ್ ಮೈಕ್ರೋ ಸೆನ್ಸರ್ ಕ್ಯಾಮರಾ ನೀಡಲಾಗಿದೆ. ಸೇಲ್ಫಿ ಹಾಗೂ ವಿಡಿಯೋ ಕಾಲಿಂಗ್ ಗಳಂತಹ ಅವಶ್ಯಕತೆಗೆ ಫೋನ್ ನ ಮುಂಭಾಗದಲ್ಲಿ 5 MP ಕ್ಯಾಮೆರಾ ನೀಡಲಾಗಿದೆ.


ಇದನ್ನು ಓದಿ- Samsung New Launch 2021: ಫೆ.2ರಂದು ಬಿಡುಗಡೆಯಾಗಲಿದೆ ಅತ್ಯಂತ ಅಗ್ಗದ Samsung 5000 mAh ಬ್ಯಾಟರಿ ಹೊಂದಿದ ಫೋನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.