5G Smartphone ಬೆಲೆ ಇಳಿಸಿದ Samsung ! ಈಗ Samsung Galaxy M14 ಸಿಗುತ್ತದೆ ಈ ದರದಲ್ಲಿ !
Samsung Galaxy M14 PriceCut In India:ಸ್ಯಾಮ್ಸಂಗ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾದ ತನ್ನ Galaxy M14 ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆ ಮಾಡಿದೆ.
Samsung Galaxy M14 PriceCut In India: ಕೈಗೆಟುಕುವ ಬೆಲೆಯಲ್ಲಿ Samsung Galaxy M14 ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ, ಈ ಫೋನ್ ಖರೀದಿಸಲು ಇದು ಉತ್ತಮ ಸಮಯವಾಗಿರುತ್ತದೆ. ಸ್ಯಾಮ್ಸಂಗ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾದ ತನ್ನ Galaxy M14 ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಬರುತ್ತಿದ್ದು, ಎರಡರ ಬೆಲೆಯನ್ನು 1,000 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.
ಹೊಸ ಬೆಲೆ :
ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ Samsung Galaxy M14 ಎರಡು ರೂಪಾಂತರಗಳಲ್ಲಿ ಬರುತ್ತದೆ. 4GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್ ಹೀಗೆ ಎರಡು ರೂಪಾಂತರಗಳಲ್ಲಿ ಈ ಫೋನ್ ಲಭ್ಯವಿರುತ್ತದೆ. ಅವುಗಳ ಬೆಲೆ ಕ್ರಮವಾಗಿ 13,490 ಮತ್ತು 14,990 ರೂ. Samsung Galaxy M14 ಸ್ಮಾರ್ಟ್‌ಫೋನ್ ಬೆಲೆಯಲ್ಲಿ 1,000 ರೂಪಾಯಿಯನ್ನು ಕಡಿತಗೊಳಿಸಲಾಗಿದೆ. ಈ ಹಿಂದೆ 64GB ಫೋನ್ 13,490 ರೂಪಾಯಿಗೆ ಮತ್ತು 128GB ಫೋನ್ 14,990 ರೂ.ಗೆ ಲಭ್ಯವಿತ್ತು. ಈಗ 64GB ಸ್ಮಾರ್ಟ್ ಫೋನ್ 12,490 ರೂ.ಗೆ ಮತ್ತು 128GB ಸಂರ್ತ್ ಫೋನ್ ರೂ.13,990ಗೆ ಸಿಗುತ್ತದೆ. ಈ ಸ್ಮಾರ್ಟ್ಫೋನ್ ಐಸಿ ಸಿಲ್ವರ್, ಬೆರ್ರಿ ಬ್ಲೂ ಮತ್ತು ಸ್ಮೋಕಿ ಟೀಲ್ ಹೀಗೆ ಮೂರು ಬಣ್ಣಗಳಲ್ಲಿ ಬರುತ್ತದೆ.
ಇದನ್ನೂ ಓದಿ : ಈ ರಸ್ತೆಗಳಲ್ಲಿ ಓಡುತ್ತಿದ್ದಂತೆಯೇ ಚಾರ್ಜ್ ಆಗುವುದು ಎಲೆಕ್ಟ್ರಿಕ್ ಕಾರು! ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ
Samsung Galaxy M14 ವಿಶೇಷಣಗಳು :
Samsung Galaxy M14 5G ಸ್ಮಾರ್ಟ್‌ಫೋನ್ ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ದೊಡ್ಡದಾದ ಮತ್ತು ಸ್ಪಷ್ಟವಾದ 6.6-ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ. (FHD+ LCD) ಇದು ಸ್ಮೂತ್ ಆಗಿ ಚಲಿಸುತ್ತದೆ (90Hz ರಿಫ್ರೆಶ್ ದರ). ಮೇಲ್ಭಾಗದಲ್ಲಿ ಸಣ್ಣ ಕಟೌಟ್ ಇದ್ದು ಅದರಲ್ಲಿ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಫೋನ್ ಚಲಾಯಿಸಲು, ಶಕ್ತಿಯುತ ಪ್ರೊಸೆಸರ್ (Exynos 1330) ಮತ್ತು ಗ್ರಾಫಿಕ್ಸ್ ಚಿಪ್ (ಮಾಲಿ-G68 MP2) ಅನ್ನು ಒದಗಿಸಲಾಗಿದೆ.
Samsung Galaxy M14 ಕ್ಯಾಮೆರಾ ಮತ್ತು ಬ್ಯಾಟರಿ :
ಈ ಫೋನ್ ನಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ. 50MP ಮುಖ್ಯ ಕ್ಯಾಮೆರಾ, ಕ್ಲೋಸ್-ಅಪ್ ಫೋಟೋಗಳನ್ನು ತೆಗೆದುಕೊಳ್ಳಲು 2MP ಕ್ಯಾಮೆರಾ ಮತ್ತು ಪೋರ್ಟ್ರೇಟ್ ಮೋಡ್‌ಗಾಗಿ 2MP ಕ್ಯಾಮೆರಾ. ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ಇದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 6000mAh ಬ್ಯಾಟರಿಯನ್ನು ಹೊಂದಿದೆ. ಅದು ಬಹಳ ಬೇಗನೆ ಚಾರ್ಜ್ ಆಗುತ್ತದೆ.
ಇದನ್ನೂ ಓದಿ :Samsung Smart TVಗಳಲ್ಲಿ ಇನ್ಮುಂದೆ ಇರಲ್ಲ Google Assistant ವೈಶಿಷ್ಟ್ಯ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ